ರೈತರು ಹಾಗೂ ವಿತರಕರಿಗಾಗಿ ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ಸಹಾಯವಾಣಿ ಆರಂಭ

ಬೆಂಗಳೂರಿನ ಡೈರಿ ವೃತ್ತದ ಬಳಿ ಇರುವ ಬಮೂಲ್ ಕಚೇರಿಯಲ್ಲಿ ಸುರೇಶ್ ಅವರು ಶುಕ್ರವಾರ ಸಹಾಯವಾಣಿಗೆ ಚಾಲನೆ ನೀಡಿ ರೈತರು ಹಾಗೂ ವಿತರಕರ ಕರೆ ಸ್ವೀಕರಿಸಿ ಮಾತನಾಡಿದರು.
Bamul (file pic)
ಬಮೂಲ್ online desk
Updated on

ಬೆಂಗಳೂರು: ರೈತರು ಹಾಗೂ ವಿತರಕರ ಕುಂದುಕೊರತೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಬಮೂಲ್ ಸಂಸ್ಥೆ ಸಹಾಯವಾಣಿಯನ್ನು ಆರಂಭಿಸಿದ್ದು, ಅಧ್ಯಕ್ಷರಾದ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಮೊದಲ ಕರೆ ಸ್ವೀಕರಿಸಿ ಚಾಲನೆ ನೀಡಿದರು.

ಬೆಂಗಳೂರಿನ ಡೈರಿ ವೃತ್ತದ ಬಳಿ ಇರುವ ಬಮೂಲ್ ಕಚೇರಿಯಲ್ಲಿ ಸುರೇಶ್ ಅವರು ಶುಕ್ರವಾರ ಸಹಾಯವಾಣಿಗೆ ಚಾಲನೆ ನೀಡಿ ರೈತರು ಹಾಗೂ ವಿತರಕರ ಕರೆ ಸ್ವೀಕರಿಸಿ ಮಾತನಾಡಿದರು.

ವಿತರಕರು ಮಾಡಿದ ಕರೆ ಸ್ವೀಕರಿಸಿ ಅವರ ಅಹವಾಲು ಸ್ವೀಕರಿಸಿ ಅದಕ್ಕೆ ಸ್ಪಂದಿಸಿದರು. ಈ ವೇಳೆ “5 ಗಂಟೆಯೊಳಗೆ ನಿಮಗೆ ಹಾಲು ಪೂರೈಸಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದ್ದು, ಮುಂದಿನ ಒಂದು ತಿಂಗಳ ಒಳಗಾಗಿ ನಿಮಗೆ ಸರಿಯಾದ ಸಮಯಕ್ಕೆ ಹಾಲು ತಲುಪಲಿದೆ” ಎಂದು ಭರವಸೆ ನೀಡಿದರು.

Bamul (file pic)
ಬಮೂಲ್ ನಿಂದ ಹಾಲು ಉತ್ಪಾದಕರ ಸಬ್ಸಿಡಿಗೆ ಕತ್ತರಿ: ಸಿಎಂ ಸಿದ್ದರಾಮಯ್ಯ ಗರಂ, ಕಡಿತಗೊಳಿಸದಂತೆ ಎಚ್ಚರಿಕೆ

“ನೀವು ನಿತ್ಯ 10 ಲೀಟರ್ ಹಾಲು ಮಾರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿ. ನಿಮಗೆ ಅಗತ್ಯವಿರುವ ಪ್ರಮಾಣದ ಹಾಲು ಹಾಗೂ ಇತರೆ ಉತ್ಪನ್ನಗಳನ್ನು ನಾವು ಪೂರೈಕೆ ಮಾಡುತ್ತೇವೆ. ಕೇವಲ ಹಾಲಿನ ಮಾರಾಟದ ಬಗ್ಗೆ ಮಾತ್ರ ಗಮನ ಹರಿಸಬೇಡಿ, ನಂದಿನಿ ತುಪ್ಪ, ಸಿಹಿ ತಿನಿಸುಗಳನ್ನು ಮಾರಾಟ ಮಾಡುವತ್ತ ಹೆಚ್ಚು ಗಮನಹರಿಸಿ. ನಿಮಗೆ ಸ್ವಾತಂತ್ರ್ಯ ದಿನಾಚಾರಣೆ ಶುಭಾಶಯಗಳು” ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com