
ಬೆಂಗಳೂರು: ಪವಿತ್ರ ಧರ್ಮಸ್ಥಳ ದೇವಾಲಯದ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ಹರಡುವವರ ವಿರುದ್ಧ ರಾಜ್ಯ ಸರ್ಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕೆಂದು ವಿರೋಧ ಪಕ್ಷ ಬಿಜೆಪಿ ಒತ್ತಾಯಿಸಿದೆ.
ಧರ್ಮಸ್ಥಳ ವಿಷಯದ ಕುರಿತು ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಧರ್ಮಸ್ಥಳ ಪ್ರತಿಯೊಬ್ಬ ಹಿಂದೂವಿಗೆ ಪವಿತ್ರ ಸ್ಥಳವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ತಪ್ಪು ಮಾಹಿತಿಯನ್ನು ಹರಡುವ ಮೂಲಕ ಈ ನಂಬಿಕೆ ಮತ್ತು ಧರ್ಮಸ್ಥಳದ ಖ್ಯಾತಿಗೆ ಹಾನಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ಈ ಕೃತ್ಯದಲ್ಲಿ ಭಾಗಿಯಾಗಿರುವ ಜನರ ಬಗ್ಗೆ ಸರ್ಕಾರವು ಮೃದು ಧೋರಣೆ ತೋರುತ್ತಿದೆ, ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿರುವ ತನಿಖೆಯನ್ನು ತಮ್ಮ ಪಕ್ಷ ವಿರೋಧಿಸುವುದಿಲ್ಲ. ಆದರೆ ವಾಕ್ ಸ್ವಾತಂತ್ರ್ಯ ಹೆಸರಿನಲ್ಲಿ, ಧರ್ಮಸ್ಥಳದ ಖ್ಯಾತಿಗೆ ಹಾನಿ ಮಾಡಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ" ಎಂದು ಅವರು ಹೇಳಿದರು, ತಪ್ಪು ಮಾಹಿತಿಯ ಹರಡುವಿಕೆ ನಿಯಂತ್ರಿಸಲು ಸರ್ಕಾರ ಯತ್ನಿಸುತ್ತಿಲ್ಲ ಎಂದರು.
ಇದಲ್ಲದೆ, ಸಾಕ್ಷಿ-ದೂರುದಾರರ ಮೇಲೆ ನಾರ್ಕೋ ಪರೀಕ್ಷೆಗೆ ದಕ್ಷಿಣ ಕನ್ನಡ ಎಸ್‌ಪಿ ಒತ್ತಾಯಿಸಿದ್ದಾರೆ. ಒಂದು ಮಂಪರು ಪರೀಕ್ಷೆ ನಡೆದರೆ ಸತ್ಯ ಹೊರಬರುತ್ತದೆ ಎಂದು ಸುನೀಲ್ ಹೇಳಿದರು. ಸಾಕ್ಷಿ-ದೂರುದಾರರು ಪೊಲೀಸರನ್ನು ದಾರಿ ತಪ್ಪಿಸುತ್ತಿದ್ದಾರೆ. "ಸರ್ಕಾರವು ಎಸ್‌ಐಟಿ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಿ, ಮತ್ತಷ್ಟು ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಏಕೆ ಸಾಧ್ಯವಿಲ್ಲ?" ಸುನಿಲ್ ಹೇಳಿದರು.
ಬರೀ ಗುಂಡಿ ಅಗೆಯುವ ಕೆಲಸವನ್ನು ಮಾಡಿದರೆ ಸಾಲದು. ನಮ್ಮಲ್ಲಿ ಸಾಕ್ಷಿಯಿದೆ ಎಂದು ಹೇಳಿಕೊಂಡು ಬಂದವರೆನ್ನೆಲ್ಲಾ ತನಿಖೆಗೆ ಒಳಪಡಿಸಬೇಕು. ಏನು ತನಿಖೆ ನಡೆಸುತ್ತಿದೆ ಸರ್ಕಾರ, ಯಾವ ದಾರಿಯಲ್ಲಿ ಸಾಗುತ್ತಿದೆ, ಮುಸುಕುದಾರ ಯಾರೆಂದು ಗೊತ್ತಿಲ್ಲ, ಅವನು ಹೇಳಿದ ಕಡೆಯಿಲ್ಲಾ ಗುಂಡಿ ಅಗೆದುಕೊಂಡು ಕೂರುತ್ತೀರಾ ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರದ ಸಮಯದಲ್ಲಿ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು, ಅವರು ಒಂದು ಫೇಸ್‌ಬುಕ್ ಪೋಸ್ಟ್ ಸಮಾಜದ ಒಂದು ವರ್ಗದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿದ್ದರು ಎಂದು ಸುನಿಲ್ ನೆನಪಿಸಿಕೊಂಡರು.
ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮಸ್ಥಳದ ಪೋಸ್ಟ್‌ಗಳನ್ನು ಪರಿಶೀಲಿಸಬೇಕು... ಅವರು ಪವಿತ್ರ ಪಟ್ಟಣದ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಇದು ತುಂಬಾ ನೋವುಂಟು ಮಾಡುತ್ತದೆ? ಎಂದರು. ಎಸ್‌ಡಿಪಿಐ ಪ್ರತಿಭಟನೆಯನ್ನು ಖಂಡಿಸಿದ ಸುನೀಲ್ ಕುಮಾರ್ ನಡೆಯುತ್ತಿರುವ ತನಿಖೆ ಮತ್ತು ಧರ್ಮಸ್ಥಳದೊಂದಿಗೆ ಎಸ್‌ಡಿಪಿಐನ ಸಂಬಂಧವೇನು? ಇದನ್ನೂ ತನಿಖೆ ಮಾಡಬೇಕಾಗಿದೆ" ಎಂದು ಅವರು ಪ್ರಶ್ನಿಸಿದರು. ಇದರ ಹಿಂದಿರುವ ವ್ಯಕ್ತಿಗಳು ಯಾರು, ಇದೆಲ್ಲವೂ ತನಿಖೆಯ ಮೂಲಕ ಹೊರಗೆ ಬರಲಿ ಎಂದು ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಧರ್ಮಸ್ಥಳದ ನಂಬಿಕೆಗೆ ತೊಂದರೆಯಾಗುತ್ತಿದೆ ಎಂದಾಗಲೂ ಸರ್ಕಾರ ಸುಮ್ಮನಿದೆ. ಸರ್ಕಾರದ ಎಜೆಂಡಾ ಏನು? ಧರ್ಮಸ್ಥಳ ಕ್ಷೇತ್ರದ ಹೆಸರನ್ನು ಹಾಳು ಮಾಡಬೇಕು ಎನ್ನುವ ಅಜೆಂಡಾ ನಿಮ್ಮ ಹೈಕಮಾಂಡಿನಿಂದ ಬಂದಿದೆಯಾ ಎಂದು ಸುನಿಲ್ ಕುಮಾರ್, ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.
Advertisement