
ಬೆಂಗಳೂರು: ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಯು ನಗರದ ಅತ್ಯಂತ ಜನದಟ್ಟಣೆಯ ಪ್ರದೇಶಗಳಲ್ಲಿ ಒಂದಾದ ಹೊಸೂರು ರಸ್ತೆಯ ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿಗೆ ನಿರಾಳತೆಯನ್ನು ತಂದಿದೆ. ಮೆಟ್ರೋ ಮಾರ್ಗದ ಉದ್ಘಾಟನೆಯ ನಂತರ ಒಟ್ಟಾರೆ ಸಂಚಾರ ದಟ್ಟಣೆ ಶೇ. 10 ರಷ್ಟು ಕಡಿಮೆಯಾಗಿದೆ ಎಂದು ವಿಶ್ಲೇಷಣೆಯಿಂದ ತಿಳಿದು ಬಂದಿದೆ.
ಬೆಂಗಳೂರು ಸಂಚಾರ ಪೊಲೀಸ್ (ಬಿಟಿಪಿ) ಯ ಆಸ್ಟ್ರಾಮ್ (ಆಕ್ಷನಬಲ್ ಇಂಟೆಲಿಜೆನ್ಸ್ ಫಾರ್ ಸಸ್ಟೈನಬಲ್ ಟ್ರಾಫಿಕ್ ಮ್ಯಾನೇಜ್ಮೆಂಟ್) ಆಗಸ್ಟ್ 11 ರಂದು ನಡೆಸಿದ ಅಧ್ಯಯನದ ಪ್ರಕಾರ, ಹೊಸೂರು ರಸ್ತೆಯಲ್ಲಿ (ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳವರೆಗೆ 11.5 ಕಿ.ಮೀ) ಸಂಚಾರ ದಟ್ಟಣೆ ಸರಾಸರಿ ಶೇ. 10 ರಷ್ಟು ಕಡಿಮೆಯಾಗಿದೆ.
ಸಂಜೆಯ ಪೀಕ್ ಸಮಯದಲ್ಲಿ (ಸಂಜೆ 4 ರಿಂದ ರಾತ್ರಿ 9 ರವರೆಗೆ) ಶೇ. 32ರಷ್ಟು (ಆರ್‌ವಿ ರಸ್ತೆಯಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣಗಳವರೆಗೆ 21 ಕಿ.ಮೀ) ಇಳಿಕೆ ಕಂಡುಬಂದಿದೆ, ಏಕೆಂದರೆ ಅನೇಕ ಪ್ರಯಾಣಿಕರು ಕೆಲಸದಿಂದ ಹಿಂತಿರುಗುವಾಗ ಮೆಟ್ರೋವನ್ನು ಆರಿಸಿಕೊಂಡರು.
ಆಗಸ್ಟ್ 12 ರಂದು ಬೆಳಗಿನ ಸಂಚಾರ (ಬೆಳಿಗ್ಗೆ 7-11) 22% ರಷ್ಟು ಸಾಧಾರಣ ಕುಸಿತವನ್ನು ತೋರಿಸಿದೆ ಎಂದು ಡಿಸಿಪಿ (ಸಂಚಾರ-ದಕ್ಷಿಣ) ಗೋಪಾಲ್ ಎಂ ಬ್ಯಾಕೋಡ್ ವಿವರಿಸಿದ್ದಾರೆ. ಮೆಟ್ರೋ ಕಾರ್ಯಾಚರಣೆ ಪ್ರಾರಂಭವಾದ ನಂತರ ಹೊಸೂರು ರಸ್ತೆಯ ಹಳದಿ ಮಾರ್ಗದಲ್ಲಿ ಸರಾಸರಿ ಸಂಚಾರ ದಟ್ಟಣೆ 10% ರಷ್ಟು ಕಡಿಮೆಯಾಗಿದೆ.
ಮೆಟ್ರೋ ಸಂಚಾರ ನಿರಂತರವಾಗಿ ಹೆಚ್ಚಾದ ನಂತರ, ಟ್ರಾಫಿಕ್ ದಟ್ಟಣೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು. ನಾವು ಸುಮಾರು ಶೇ. 20 ರಷ್ಟು ಕಡಿತ ನಿರೀಕ್ಷಿಸಿದ್ದೆವು, ಆದರೆ ಸದ್ಯ ಶೇ 1 ರಷ್ಟಿದೆ. ಕೊನೆಯ ಮೈಲಿ ಸಂಪರ್ಕದ ಕೊರತೆಯಿಂದಾಗಿ ಕೆಲವು ಪ್ರಯಾಣಿಕರು ಇನ್ನೂ ಖಾಸಗಿ ವಾಹನಗಳನ್ನು ಆದ್ಯತೆ ನೀಡುತ್ತಿದ್ದಾರೆ.
ಉತ್ತಮ ಫೀಡರ್ ಬಸ್ ಸಂಪರ್ಕವು ಸಹಾಯ ಮಾಡುತ್ತದೆ ಎಂದು ಬ್ಯಾಕೋಡ್ ಹೇಳಿದರು. ಮತ್ತಷ್ಟು ಕಡಿತಗಳನ್ನು ನಿರ್ಣಯಿಸಲು ಮುಂದಿನ ದಿನಗಳಲ್ಲಿ ಮತ್ತೆ ಅಧ್ಯಯನವನ್ನು ನಡೆಸಲಾಗುವುದು ಎಂದು ಅವರು ಹೇಳಿದರು. “ಸಂಜೆ ಸಂಚಾರ ದಟ್ಟಣೆ ಕಡಿಮೆಯಾಗಿದೆ, ಇನ್ನೂ ಬೆಳಿಗ್ಗೆ ಕಚೇರಿಗೆ ಹೋಗುವವರು ಕ್ಯಾಬ್‌ಗಳು, ಆಟೋಗಳನ್ನು ಬಳಸುತ್ತಿರುವುದು ಇದಕ್ಕೆ ಕಾರಣ, ಆದರೆ ಹಿಂದಿರುಗುವಾಗ ಅವರು ಮೆಟ್ರೋಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಹೊಸೂರು ರಸ್ತೆಯ ಮೇಲಿನ ಹಳದಿ ಮಾರ್ಗವು ಈಗಾಗಲೇ ಒತ್ತಡವನ್ನು ಕಡಿಮೆ ಮಾಡಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು. ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುವ ಸಾವಿರಾರು ದೈನಂದಿನ ಪ್ರಯಾಣಿಕರಿಗೆ ಈ ಮಾರ್ಗವು ನೇರವಾಗಿ ಸೇವೆ ಸಲ್ಲಿಸುತ್ತದೆ. ಅವರಲ್ಲಿ ಹಲವರು ಈ ಹಿಂದೆ ಹೊಸೂರು ರಸ್ತೆಯನ್ನು ಹೆಚ್ಚು ಅವಲಂಬಿಸಿದ್ದರು.
ಹೆಚ್ಚಿನ ಪ್ರಯಾಣಿಕರು ಹೊಸ ಮಾರ್ಗಕ್ಕೆ ಹೊಂದಿಕೊಳ್ಳುವುದರಿಂದ ಮೆಟ್ರೋದ ದಟ್ಟಣೆಯ ಮೇಲೆ ಅದರ ಪರಿಣಾಮ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿ ಹೇಳಿದರು. "ಪ್ರಯಾಣಿಕರು ಸಾಮಾನ್ಯವಾಗಿ ಪ್ರಯಾಣ ವಿಧಾನಗಳನ್ನು ಬದಲಾಯಿಸಲು ಕೆಲವು ವಾರಗಳನ್ನು ತೆಗೆದುಕೊಳ್ಳುತ್ತಾರೆ. ಸರಿಯಾದ ಕೊನೆಯ ಮೈಲಿ ಸಂಪರ್ಕದಿಂದ ಮೆಟ್ರೋ ರಸ್ತೆ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಅಧಿಕಾರಿ ಹೇಳಿದರು. ಪ್ರಸ್ತುತ, 12 ಮೆಟ್ರೋ ಫೀಡರ್ ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ.
Advertisement