
ಬೆಂಗಳೂರು: ಮುಂಬರುವ ತಿಂಗಳುಗಳಲ್ಲಿ ಕರ್ನಾಟಕವು ಹಿಂದುಳಿದ ವರ್ಗಗಳ ಆಯೋಗದಿಂದ ಹೊಸ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಂತೆ. ದತ್ತಾಂಶ ಸಂಗ್ರಹ ಪ್ರಕ್ರಿಯೆಯಲ್ಲಿ ತಮ್ಮ ಸಮುದಾಯಕ್ಕೆ ನಿಖರವಾದ ಪ್ರಾತಿನಿಧ್ಯ ಖಚಿತಪಡಿಸಿಕೊಳ್ಳಲು ಲಿಂಗಾಯತ ನಾಯಕರು ಸಜ್ಜಾಗಿದ್ದಾರೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಎಲ್ಲಾ ಲಿಂಗಾಯತ ಸಚಿವರು ಮತ್ತು ಶಾಸಕರನ್ನು ಒಳಗೊಂಡ ಪೂರ್ವಭಾವಿ ಸಭೆ ಕರೆದಿದ್ದಾರೆ. ಶಾಸಕರು ತಮ್ಮ ಕ್ಷೇತ್ರಗಳಿಗೆ ಮರಳುವ ಮೊದಲು, ಅಂದರೆ ವಿಧಾನಸಭೆ ಅಧಿವೇಶನದ ನಂತರ ವಿಧಾನಸೌಧದ ಬಳಿಯ ಹೋಟೆಲ್‌ನಲ್ಲಿ ನಡೆಯಲಿರುವ ಮುಚ್ಚಿದ ಬಾಗಿಲಿನ ಸಭೆ ನಡೆಯಲಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಸಭೆಯ ಹಿಂದಿನ ಉದ್ದೇಶದ ಬಗ್ಗೆ ಮಾತನಾಡಿದ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ನಾವು ಹಿಂದೆ ಚರ್ಚೆಗಳನ್ನು ನಡೆಸಿದ್ದೇವೆ, ಆದರೆ ಮುಂದಿನ ಸುತ್ತಿನ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯು ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿರುವುದರಿಂದ, ಸಮುದಾಯವು ಒಗ್ಗಟ್ಟಾಗುವುದು ಮುಖ್ಯವಾಗಿದೆ ಎಂದಿದ್ದಾರೆ.
ಸಮುದಾಯದ ಸದಸ್ಯರು ಸಮೀಕ್ಷೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ವಿಧಾನವನ್ನು ಸುಗಮಗೊಳಿಸುವುದು ಪ್ರಮುಖ ಉದ್ದೇಶವಾಗಿದೆ. ಕಳೆದ ಸುತ್ತಿನಲ್ಲಿ ಜನರು ತಮ್ಮನ್ನು ಉಪ-ಜಾತಿ ಅಥವಾ ಲಿಂಗವಂತ, ಲಿಂಗಧಾರ ಅಥವಾ ವೀರಶೈವ ಮತ್ತು ಲಿಂಗಾಯತದ ವಿಭಿನ್ನ ಸಂಯೋಜನೆಗಳ ಮೂಲಕ ಮಾತ್ರ ಗುರುತಿಸಿಕೊಳ್ಳುವ ಸಮಸ್ಯೆಗಳಿದ್ದವು.
ಇದರಿಂದ ಗೊಂದಲ ಮತ್ತು ಅಸಮಂಜಸ ದತ್ತಾಂಶಕ್ಕೆ ಕಾರಣವಾಯಿತು. ನಾವು ಈಗ ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ವೀರಶೈವ-ಲಿಂಗಾಯತ ಎಂದು, ಜಾತಿಯನ್ನು ಲಿಂಗಾಯತ ಅಥವಾ ವೀರಶೈವ ಎಂದು ಅನ್ವಯವಾಗುವಂತೆ ಹಾಗೂ ಪಂಚಮಸಾಲಿ, ನೋನಬಾ, ಬಣಜಿಗ ಮತ್ತು ಸದರ್ ನಂತಹ ಅವರ ಉಪ-ಜಾತಿಯನ್ನು ಸ್ಪಷ್ಟವಾಗಿ ನಮೂದಿಸಲು ಸಲಹೆ ನೀಡುತ್ತಿದ್ದೇವೆ ಎಂದಿದ್ದಾರೆ.
ಮಹಾಸಭಾ ದಾಖಲೆಗಳು ರಾಜ್ಯ ಶಾಸಕಾಂಗದಲ್ಲಿ ಲಿಂಗಾಯತ ಸಮುದಾಯವು ಉತ್ತಮವಾಗಿ ಪ್ರಾತಿನಿಧ್ಯ ಹೊಂದಿದೆ ಎಂದು ಸೂಚಿಸುತ್ತದೆ, ಇದರಲ್ಲಿ ಪರಿಷತ್ತಿನ ಅಧ್ಯಕ್ಷ ಬಸವರಾಜ ಹೊರಟ್ಟಿ ಸೇರಿದಂತೆ ಏಳು ಸಚಿವರು, 55 ಶಾಸಕರು ಮತ್ತು 16 ಎಂಎಲ್‌ಸಿಗಳು ಇದ್ದಾರೆ. ಅವರು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳಲ್ಲಿದ್ದಾರೆ .
ರಾಜ್ಯದ ಮತ್ತೊಂದು ಪ್ರಬಲ ಸಮುದಾಯವಾಗಿರುವ ಒಕ್ಕಲಿಗರು ರಾಜ್ಯ ಮತ್ತು ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮಗಳನ್ನು ಸಹ ಪ್ರಾರಂಭಿಸಿದ್ದಾರೆ. ಉಪ-ಜಾತಿ ಸಂಬಂಧಗಳನ್ನು ಲೆಕ್ಕಿಸದೆ, ಸಮುದಾಯದ ನಾಯಕರು ತಮ್ಮ ಸದಸ್ಯರು ತಮ್ಮ ಗುರುತನ್ನು ಏಕರೂಪವಾಗಿ ವರದಿ ಮಾಡುವಂತೆ ಒತ್ತಾಯಿಸಿದ್ದಾರೆ. ಎರಡೂ ಸಮುದಾಯಗಳ ಪ್ರತಿನಿಧಿಗಳು ಸಂಘಟಿತ ವಿಧಾನವನ್ನು ಚರ್ಚಿಸಲು ಹಿಂದೆ ಭೇಟಿಯಾಗಿದ್ದಾರೆ ಎಂದು ಮೂಲಗಳು ಸೂಚಿಸುತ್ತವೆ.
ಈ ಹಿಂದೆ, ಸುಮಾರು 108 ಉಪ-ಜಾತಿಗಳನ್ನು ದಾಖಲಿಸಲಾಗಿತ್ತು, ಆದರೆ ನಾವು ಅಧಿಕೃತವಾಗಿ 88 ಅನ್ನು ಗುರುತಿಸುತ್ತೇವೆ" ಎಂದು ಪ್ರಸನ್ನ ತಿಳಿಸಿದ್ದಾರೆ. ಅರಿವು ಮತ್ತು ಸಮನ್ವಯದ ಮೂಲಕ ಈ ವ್ಯತ್ಯಾಸವನ್ನು ಸರಿಪಡಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
Advertisement