
ಕೊಪ್ಪಳ: ವಿಧಾನಸಭೆಯ ಅಧಿವೇಶನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಆಜಾನ್ ಕುರಿತಾಗಿ ಪ್ರಸ್ತಾಪಿಸಿದ್ದಕ್ಕೆ ಆಕ್ರೋಶಗೊಂಡ ಯುವಕನೋರ್ವ ವಿಡಿಯೋ ಮಾಡಿ ಶಾಸಕರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದನು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯತ್ನಾಳ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಕನಕಗಿರಿ ಪೊಲೀಸರು ಆರೋಪಿ ಕನಕಗಿರಿಯ ಮುಸಲಾಪುರ ಗ್ರಾಮದ ಮುಸ್ಲಿಂ (Muslim) ಯುವಕ ಹುಸೇನಿಯನ್ನು ಬಂಧಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ನೀನು ಬೂಟು ನೆಕ್ಕಿದ ವಂಶಸ್ಥ ಎಂದು ಯುವಕ ಹುಸೇನಿ ನಾಲಿಗೆ ಹರಿಬಿಟ್ಟಿದ್ದನು. ಈ ವಿಡಿಯೋಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಯತ್ನಾಳ್ ಬೆಂಬಲಿಗರು ಮುಸಲಾಪುರ ಗ್ರಾಮದಲ್ಲಿ ಜಮಾವಣೆಗೊಂಡಿದ್ದ ಆರೋಪಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ನಂತರ ಹುಸೇನಿ ಕ್ಷಮೆ ಕೂಡ ಕೇಳಿದ್ದಾನೆ.
Advertisement