ಒರಿಜನಲ್ Booker Prize ವಿಜೇತರು Banu Mushtaq ಅಲ್ಲ.. ದೀಪಾ ಬಸ್ತಿ: ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಹೇಳಿದ್ದೇನು?

ಹಾಸನ ಮೂಲದ ಲೇಖಕಿ ಬಾನು ಮುಷ್ತಾಕ್ ರನ್ನು ರಾಜ್ಯ ಸರ್ಕಾರ ಈ ಬಾರಿ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದು ಇದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಬಿಜೆಪಿ ನಾಯಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
Banu Mushtaq and Deepa Basti
ಲೇಖಕಿ ಬಾನು ಮುಷ್ತಾಕ್ ಮತ್ತು ದೀಪಾ ಬಸ್ತಿ
Updated on

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2025ರ ಉದ್ಘಾಟನೆಗೆ ಖ್ಯಾತ ಲೇಖಕಿ ಬಾನು ಮುಷ್ತಾಕ್ (Banu Mushtaq)ರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವ ವಿಚಾರ ವ್ಯಾಪಕ ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ.

ಹೌದು.. ಹಾಸನ ಮೂಲದ ಲೇಖಕಿ ಬಾನು ಮುಷ್ತಾಕ್ ರನ್ನು ರಾಜ್ಯ ಸರ್ಕಾರ ಈ ಬಾರಿ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದು ಇದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಬಿಜೆಪಿ ನಾಯಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಲೇಖಕಿ ಭಾನು ಮುಷ್ತಾಕ್ ಮುಸ್ಲಿಂ ಸಮುದಾಯಕ್ಕೆ ಸೇರಿದವಾರಿಗಿದ್ದು, ಅವರನ್ನು ಅವರ ಮಸೀದಿಯೊಳಗೇ ಬಿಡುವುದಿಲ್ಲ. ಹೀಗಿರುವಾಗ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಒರಿಜನಲ್ Booker Prize ವಿಜೇತರು Banu Mushtaq ಅಲ್ಲ

ವಾದ-ವಿವಾದಗಳು ಮುಂದುವರೆದಿರುವಂತೆಯೇ ಇತ್ತ ಲೇಖಕಿ ಬಾನು ಮುಷ್ತಾಕ್ ಅವರದ್ದು ಒರಿಜಿನಲ್ ಬೂಕರ್ ಪ್ರಶಸ್ತಿ ಅಲ್ಲ.. ಬದಲಿಗೆ ಒರಿಜಿನಲ್ ಬೂಕರ್ ಪ್ರಶಸ್ತಿ ಲಭಿಸಿರುವ ದೀಪಾ ಬಸ್ತಿ ಅವರಿಗೆ ಎಂದು ಹೇಳಲಾಗಿದೆ.

Banu Mushtaq and Deepa Basti
ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ; ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಏನಿದು ವಿವಾದ?

ಬಾನು ಮುಷ್ತಾಕ್ ಅವರ ‘ಹಸಿನಾ ಮತ್ತು ಇತರ ಕತೆಗಳು’ ಕಥಾಸಂಕಲನಕ್ಕೆ ಬೂಕರ್ ಪ್ರಶಸ್ತಿ ಬಂದಿದೆ ಎಂದು ಹೇಳಲಾಗಿತ್ತು. ಅವರ ಈ ಕಥಾ ಸಂಕಲನದ ಅನುವಾದಿತ “ಹಾರ್ಟ್ ಲ್ಯಾಂಪ್” ಎಂಬ ಕೃತಿಗೆ ಪ್ರಶಸ್ತಿ ಲಭಿಸಿದೆ. ಈ ಕೃತಿಯನ್ನು ಇಂಗ್ಲಿಷ್ ಗೆ ಅನುವಾದಿಸಿದವರು ದೀಪಾಬಸ್ತಿಯಾಗಿದ್ದು, ಅವರಿಗೇ ಈ ಪ್ರಶಸ್ತಿ ಬಂದಿದೆ ಎಂಬ ವಾದಗಳೂ ಕೇಳಿಬರುತ್ತಿವೆ.

ಇತಿಹಾಸ ತಜ್ಞ ಧರ್ಮೇಂದ್ರ ವಿಡಿಯೋ ವೈರಲ್

ವಾದ-ವಿವಾದಗಳು ಇರುವಂತೆಯೇ ಇತ್ತ ಖ್ಯಾತ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಮಾಡಿರುವ ವಿಡಿಯೋವೊಂದು ಇದೀಗ ಈ ಚರ್ಚೆಗೆ ಮತ್ತಷ್ಟು ವೇದಿಕೆ ಕಲ್ಪಿಸಿದ್ದು, ವಿಡಿಯೋದಲ್ಲಿ ಅವರು ಬೂಕರ್ ಪ್ರಶಸ್ತಿಯ ಕುರಿತು ಮಾಹಿತಿ ನೀಡಿದ್ದಾರೆ.

'ಬೂಕರ್ ಪ್ರಶಸ್ತಿ ಎಂಬುದು ಎರಡು ವಿಧಗಳಲ್ಲಿದ್ದು, ಒರಿಜಿನಲ್ ಬೂಕರ್ ಪ್ರಶಸ್ತಿಯನ್ನು ಆಂಗ್ಲ ಭಾಷೆಯ ಫಿಕ್ಷನ್ (ಕಾದಂಬರಿ)ಗಳಿಗೆ ನೀಡಲಾಗುತ್ತದೆ. ಅಂದರೆ ಮೂಲ ಪುಸ್ತಕವನ್ನು ಇಂಗ್ಲೀಷ್ ನಲ್ಲಿಯೇ ಬರೆದಿದ್ದರೆ ಅದಕ್ಕೆ ನೀಡುವ ಪ್ರಶಸ್ತಿಯೇ ಒರಿಜಿನಲ್ ಬೂಕರ್ ಪ್ರಶಸ್ತಿಯಾಗಿರುತ್ತದೆ. ಮತ್ತೊಂದು 'ದಿ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿಯಾಗಿದ್ದು, ಇದನ್ನು ಅನುವಾದಕರ ಪರಿಣಾಮಕಾರಿ ಅನುವಾದವನ್ನು ಪುರಸ್ಕರಿಸುವ ಸಲುವಾಗಿ ನೀಡುವ ಪ್ರಶಸ್ತಿಯಾಗಿದೆ' ಎಂದು ಧರ್ಮೇಂದ್ರ ಕುಮಾರ್ ಹೇಳಿದ್ದಾರೆ.

ಅದರಂತೆ ಹಾಲಿ ಬೂಕರ್ ಪ್ರಶಸ್ತಿ ಬಂದಿರುವುದು ಲೇಖಕಿ ಬಾನು ಮುಷ್ತಾಕ್ ಅವರ ‘ಹಸಿನಾ ಮತ್ತು ಇತರ ಕತೆಗಳು’ ಕಥಾಸಂಕಲನವನ್ನು ಇಂಗ್ಲೀಷ್ ಗೆ “ಹಾರ್ಟ್ ಲ್ಯಾಂಪ್” ಎಂಬ ಹೆಸರಿನಲ್ಲಿ ಅನುವಾದ ಮಾಡಿದ ದೀಪಾ ಬಸ್ತಿ ಅವರಿಗೆ. ಅವರ ಶ್ರಮವನ್ನು ನಾವು ಪರಿಗಣಿಸಲೇ ಇಲ್ಲ ಎಂದು ಧರ್ಮೇಂದ್ರ ಕುಮಾರ್ ಕಿಡಿಕಾರಿದ್ದಾರೆ.

ಅಂದಹಾಗೆ ಬೂಕರ್ ಪ್ರಶಸ್ತಿ 50 ಸಾವಿರ ಪೌಂಡ್‌ (ಅಂದಾಜು 57.28 ಲಕ್ಷ ರೂ.) ಒಳಗೊಂಡಿತ್ತು. ಇದೇ ಅನುವಾದಿತ ಕೃತಿಗೆ ‘ಪೆನ್ ಟ್ರಾನ್ಸ್‌ಲೇಟ್ಸ್’ ಪ್ರಶಸ್ತಿಯೂ ಸಿಕ್ಕಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com