ಗಿರೀಶ್ ಮಟ್ಟಣ್ಣವರ್, ಚಿನ್ನಯ್ಯ ಸೇರಿ ನಾಲ್ವರು 'ಬುರುಡೆ' ಜೊತೆ ದೆಹಲಿಗೆ ಹೋಗಿದ್ದೇವು: ಜಯಂತ್ ಸ್ಫೋಟಕ ಹೇಳಿಕೆ
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ದೂರುದಾರ, ಸಾಮಾಜಿಕ ಹೋರಾಟಗಾರ ಜಯಂತ್ ಪ್ರಮುಖ ಮಾಹಿತಿಯೊಂದು ಬಹಿರಂಗಪಡಿಸಿದ್ದಾರೆ. ದೂರುದಾರ ಹಾಗೂ ಸಾಕ್ಷಿಯಾಗಿದ್ದ ಚಿನ್ನಯ್ಯ ದೂರು ನೀಡುವುದಕ್ಕೂ ಮುನ್ನ ದೆಹಲಿಗೆ ಕರೆದುಕೊಂಡು ಹೋಗಿದ್ದೇವು ಎಂದು ಮಾಹಿತಿ ನೀಡಿದ್ದಾರೆ.
ಬುರುಡೆಯನ್ನು ಮೊದಲಿಗೆ ಸುಪ್ರೀಂ ಕೋರ್ಟ್ ತೆಗೆದುಕೊಂಡು ಹೋಗಲು ನಿರ್ಧರಿಸಿ ನಾವು ನಾಲ್ವರು... ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯ, ಸುಜಾತಾ ಭಟ್ ಹಾಗೂ ನಾನು ದೆಹಲಿಗೆ ಕಾರಿನಲ್ಲಿ ಹೋಗಿದ್ದೇವು. ಆದರೆ ಅಲ್ಲಿ ನಮ್ಮ ಯೋಜನೆ ಸಫಲವಾಗದ ಕಾರಣ ಬುರುಡೆಯನ್ನು ವಾಪಸ್ ತರಲಾಯಿತು ಎಂದು ಜಯಂತ್ ಹೇಳಿದ್ದಾರೆ.
ಬೆಂಗಳೂರಿನ ನನ್ನ ಮನೆಯಲ್ಲಿ ಚಿನ್ನಯ್ಯ ಮೂರು ದಿನ ಇದ್ದ. ಆತನಿಗೆ ಊಟ ಹಾಕಿದ್ದೇನೆ. ಬೆಂಗಳೂರಿನಲ್ಲಿ ನನ್ನ ಮಗ, ಮಗಳಿದ್ದಾರೆ. ಅವರನ್ನೇ ಕೇಳಿ ಸಂಪೂರ್ಣ ಮಾಹಿತಿ ನೀಡುತ್ತಾರೆ ಎಂದು ಜಯಂತ್ ಹೇಳಿದ್ದಾರೆ.
ಇದೇ ವೇಳೆ ಎಸ್ಐಟಿ ಅಧಿಕಾರಿಗಳು ಜಯಂತ್ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮನೆಯ ಇಂಚಿಂಚೂ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಮನೆಯಲ್ಲಿ ಫೋಟೋ ನೆಗೆಟಿವ್ಸ್ ಪರಿಶೀಲನೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ