ಚಿಕ್ಕಬಳ್ಳಾಪುರ: ಆಫ್ರಿಕನ್ ಹಂದಿ ಜ್ವರ; ಸತ್ತ 50-60 ಹಂದಿಗಳನ್ನು ಕೆರೆಗೆ ಎಸೆದ ಫಾರ್ಮ್ ಮಾಲೀಕ!

ಗ್ರಾಮಸ್ಥರಿಗೆ ಜ್ವರದ ಲಕ್ಷಣಗಳು ಕಾಣಿಸುತ್ತಿಲ್ಲ. ಆದರೆ, ಒಂದು ವಾರದವರೆಗೆ ಗ್ರಾಮಸ್ಥರ ಮಾದರಿಗಳನ್ನು ತೆಗೆದುಕೊಳ್ಳಲಾಗುವುದು.
pig casual Images
ಹಂದಿ ಸಾಂಕ್ರಾಮಿಕ ಚಿತ್ರ
Updated on

ಚಿಕ್ಕಬಳ್ಳಾಪುರ: ಹಂದಿ ಸಾಕಾಣಿಕೆದಾರರೊಬ್ಬರು ಆಫ್ರಿಕನ್ ಹಂದಿಜ್ವರ ಸೋಂಕಿತ ಸುಮಾರು 50 ರಿಂದ 60 ಹಂದಿಗಳ ಮೃತದೇಹಗಳನ್ನು ಕೆರೆಗೆ ಎಸೆದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ಬೂರಿ ಗ್ರಾಮದಲ್ಲಿ ನಡೆದಿದೆ.

ವೈದ್ಯರ ತಂಡ ಶುಕ್ರವಾರ ಹೆಬ್ಬೂರಿ ಗ್ರಾಮಕ್ಕೆ ಆಗಮಿಸಿ ಜನರಲ್ಲಿ ಸೋಂಕು ಇದೆಯೇ ಎಂದು ಪರೀಕ್ಷಿಸಿದರು. ಗ್ರಾಮದಲ್ಲಿ 206 ಮನೆಗಳಿದ್ದು, ಸುಮಾರು 700 ಜನಸಂಖ್ಯೆ ಇದೆ. ಗ್ರಾಮವು ಕೆರೆಯಿಂದ 3 ಕಿ.ಮೀ ದೂರದಲ್ಲಿದ್ದರೂ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಮಹೇಶ್ ತಿಳಿಸಿದರು.

ಗ್ರಾಮಸ್ಥರಿಗೆ ಜ್ವರದ ಲಕ್ಷಣಗಳು ಕಾಣಿಸುತ್ತಿಲ್ಲ. ಆದರೆ, ಒಂದು ವಾರದವರೆಗೆ ಗ್ರಾಮಸ್ಥರ ಮಾದರಿಗಳನ್ನು ತೆಗೆದುಕೊಳ್ಳಲಾಗುವುದು. ಬೆಳಿಗ್ಗೆ ಮತ್ತು ಸಂಜೆ ಕೈಕಾಲುಗಳನ್ನು ಚೆನ್ನಾಗಿ ತೊಳೆಯಲು ಅವರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹಸ್ಬೆಂಡರಿ ಮತ್ತು ವೆಟರ್ನರಿ ಬಯೋಲಾಜಿಕಲ್ (IAH and VB)ಇದು ಹಂದಿ ಜ್ವರ ಎಂದು ದೃಢಪಡಿಸಿದೆ. ವೆಂಕಟರೆಡ್ಡಿ ಮಾಲೀಕತ್ವದ ಜಮೀನಿನಲ್ಲಿ ಮತ್ತೊಂದು ಅಧಿಕಾರಿಗಳ ತಂಡ ಮೊಕ್ಕಾಂ ಹೂಡಿದ್ದು, ಜಮೀನಿನಲ್ಲಿದ್ದ ಎಲ್ಲಾ ಹಂದಿಗಳನ್ನು ಕೊಂದು ಸರ್ಕಾರದ ನಿಯಮಗಳ ಪ್ರಕಾರ ವಿಲೇವಾರಿ ಮಾಡಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ರಂಗಪ್ಪ ತಿಳಿಸಿದ್ದಾರೆ.

ವೆಂಕಟರೆಡ್ಡಿ ಅವರು ಜಮೀನಿನಲ್ಲಿದ್ದ ಹಂದಿಗಳಲ್ಲಿ ಜ್ವರದ ಲಕ್ಷಣಗಳ ಬಗ್ಗೆ ಪಶುವೈದ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆದರೆ ಅದಕ್ಕೂ ಮುನ್ನ ಸೋಂಕು ತಗುಲಿ ಸಾವನ್ನಪ್ಪಿದ್ದ ಹಂದಿಗಳ ಶವವನ್ನು ಕೆರೆಗೆ ಎಸೆದಿದ್ದರು. ಮೃತದೇಹಗಳು ಕೊಳೆತು ದುರ್ವಾಸನೆ ಬರುತ್ತಿದ್ದಂತೆ ಗ್ರಾಮಸ್ಥರು ಕೂಡ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ನಂತರ ಮಾದರಿಗಳನ್ನು ಸಂಗ್ರಹಿಸಿ IAH ಮತ್ತು VB ಗೆ ಕಳುಹಿಸಿದರು. ಇದು ಆಫ್ರಿಕನ್ ಜ್ವರ ಎಂದು ಲ್ಯಾಬ್ ಮಾಹಿತಿ ನೀಡಿದೆ ಎಂದು ರಂಗಪ್ಪ ತಿಳಿಸಿದರು.

ಇದೀಗ ಕೆರೆಯನ್ನು ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಲಾಗುತ್ತಿದೆ. ಮುಂದಿನ ಸೂಚನೆ ಬರುವವರೆಗೂ ಕೆರೆಯ ನೀರನ್ನು ಬಳಸದಂತೆ ಕಂದಾಯ ಅಧಿಕಾರಿಗಳು ನಾಮಫಲಕ ಅಳವಡಿಸಿದ್ದಾರೆ. ಕೆರೆ ಸ್ವಚ್ಛತೆ ಕುರಿತು ಮೀನುಗಾರಿಕೆ ಇಲಾಖೆ ಮತ್ತಿತರ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಸಭೆ ನಡೆಸಲಾಗುವುದು, ವೆಂಕಟ ರೆಡ್ಡಿ ವಿರುದ್ಧ ದೂರು ದಾಖಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಂಗಪ್ಪ ತಿಳಿಸಿದ್ದಾರೆ.

ಮಾರಣಾಂತಿಕ ವೈರಲ್ ಕಾಯಿಲೆ: ಆಫ್ರಿಕನ್ ಹಂದಿ ಜ್ವರವು ಹೆಚ್ಚು ಸಾಂಕ್ರಾಮಿಕ ಮತ್ತು ಮಾರಣಾಂತಿಕ ವೈರಲ್ ಕಾಯಿಲೆಯಾಗಿದೆ. ಇದು ದೇಶೀಯ ಮತ್ತು ಕಾಡು ಹಂದಿಗಳಿಂದ ಹೆಚ್ಚಾಗಿ ಬರುತ್ತದೆ. ಹೆಚ್ಚಿನ ಸಾವಿನ ಪ್ರಮಾಣದಿಂದಾಗಿ ತೀವ್ರ ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ. ಇದಕ್ಕೆ ಪ್ರಸ್ತುತ ಯಾವುದೇ ಚಿಕಿತ್ಸೆ ಅಥವಾ ಲಸಿಕೆ ಇಲ್ಲ.

pig casual Images
ಬೆಂಗಳೂರು ಸುತ್ತಮುತ್ತಲಿನ ಜಾನುವಾರುಗಳಿಗೆ ಕಿವಿ ಸೋಂಕು: ಹಾಲಿನ ಉತ್ಪಾದನೆಯಲ್ಲಿ ಕುಸಿತ, ಹೈನುಗಾರರಲ್ಲಿ ಆತಂಕ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com