ಬೆಂಗಳೂರು ಗ್ರಾಮಾಂತರ: ಬಾಲಕ ಸಾವು; ಗಣೇಶ ವಿಸರ್ಜನೆ ವೇಳೆ ಪಟಾಕಿ ಬಳಕೆಗೆ ನಿಷೇಧ!

ಗಣೇಶ ಮೂರ್ತಿಯನ್ನು ಫೋರ್ಕ್ ಲಿಫ್ಟ್ ನಲ್ಲಿ ಇಡಲಾಗಿತ್ತು. ನಿಮಜ್ಜನಕ್ಕೆ ತೆರಳುತ್ತಿದ್ದಾಗ ಚಾಲಕನ ಸೀಟಿನ ಹಿಂದೆ ಇರಿಸಲಾಗಿದ್ದ ಪಟಾಕಿಗಳ ಪ್ಲಾಸ್ಟಿಕ್ ಚೀಲ ಸಂಜೆ 5.45 ರ ಸುಮಾರಿಗೆ ಸ್ಫೋಟಗೊಂಡಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಗಣಪತಿ ಮೆರವಣಿಗೆ ವೇಳೆ ನಡೆದ ಸ್ಫೋಟದಲ್ಲಿ 10ನೇ ತರಗತಿ ವಿದ್ಯಾರ್ಥಿ ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡ ಘಟನೆ ನಡೆದ ಒಂದು ದಿನದ ನಂತರ ಗಣೇಶ ಮೂರ್ತಿ ವಿಸರ್ಜನೆ ಧಾರ್ಮಿಕ ಕಾರ್ಯಕ್ರಮಗಳು ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸುವುದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಶನಿವಾರ ನಿಷೇಧಿಸಿದೆ.

ದೊಡ್ಡಬಳ್ಳಾಪುರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಮತ್ತೂರು ಗ್ರಾಮದಲ್ಲಿ 15 ವರ್ಷದ ಮುನಿ ಅಲಿಯಾಸ್ ಧನುಷ್ ಎಂಬಾತ ತೀವ್ರ ಗಾಯಗೊಂಡು ಶುಕ್ರವಾರ ಸಂಜೆ ಮೃತಪಟ್ಟಿದ್ದಾನೆ. ಪೊಲೀಸ್ ಪೇದೆ ಜಾಕೀರ್ ಹುಸೇನ್, ಫೋರ್ಕ್‌ಲಿಫ್ಟ್ ಚಾಲಕ ಮುನಿರಾಜು ಮತ್ತು ನಿವಾಸಿಗಳಾದ ಯೋಗೇಶ್, ನಾಗರಾಜು, ಚೇತನ್, ಗಣೇಶ್, ಲೋಕೇಶ್, ಮಣಿಯಕ್ಕ ಮತ್ತು ಧನಂಜಯ್ ಸೇರಿದಂತೆ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಯೋಗೇಶ್ ಸುಟ್ಟ ಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದು, ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಣೇಶ ಮೂರ್ತಿಯನ್ನು ಫೋರ್ಕ್ ಲಿಫ್ಟ್ ನಲ್ಲಿ ಇಡಲಾಗಿತ್ತು. ನಿಮಜ್ಜನಕ್ಕೆ ತೆರಳುತ್ತಿದ್ದಾಗ ಚಾಲಕನ ಸೀಟಿನ ಹಿಂದೆ ಇರಿಸಲಾಗಿದ್ದ ಪಟಾಕಿಗಳ ಪ್ಲಾಸ್ಟಿಕ್ ಚೀಲ ಸಂಜೆ 5.45 ರ ಸುಮಾರಿಗೆ ಸ್ಫೋಟಗೊಂಡಿದೆ. ಇಂಜಿನ್ ಬಿಸಿಯಾದಾಗ ಪಟಾಕಿಗಳು ಸ್ಪೋಟಗೊಂಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 105 (ಕೊಲೆಗೆ ಸಮನಾಗದ ಅಪರಾಧ) ಸೆಕ್ಷನ್ 125 ಎ (ಜೀವ ಅಥವಾ ಸುರಕ್ಷತೆಗೆ ಅಪಾಯ) ಮತ್ತು ಇತರ ನಿಬಂಧನೆಗಳ ಅಡಿಯಲ್ಲಿ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆಯೋಜಕರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ. ಬಸವರಾಜ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಸುಮಾರು 1,800 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ ಮತ್ತು ಅಂತಹ ದುರಂತಗಳನ್ನು ತಡೆಯಲು ನಿಷೇಧವು ಅತ್ಯಗತ್ಯ ಎಂದು ಹೇಳಿದೆ.

Casual Images
ದೊಡ್ಡಬಳ್ಳಾಪುರ: ಗಣೇಶ ಮೆರವಣಿಗೆಯಲ್ಲಿ ಪಟಾಕಿ ಸ್ಫೋಟಗೊಂಡು ಬಾಲಕ ಸಾವು; ಆರು ಮಂದಿಗೆ ಗಾಯ

BBMP ವಲಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಶುಕ್ರವಾರ ಒಟ್ಟು 1.14 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಶಾಶ್ವತ ಮತ್ತು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾದ ಕೆರೆಗಳು

ಕಲ್ಯಾಣಿಗಳು ಮತ್ತು ನಾಗರಿಕ ಸಂಸ್ಥೆಯಿಂದ ವ್ಯವಸ್ಥೆಗೊಳಿಸಲಾದ ಮೊಬೈಲ್ ಟ್ಯಾಂಕರ್‌ಗಳಲ್ಲಿ ವಿಸರ್ಜನೆ ನಡೆಸಲಾಗಿದೆ.

ಬಿಬಿಎಂಪಿ ಅಂಕಿಅಂಶಗಳ ಪ್ರಕಾರ, ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ನಿಮಜ್ಜನ ನಡೆದಿದ್ದು, ಅಲ್ಲಿ 52,181 ವಿಗ್ರಹಗಳು ವಿಸರ್ಜನೆಗೊಂಡಿವೆ. ನಂತರ ಪೂರ್ವ ವಲಯದಲ್ಲಿ 36,725 ಮೂರ್ತಿಗಳು, ಪಶ್ಚಿಮ ವಲಯದಲ್ಲಿ 12,874 ಹಾಗೂ ಬೊಮ್ಮನಹಳ್ಳಿಯಲ್ಲಿ 1,330 ವಿಗ್ರಹಗಳು ನಿಮಜ್ಜನವಾಗಿವೆ.

ದಾಸರಹಳ್ಳಿಯಲ್ಲಿ 503, ಮಹದೇವಪುರ (3,299), ರಾಜರಾಜೇಶ್ವರಿ ನಗರ (4,105) ಮತ್ತು ಯಲಹಂಕ (3,385) ಮೂರ್ತಿಗಳು ನಿಮಜ್ಜನಗೊಂಡಿವೆ. ಒಟ್ಟು 1,04,286 ಮೂರ್ತಿಗಳನ್ನು ಶಾಶ್ವತ ಅಥವಾ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾದ ಕೆರೆಗಳಲ್ಲಿ ನಿಮಜ್ಜನ ಮಾಡಲಾಗಿದ್ದು, 11,154 ಮೂರ್ತಿಗಳನ್ನು ಮೊಬೈಲ್ ಟ್ಯಾಂಕರ್ ಬಳಸಿ ನಿಮಜ್ಜನ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com