

ಬೆಂಗಳೂರು: ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತೊಟ್ಟಿದ್ದ ದುಬಾರಿ ವಾಚ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ನಿನ್ನೆ ಬ್ಯಾಂಕ್ವೆಟ್ ಹಾಲ್ ವೇದಿಕೆಯಲ್ಲೂ ದುಬಾರಿ ಬೆಲೆಯ ವಾಚ್ ಸದ್ದು ಮಾಡಿದೆ.
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಹಿಳಾ ಸರ್ಕಾರಿ ನೌಕರರ ಸಂಘದ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಸಚಿವ ಎಚ್ ಕೆ ಪಾಟೀಲ್ ಕೂಡಾ ಭಾಗಿಯಾಗಿದ್ದರು.
ತಮ್ಮ ಪಕ್ಕ ಕುಳಿತಿದ್ದ ಡಿಕೆ ಶಿವಕುಮಾರ್ ಅವರನ್ನು ಹೆಚ್ ಕೆ ಪಾಟೀಲ್ ಮಾತನಾಡಿಸಿದ್ದು, ಈ ವೇಳೆ ವಾಚ್ ಬಗ್ಗೆ ಕೇಳಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಅವರು ತಮ್ಮ ಕೈಯಲ್ಲಿದ್ದ ವಾಚ್ ಬಿಚ್ಚಿ ಎಚ್ ಕೆ ಪಾಟೀಲ್ ಅವರಿಗೆ ನೀಡಿದ್ದು ಕಂಡು ಬಂದಿತು.
ಬಳಿಕ ಕೆಲ ಹೊತ್ತು ವಾಚ್ ಹಿಡಿದು ನೋಡಿ ಬಳಿಕ ಪಾಟೀಲ್ ಅವರು ಡಿಕೆ.ಶಿವಕುಮಾರ್ ಅವರಿಗೆ ವಾಚ್ ವಾಪಸ್ ನೀಡಿದರು. ಅಷ್ಟೇ ಅಲ್ಲದೆ ತಮ್ಮ ಕೈಯಲ್ಲಿದ್ದ ವಾಚ್ ನೋಡಿಕೊಂಡರು.
Advertisement