ವಿಜಯನಗರ: ಹಂಪಿ ಸ್ಮಾರಕದ ಸ್ತಂಭಕ್ಕೆ ಧಕ್ಕೆ, ನಾಪತ್ತೆ; ದೂರು ದಾಖಲು

ಎಸ್‌ಐ ನೇತೃತ್ವದ ಪುನಃಸ್ಥಾಪನೆ ಕಾರ್ಯಗಳ ಅಡಿಯಲ್ಲಿ ಪಕ್ಕದ ಗೋಡೆಯನ್ನು ನಿರ್ಮಿಸುವಾಗ ವಿಜಯನಗರ ಸಾಮ್ರಾಜ್ಯದ ಯುಗಕ್ಕೆ ಸೇರಿದ ಕಲ್ಲಿನ ಕಂಬವನ್ನು ಯಂತ್ರಗಳು ಮುರಿದಿವೆ ಎಂದು ಆರೋಪಿಸಿದ್ದಾರೆ.
The damaged remains of the pillar near the underground Shiva Temple
ಸ್ತಂಭದ ಉಳಿದ ಭಾಗ
Updated on

ಹೊಸಪೇಟೆ: ಹಂಪಿಯ ನೆಲಮಹಡಿ ಶಿವ ದೇವಾಲಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ವತಿಯಿಂದ ನಡೆಯುತ್ತಿರುವ ಪುನಶ್ಚೇತನ ಕಾಮಗಾರಿ ವೇಳೆ ಸ್ಮಾರಕ ಸ್ತಂಭವೊಂದನ್ನು ತುಂಡರಿಸಿದ ಮತ್ತು ಅದನ್ನು ನಾಪತ್ತೆ ಮಾಡಿದ ಕುರಿತಂತೆ ಹಂಪಿ ಠಾಣೆಗೆ ಕಮಲಾಪುರದ ಟಿ.ಶಿವಕುಮಾರ್ ಎಂಬುವವರು ದೂರು ನೀಡಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆಯ ವಿಜಯನಗರ ಜಿಲ್ಲಾಧ್ಯಕ್ಷರೂ ಆಗಿರುವ ಕಮಲಾಪುರ ನಿವಾಸಿ ಟಿ ಶಿವಕುಮಾರ್, ಎಎಸ್‌ಐ ನೇತೃತ್ವದ ಪುನಃಸ್ಥಾಪನೆ ಕಾರ್ಯಗಳ ಅಡಿಯಲ್ಲಿ ಪಕ್ಕದ ಗೋಡೆಯನ್ನು ನಿರ್ಮಿಸುವಾಗ ವಿಜಯನಗರ ಸಾಮ್ರಾಜ್ಯದ ಯುಗಕ್ಕೆ ಸೇರಿದ ಕಲ್ಲಿನ ಕಂಬವನ್ನು ಯಂತ್ರಗಳು ಮುರಿದಿವೆ ಎಂದು ಆರೋಪಿಸಿದ್ದಾರೆ.

ಶಿವ ದೇವಸ್ಥಾನದ ಬಳಿ ಸೈಡ್‌ವಾಲ್ ಕಟ್ಟುವ ವೇಳೆ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಕಲ್ಲುಗಳನ್ನು ಯಂತ್ರ ಬಳಸಿ ತುಂಡರಿಸಲಾಗಿತ್ತು. ಡಿ.2ರಂದು ಈ ಬಗ್ಗೆ ಎಎಸ್ಐಗೆ ದೂರು ನೀಡಿದ್ದೆ. ಆದರೆ ಕ್ರಮ ಕೈಗೊಳ್ಳಲಿಲ್ಲ. ಬಳಿಕ ಅದೇ ಪಿಲ್ಲರ್‌ ಅನ್ನು ಒಡೆದು ಹಾಕಿದ್ದಲ್ಲದೆ, ಬಳಿಕ ಅದನ್ನು ನಾಪತ್ತೆ ಮಾಡಲಾಗಿದೆ, ಹೀಗಾಗಿ ಎಎಸ್ಐ ಅಧೀಕಾರಿಗಳನ್ನು ಸಹ ಕರಿಸಿ ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ದೂರು ಸ್ವೀಕರಿಸಲಾಗಿದೆ, ಅದರ ಬಗ್ಗೆ ಪರಿಶೀಲಿಸಿ, ಎಎಸ್‌ಐ ಅಧಿಕಾರಿಗಳಿಂದ ವಿವರಣೆ ಪಡೆಯುವ ಬಗ್ಗೆ ನಿರ್ಧರಿಸುತ್ತೇವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ಸ್ಥಳೀಯರು ತೋರಿಸಿದ ಛಾಯಾಚಿತ್ರವು ಭೂಗತ ಶಿವ ದೇವಾಲಯದ ಬಳಿ ಬಿದ್ದಿರುವ ಕಂಬದ ಹಾನಿಗೊಳಗಾದ ಅವಶೇಷಗಳನ್ನು ತೋರುತ್ತಿದೆ, ಇದು ಸ್ಥಳದ ಶತಮಾನಗಳಷ್ಟು ಹಳೆಯದಾದ ರಚನೆಗಳ ಸುರಕ್ಷತೆಯ ಬಗ್ಗೆ ಸಾರ್ವಜನಿಕ ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ.

The damaged remains of the pillar near the underground Shiva Temple
ಹಂಪಿ: ಬಡವಿಲಿಂಗ ದೇವಾಲಯದ ಕೊಳದಲ್ಲಿ ಚಪ್ಪಲಿ; ಪ್ರಕ್ಷುಬ್ದ ವಾತಾವರಣ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com