

ಬೆಂಗಳೂರು: ಡಿಸೆಂಬರ್ 22 ರಿಂದ ಹಳದಿ ಮಾರ್ಗ ಮೆಟ್ರೋದಲ್ಲಿ ಆರನೇ ರೈಲು ಸಂಚಾರ ಆರಂಭವಾಗಲಿದ್ದು, ರೈಲುಗಳು ಪ್ರತಿ 12 ನಿಮಿಷಗಳಿಗೊಮ್ಮೆ ಸಂಚರಿಸುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನವೆಂಬರ್ ಕೊನೆಯ ವಾರದಲ್ಲಿ ಆರು ಬೋಗಿಗಳ ರೈಲು ಸೆಟ್ ನ್ನು ಪಡೆದುಕೊಂಡಿತು. ಈ ಬೋಗಿಗಳನ್ನು ಕೋಲ್ಕತ್ತಾ ಬಳಿ ಟಿಟಾಘರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಚೀನಾದ CRRC ನಾನ್ಜಿಂಗ್ ಪುಜೆನ್ ಕೋ ಲಿಮಿಟೆಡ್ ಜೊತೆ ಉಪ-ಒಪ್ಪಂದದಡಿಯಲ್ಲಿ ತಯಾರಿಸಲಾಗಿದೆ.
ಇದು 1,578 ಕೋಟಿ ರೂಪಾಯಿ ವೆಚ್ಚದಲ್ಲಿ 36 ರೈಲು ಸೆಟ್‌ಗಳನ್ನು ಪೂರೈಸುತ್ತಿದೆ. ಆರನೇ ರೈಲು ಪ್ರಯಾಣಿಕರ ಸೇವೆಗೆ ಪ್ರವೇಶಿಸುವ ಮೊದಲು ಸಿಗ್ನಲಿಂಗ್ ಇಂಟರ್ಫೇಸ್ ಪರೀಕ್ಷೆಗಳೊಂದಿಗೆ 750 ಕಿಮೀ ಮುಖ್ಯ ಮಾರ್ಗದ ಸಂಚಾರ ಪೂರ್ಣಗೊಳಿಸಬೇಕಾಗಿದೆ.
ಕ್ರಿಸ್‌ಮಸ್‌ಗೆ ಮುಂಚಿತವಾಗಿ ಡಿಸೆಂಬರ್ 22 ರಂದು ರೈಲನ್ನು ಸಂಚಾರಕ್ಕೆ ಬಿಡಲು ಸಿದ್ಧತೆ ನಡೆಯುತ್ತಿವೆ ಎಂದು ಹಿರಿಯ BMRCL ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೀಕ್-ಅವರ್ ಗಳಲ್ಲಿ ಸುಮಾರು 12 ನಿಮಿಷಗಳಿಗೊಮ್ಮೆ ರೈಲು ಸಂಚರಿಸಲಿದೆ.
ತುರ್ತು ಪರಿಸ್ಥಿತಿಗಳಿಗಾಗಿ ಕನಿಷ್ಠ ಒಂದು ರೈಲನ್ನು ಸಂಚಾರಕ್ಕಾಗಿ ಪಕ್ಕಕ್ಕೆ ಇಡಬಹುದು ಎಂದು ಮತ್ತೊಬ್ಬ ಅಧಿಕಾರಿ ಹೇಳುತ್ತಾರೆ. 19.15 ಕಿ.ಮೀ. ಉದ್ದದ ಆರ್‌ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ಕಾರಿಡಾರ್ ಆಗಸ್ಟ್ 11 ರಂದು ಉದ್ಘಾಟನೆಯಾಗಿದ್ದು, ದೈನಂದಿನ ಪ್ರಯಾಣಿಕರು ಮಿಲಿಯನ್ ಗಿಂತಲೂ ಹೆಚ್ಚಿದ್ದಾರೆ. ಆದರೆ ಕಡಿಮೆ ಸಂಚಾರ ಮತ್ತು ತಡವಾಗಿ ಆರಂಭ ಸಮಯದ ಬಗ್ಗೆ ಪ್ರಯಾಣಿಕರು ಅತೃಪ್ತರಾಗಿದ್ದಾರೆ. ಪ್ರಸ್ತುತ ಪೀಕ್-ಅವರ್ ನಲ್ಲಿ 15 ನಿಮಿಷಗಳಿಗೊಮ್ಮೆ ರೈಲು ಸಂಚರಿಸುತ್ತದೆ.
Advertisement