

ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇದರಿಂದ ಪ್ರಯಾಣಿಕರ ಕಾಯುವಿಕೆ ಸಮಯ ಹೆಚ್ಚಾಗಿದೆ.
ಆರನೇ ರೈಲಿನ ಆರು ಬೋಗಿಗಳಲ್ಲಿ ಮೂರು ಬೋಗಿಗಳು ಈಗಾಗಲೇ ಹೆಬ್ಬಗೋಡಿ ಡಿಪೋವನ್ನು ತಲುಪಿದ್ದು, ಉಳಿದ ಮೂರು ಬೋಗಿಗಳು ವಾರಾಂತ್ಯದ ವೇಳೆಗೆ ಬರುವ ನಿರೀಕ್ಷೆಯಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, 6ನೇ ರೈಲಿನ ಮೊದಲ ಮೂರು ಬೋಗಿಗಳು ಹೆಬ್ಬಗೋಡಿ ಡಿಪೋವನ್ನು ತಲುಪಿವೆ ಮತ್ತು ಉಳಿದ ಬೋಗಿಗಳು ಈ ವಾರಾಂತ್ಯದ ವೇಳೆಗೆ ಬರುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಎಲ್ಲಾ ಆರು ಬೋಗಿಗಳು ಬಂದ ನಂತರ, ಬಿಎಂಆರ್‌ಸಿಎಲ್ ಅವುಗಳನ್ನು ಜೋಡಿಸಿ ಸ್ಥಿರ ಮತ್ತು ಕ್ರಿಯಾತ್ಮಕ ಪರೀಕ್ಷೆಗೆ ಒಳಪಡಿಸುತ್ತದೆ. ಈ ಪರೀಕ್ಷೆಗಳಲ್ಲಿ ಸಿಗ್ನಲಿಂಗ್, ವಿದ್ಯುತ್ ಸರಬರಾಜು ವ್ಯವಸ್ಥೆಗಳು, ದೂರಸಂಪರ್ಕ ಮತ್ತು ಇತರ ಕಾರ್ಯಗಳನ್ನು ಪರಿಶೀಲನೆಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
Advertisement