ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: 3 ವರ್ಷಗಳಲ್ಲಿ 855 ಕೋ.ರೂ ಟೋಲ್ ಸಂಗ್ರಹ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಮಿಸಿದ 118 ಕಿ.ಮೀ ಉದ್ದದ ಹೆದ್ದಾರಿಯನ್ನು ಮಾರ್ಚ್ 2023 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
Bengaluru-Mysuru Expressway
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ
Updated on

ಮೈಸೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (NH 275) ವಾಹನ ಸಂಚಾರಕ್ಕೆ ಮುಕ್ತವಾದ ನಂತರ ಕಳೆದ 3 ವರ್ಷಗಳಲ್ಲಿ, 855.79 ಕೋಟಿ ರೂಪಾಯಿಗಳಷ್ಟು ಟೋಲ್ ಸಂಗ್ರಹವಾಗಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಮಿಸಿದ 118 ಕಿ.ಮೀ ಉದ್ದದ ಹೆದ್ದಾರಿಯನ್ನು ಮಾರ್ಚ್ 2023 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಮಾರ್ಗವು ಬೆಂಗಳೂರಿನ ಕುಂಬಳಗೋಡಿನಲ್ಲಿ ಪ್ರಾರಂಭವಾಗಿ ರಾಮನಗರ ಜಿಲ್ಲೆಯಲ್ಲಿ 55 ಕಿ.ಮೀ, ಮಂಡ್ಯ ಜಿಲ್ಲೆಯಲ್ಲಿ 58 ಕಿ.ಮೀ ಮತ್ತು ಮೈಸೂರು ಜಿಲ್ಲೆಯಲ್ಲಿ 5 ಕಿ.ಮೀ ಮೂಲಕ ಹಾದುಹೋಗುತ್ತದೆ.

ಹೆದ್ದಾರಿಯಲ್ಲಿ ಮೂರು ಟೋಲ್ ಪ್ಲಾಜಾಗಳಿವೆ. 2022-23 ಮತ್ತು 2025-26 ರ ನಡುವೆ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಿಮಿಣಿಕೆ ಟೋಲ್ ಪ್ಲಾಜಾದಲ್ಲಿ 282.14 ಕೋಟಿ ರೂಪಾಯಿ, ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ 248.42 ಕೋಟಿ ರೂ. ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್ ಪ್ಲಾಜಾದಲ್ಲಿ 325.23 ಕೋಟಿ ರೂ. ಸಂಗ್ರಹವಾಗಿದೆ.

Bengaluru-Mysuru Expressway
Watch | ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಅಪಘಾತ: ಮೂವರು ಸಾವು; ಬೆಂಗಳೂರಿನಲ್ಲಿ FRRO CCB raid: ವಿದೇಶಿ ಡ್ರಗ್ಸ್ ಪೆಡ್ಲರ್ ಗಳ ಬಂಧನ; ಹಿರಿಯ ಪತ್ರಕರ್ತ KB Ganapati ನಿಧನ

1,674 ಅಪಘಾತಗಳು, 215 ಸಾವುಗಳು

2023 ರಿಂದ 2025 ರವರೆಗೆ, ಎಕ್ಸ್ ಪ್ರೆಸ್ ವೇಯಲ್ಲಿ ಒಟ್ಟು 1,674 ಅಪಘಾತಗಳು ವರದಿಯಾಗಿದ್ದು, 215 ಜೀವಗಳನ್ನು ಬಲಿ ತೆಗೆದುಕೊಂಡಿದೆ, 311 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ 865 ಅಪಘಾತಗಳು ಬೆಂಗಳೂರು-ನಿಡಘಟ್ಟ ಮಾರ್ಗದಲ್ಲಿ (ಪ್ಯಾಕೇಜ್ 1) ಸಂಭವಿಸಿದ್ದು, 76 ಸಾವುಗಳು ಮತ್ತು 185 ಗಂಭೀರ ಗಾಯಗಳಾಗಿವೆ. ನಿಡಘಟ್ಟ-ಮೈಸೂರು ಮಾರ್ಗದಲ್ಲಿ (ಪ್ಯಾಕೇಜ್ 2) 809 ಅಪಘಾತಗಳು ದಾಖಲಾಗಿದ್ದು, ಇದರಲ್ಲಿ 139 ಜನರು ಪ್ರಾಣ ಕಳೆದುಕೊಂಡು 126 ಜನರು ಗಂಭೀರವಾಗಿ ಗಾಯಗೊಂಡರು.

ಬೆಂಗಳೂರು-ನಿಡಘಟ್ಟ ಮಾರ್ಗದಲ್ಲಿ ಅಪಘಾತಗಳು ಮತ್ತು ಸಾವುಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದ್ದರೂ, ನಿಡಘಟ್ಟ-ಮೈಸೂರು ಮಾರ್ಗದಲ್ಲಿ ಅಪಘಾತಗಳು ಮತ್ತು ಸಾವುಗಳು ಹೆಚ್ಚಿವೆ.

Bengaluru-Mysuru Expressway
ಸಂಚಾರಿ ನಿಯಮ ಉಲ್ಲಂಘನೆ: ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇ ನಲ್ಲಿ 13.41 ಲಕ್ಷ ಕೇಸ್ ದಾಖಲು

ಹೆದ್ದಾರಿಯಲ್ಲಿ ವೇಗದ ಮಿತಿಯನ್ನು ಗಂಟೆಗೆ 100 ಕಿ.ಮೀ.ಗೆ ಇಳಿಸಲಾಗಿದೆ. ವೇಗವನ್ನು ಮೇಲ್ವಿಚಾರಣೆ ಮಾಡಲು ಮತ್ತು ದಂಡ ವಿಧಿಸಲು ವಿವಿಧ ಸ್ಥಳಗಳಲ್ಲಿ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ಆದರೆ ಅಪಘಾತಗಳಲ್ಲಿ ಇಳಿಕೆ ಕಂಡುಬಂದಿಲ್ಲ.

ಸಂಚಾರ ನಿಯಂತ್ರಣ ಮತ್ತು ಸುರಕ್ಷತಾ ಕ್ರಮಗಳ ಮೇಲೆ ಹೆಚ್ಚಿನ ಒತ್ತು ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ ಮಾದೇಗೌಡ ಒತ್ತಾಯಿಸಿದ್ದಾರೆ. "ಬೆಂಗಳೂರು-ಮೈಸೂರು ಹೆದ್ದಾರಿ ಪ್ರೈವೇಟ್ ಲಿಮಿಟೆಡ್ HAM ಯೋಜನೆಯಡಿ ಹೆಚ್ಚುವರಿ ರಸ್ತೆ ಸುರಕ್ಷತಾ ಕ್ರಮಗಳನ್ನು ಪ್ರಾರಂಭಿಸಿದೆ. ಇದರ ಭಾಗವಾಗಿ, ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಸ್ಪೀಡ್ ಬ್ರೇಕರ್‌ಗಳು ಮತ್ತು ಸೈನ್‌ಬೋರ್ಡ್‌ಗಳೊಂದಿಗೆ ಮಂಡ್ಯ ಜಿಲ್ಲೆಯ ತೂಬಿನಕೆರೆ ಬಳಿ ಸೇವಾ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com