

ಬೆಳಗಾವಿ: ರಾಜ್ಯ ಸರ್ಕಾರವು ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಯನ್ನು ಅನುಸರಿಸಲು ಬದ್ಧವಾಗಿದೆ. ಪ್ರಸ್ತುತ ಒಟ್ಟು ರಾಜ್ಯ ದೇಶೀಯ ಉತ್ಪನ್ನ (GSDP)ದ ಶೇಕಡಾ 3ಕ್ಕೆ ಬದ್ಧವಾಗಿರುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆಯಲ್ಲಿ ತಿಳಿಸಿದರು.
ಸರ್ಕಾರವು ಯಾವುದೇ ತುರ್ತು ಪರಿಸ್ಥಿತಿಗಳನ್ನು ಎದುರಿಸಿದರೆ ಈ ಮಿತಿಯನ್ನು ಉಲ್ಲಂಘಿಸಬಹುದು ಎಂದು ಅವರು ಹೇಳಿದರು.
ಪೂರಕ ಬಜೆಟ್ ಅಂದಾಜಿನ ಮೇಲಿನ ಚರ್ಚೆಯಲ್ಲಿ, ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ರಾಜ್ಯದ ಹೆಚ್ಚಿದ ಹಣಕಾಸಿನ ಕೊರತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಸರ್ಕಾರ ನೀಡಿದ ದತ್ತಾಂಶದ ಪ್ರಕಾರ, ಅದು 2.95% ನಲ್ಲಿಯೇ ಉಳಿದಿದೆ, ಇದು ಮಿತಿಯ ಹತ್ತಿರದಲ್ಲಿದೆ ಎಂದರು.
2023-24 ರಲ್ಲಿ 65,525 ರೂಪಾಯಿಗಳಷ್ಟಿದ್ದ ಕೊರತೆಯನ್ನು ಆರ್ಥಿಕ ವರ್ಷ 2026ರಲ್ಲಿ 90,420 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ GSDP ಯ 2.55 ರಿಂದ 2.99% ಕ್ಕೆ ಹೆಚ್ಚಿಸಲಾಗಿದೆ ಎಂದರು. ಕರ್ನಾಟಕವು ಆರ್ಥಿಕವಾಗಿ ಉತ್ತಮವಾಗಿ ನಿರ್ವಹಿಸಲ್ಪಡುವ ರಾಜ್ಯವಾಗಿದ್ದರೂ, ರಾಜ್ಯದ ಸಾಲವು ಕಳೆದ ವರ್ಷದ 3.24 ಲಕ್ಷ ಕೋಟಿ ರೂಪಾಯಿಗಳಿಂದ 4.08 ಲಕ್ಷ ಕೋಟಿಗೆ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಂದಾಜು 2.08 ಲಕ್ಷ ಕೋಟಿ ರೂಪಾಯಿಗೆ ಹೋಲಿಸಿದರೆ ವರಮಾನ ಸಂಗ್ರಹ ಕೇವಲ 90,998 ಕೋಟಿ ಮಾತ್ರ. ಸರ್ಕಾರದ ಕಳಪೆ ನಿರ್ವಹಣೆ ಮುಂದುವರಿದರೆ, ಹಣಕಾಸಿನ ಕೊರತೆಯು ಶೇಕಡಾ 3ರ ಮಿತಿಯನ್ನು ಮೀರಬಹುದು ಎಂದು ಅಶೋಕ ಹೇಳಿದರು. ಆದರೆ ಸರ್ಕಾರವು ಮಿತಿಯನ್ನು ದಾಟಲು ಬಿಡುವುದಿಲ್ಲ ಎಂದು ಕೃಷ್ಣ ಭೈರೇಗೌಡ ಭರವಸೆ ನೀಡಿದರು.
Advertisement