ಹುಣಸೆ, ಹಲಸು, ನೇರಳೆ ಹಣ್ಣುಗಳಿಗೆ ರಾಷ್ಟ್ರೀಯ ಮಂಡಳಿ ಸ್ಥಾಪಿಸಿ: ಕೇಂದ್ರಕ್ಕೆ ಎಚ್‌ಡಿ ದೇವೇಗೌಡ ಒತ್ತಾಯ

ಔಷಧೀಯ ಕೈಗಾರಿಕೆಗಳಿಂದ ಬೇಡಿಕೆ ಸೇರಿದಂತೆ ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ಹಣ್ಣುಗಳು ಮತ್ತು ಅವುಗಳ ಉಪ-ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ.
HD Devegowda meets Union Minister for Agriculture Shivraj Singh Chouhan in Delhi on Friday. Union Minister for Heavy Industries HD Kumaraswamy was present.
ಕೇಂದ್ರ ಸಚಿವ ಶಿವರಾಜ್‌ ಸಿಂಗ್ ಚೌಹಾಣ್ ಅವರನ್ನು ಭೇಟಿಯಾದ ಎಚ್‌ಡಿ ದೇವೇಗೌಡ.
Updated on

ಬೆಂಗಳೂರು: ಹುಣಸೆ, ಹಲಸು ಮತ್ತು ನೇರಳೆ ಮುಂತಾದ ಪೌಷ್ಟಿಕಾಂಶಯುಕ್ತ ಹಣ್ಣಿನ ಬೆಳೆಗಳಿಗಾಗಿ ರಾಷ್ಟ್ರೀಯ ಮಂಡಳಿಯನ್ನು ಸ್ಥಾಪಿಸುವಂತೆ ಮಾಜಿ ಪ್ರಧಾನಿ ಮತ್ತು ರಾಜ್ಯಸಭಾ ಸದಸ್ಯ ಎಚ್‌ಡಿ ದೇವೇಗೌಡ ಅವರು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ಮಾಜಿ ಪ್ರಧಾನಿ, ಹುಣಸೆ, ಹಲಸು ಮತ್ತು ನೇರಳೆ ಹಣ್ಣುಗಳನ್ನು ಸಾವಯವವಾಗಿ ಬೆಳೆಯಲಾಗುತ್ತದೆ. ಕಡಿಮೆ ಮಳೆಯ ಅಗತ್ಯವಿರುತ್ತದೆ ಮತ್ತು ತುಲನಾತ್ಮಕವಾಗಿ ಕಡಿಮೆ ವೆಚ್ಚದಲ್ಲಿ ಬೆಳೆಸಲಾಗುತ್ತದೆ. ಪ್ರತಿ ವರ್ಷ ದೊಡ್ಡ ಪ್ರಮಾಣದ ಉತ್ಪಾದನೆ ಮತ್ತು ಕೊಯ್ಲು ಮಾಡುತ್ತಿದ್ದರೂ, ಕೊಯ್ಲು ಮಾಡುವಲ್ಲಿನ ತೊಂದರೆ, ಖಚಿತ ಖರೀದಿದಾರರ ಕೊರತೆ, ಅಸಮರ್ಪಕ ಸಂಸ್ಕರಣಾ ಸೌಲಭ್ಯಗಳು ಮತ್ತು ದೇಶಾದ್ಯಂತದ ಕೋಲ್ಡ್ ಸ್ಟೋರೇಜ್ ಕೇಂದ್ರಗಳಿಗೆ ಸೀಮಿತ ಪ್ರವೇಶದಿಂದಾಗಿ ಹಣ್ಣುಗಳ ಗಮನಾರ್ಹ ಭಾಗವು ಕೊಯ್ಲು ಮಾಡದೆ ಮತ್ತು ಬಳಕೆಯಾಗದೆ ಉಳಿಯುತ್ತದೆ ಎಂದು ಗಮನ ಸೆಳೆದಿದ್ದಾರೆ.

ಔಷಧೀಯ ಕೈಗಾರಿಕೆಗಳಿಂದ ಬೇಡಿಕೆ ಸೇರಿದಂತೆ ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ಹಣ್ಣುಗಳು ಮತ್ತು ಅವುಗಳ ಉಪ-ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದಿದ್ದಾರೆ.

image-fallback
ಹಲಸು ಉತ್ಪನ್ನಗಳಿಗೆ ವಿಫುಲ ಬೇಡಿಕೆ

ಪ್ರಾರಂಭದಲ್ಲಿ ಎರಡು ಅಥವಾ ಮೂರು ರಾಜ್ಯಗಳಲ್ಲಿ ಪ್ರಾಯೋಗಿಕ ಮಾದರಿಯನ್ನು ಸ್ಥಾಪಿಸಬಹುದು. ನಂತರ ಎರಡನೇ ಹಂತದಲ್ಲಿ ದೇಶದಾದ್ಯಂತ ಇದನ್ನು ಪುನರಾವರ್ತಿಸಬಹುದು ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.

ಪ್ರಸ್ತಾವನೆಯ ಪ್ರಕಾರ, ಪರಿಣಾಮಕಾರಿ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಕನಿಷ್ಠ ಹೆಚ್ಚುವರಿ ಸಿಬ್ಬಂದಿಯೊಂದಿಗೆ ಮೂರು ವರ್ಷಗಳ ಅವಧಿಗೆ ವಾರ್ಷಿಕ 3,000 ಕೋಟಿ ರೂ.ಗಳ ಆರಂಭಿಕ ಬಜೆಟ್ ಅನ್ನು ಸೂಚಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com