

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಎರಡನೇ ಲೂಪ್‌ನ ಕೆಲಸವನ್ನು ಪೂರ್ಣಗೊಳಿಸಿ ಪ್ರಾಯೋಗಿಕ ವಾಹನ ಸಂಚಾರಕ್ಕೆ ಮುಕ್ತಗೊಳಿಸುವುದರಿಂದ ಜನದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ
ಹೆಬ್ಬಾಳ ಮೇಲ್ಸೆತುವೆಯ ಹೊಸ ಲೂಪ್ ರ‍್ಯಾಂಪ್ ಸಂಚಾರಕ್ಕೆ ಮುಕ್ತವಾಗಿದ್ದು, ಯಲಹಂಕ, ಸಹಕಾರನಗರ, ಜಕ್ಕೂರು, ತುಮಕೂರು ರಸ್ತೆಯ ವಾಹನಗಳು ನಗರ ಪ್ರವೇಶಿಲು ಅನುಕೂಲ ಆಗಿದೆ. ಹೊಸ ಲೂಪ್ ರ‍್ಯಾಂಪ್ ಓಪನ್‌ಗೆ ವಾಹನ ಸವಾರರು ಖುಷಿಯಾಗಿದ್ದಾರೆ.
ಹೆಬ್ಬಾಳ ಮೇಲ್ಸೆತುವೆಯ ಮತ್ತೊಂದು ಹೊಸ ಲೂಪ್ ರ‍್ಯಾಂಪ್ ಸಂಚಾರಕ್ಕೆ ಮುಕ್ತ ಆಗಿದೆ. ಎಸ್ಟಿಮ್ ಮಾಲ್ ಮತ್ತು ತುಮಕೂರು ರಸ್ತೆ ವಾಹನ ಸವಾರರು ಮೇಖ್ರಿ ಸರ್ಕಲ್ ಪ್ರವೇಶಕ್ಕೆ ತುಂಬಾ ಅನುಕೂಲಕರ ಮತ್ತು ಯಲಹಂಕ, ಜಕ್ಕೂರು, ಸಹಕಾರನಗರದಿಂದ ನಗರದ ಪ್ರವೇಶಕ್ಕೆ ತುಂಬಾ ಅನುಕೂಲ ಈ ಹೊಸ ಲೂಪ್ ರ‍್ಯಾಂಪ್.
ಕಳೆದ ಆಗಸ್ಟ್ ನಲ್ಲಿ ಕೆ.ಆರ್ ಪುರಂನಿಂದ ಮೇಖ್ರಿ ಸರ್ಕಲ್ ಕಡೆಗೆ ಲೂಪ್ ರ‍್ಯಾಂಪ್ ಓಪನ್ ಆಗಿತ್ತು. ಇನ್ನೊಂದು ಮೂರು ದಿನಗಳಲ್ಲಿ ಹೊಸ ರ‍್ಯಾಂಪ್‌ಗೂ, ವಿಮಾನ ನಿಲ್ದಾಣದಿಂದ ಬರುವ ವಾಹನಗಳ ಹಳೆಯ ಫ್ಲೈಓವರ್‌ಗೂ ನಡುವೆ ಬೇರ್ಪಡಿಸುವ ಬ್ಯಾರಿಕೇಡ್ ನಿರ್ಮಾಣವಾಗಲಿದೆ.
ಇದರಿಂದ ಸಂಚಾರ ಸುಗಮವಾಗಲಿದ್ದು, ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆಯಾಗಲಿದೆ. ಈ ಹೊಸ ರ‍್ಯಾಂಪ್‌ನಿಂದ ಯಲಹಂಕ, ಜಕ್ಕೂರು, ಸಂಜಯನಗರ, ಕೆಂಪಾಪುರ ಕಡೆಯಿಂದ ಬರುವ ವಾಹನ ಸವಾರರಿಗೆ ಅನುಕೂಲವಾಗಲಿದೆ. ಮೊದಲ ಹಂತದ ರ‍್ಯಾಂಪ್ ಉದ್ಘಾಟನೆ ಬಳಿಕ ಹೆಬ್ಬಾಳ ಜಂಕ್ಷನ್‌ನಲ್ಲಿ ಟ್ರಾಫಿಕ್ ಶೇ. 25-30 ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement