ಡಿಕೆಶಿಗೆ 'ಸಿಎಂ ಕುರ್ಚಿ' ಸಿಗುತ್ತಾ? ಕೋಡಿಶ್ರೀ ಸ್ಫೋಟಕ ಭವಿಷ್ಯ!

ಬೆಳಗಾವಿಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿದ ಕೋಡಿ ಶ್ರೀಗಳು, ಹಾಲುಮತ ಸಮಾಜದವರಿಂದ ಅಧಿಕಾರ ಕಿತ್ತುಕೊಳ್ಳೊದು ಅಷ್ಟು ಸುಲಭವಲ್ಲ, ಕಷ್ಟ ಕಷ್ಟ ಎಂದಿದ್ದಾರೆ.
Kodi shree and cm, dks casual Images
ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ
Updated on

ಬೆಳಗಾವಿ: ರಾಜ್ಯದಲ್ಲಿ ಸಿಎಂ ಕುರ್ಚಿ ಕಾದಾಟ ಹಾಗೂ ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ಬೆಂಬಲಿಗರ ನಡುವಿನ ಬಣ ಬಡಿದಾಟ, ಪರ, ವಿರೋಧ ಅಭಿಪ್ರಾಯಗಳ ನಡುವೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿದ ಕೋಡಿ ಶ್ರೀಗಳು, ಹಾಲುಮತ ಸಮಾಜದವರಿಂದ ಅಧಿಕಾರ ಕಿತ್ತುಕೊಳ್ಳೊದು ಅಷ್ಟು ಸುಲಭವಲ್ಲ, ಕಷ್ಟ ಕಷ್ಟ ಎಂದಿದ್ದಾರೆ.

ತಾನಾಗಿಯೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅಧಿಕಾರ ಬಿಟ್ಟು ಕೊಟ್ರೇ ಮಾತ್ರ ಬೇರೆಯರಿಗೆ ಅವಕಾಶ ಸಿಗಬಹುದು ಎಂದಿದ್ದಾರೆ.

Kodi shree and cm, dks casual Images
ಅಧಿಕಾರ ಶಾಶ್ವತವಲ್ಲ; ತಮ್ಮ ತಂದೆಯ ಇಚ್ಛೆಯಂತೆಯೇ ನಡೆಯುವೆ: ಯತೀಂದ್ರ ಸಿದ್ದರಾಮಯ್ಯ

ಸಿದ್ದರಾಮಯ್ಯ ತಾನೇ ಅಧಿಕಾರ ಬಿಟ್ಟು ಕೊಡುವವರೆಗೂ ಡಿಕೆಶಿಗೆ ಅಧಿಕಾರ ಸಿಗೊದಿಲ್ಲ ಅಂತ ಪರೋಕ್ಷವಾಗಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವ ಡಿಕೆ ಶಿವಕುಮಾರ್​ಗೆ ಕೋಡಿ ಶ್ರೀ ಭವಿಷ್ಯ ನಿರಾಸೆ ಮೂಡಿಸಿದೆ.

ಅರಸನ ಅರಮನೆಗೆ ಕಾರ್ಮೋಡ ಕವಿದಿದೆ. ಅರಸನ ಬಂಡಾರವೇ ಬಜೆಟ್ ಎಂದಿದ್ದಾರೆ. ವರ್ಷದ ಬಜೆಟ್​ ಮುಗಿದ ಬಳಿಕ ಅವರಾಗಿ ಸ್ಥಾನ ಬಿಟ್ಟು ಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶವಿದೆ. ಇಲ್ಲವಾದ್ರೆ ಕಷ್ಟವಿದೆ. ಕೇಂದ್ರದಲ್ಲೂ ಪರಿಸ್ಥಿತಿ ಬದಲಾವಣೆ ಕಷ್ಟವಾಗುತ್ತೆ ಎಂದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com