ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ, ಮರಾಠಾ ಸಮಾಜವನ್ನು ಬಲಿಷ್ಠವಾಗಿ ಕಟ್ಟುವ ಹಂಬಲವಿದೆ: ಸಚಿವ ಸಂತೋಷ ಲಾಡ್

ಸಮಾಜದ ಸಂಘಟನೆಗಾಗಿ ಹಣ ನೀಡಲು ಸಾಧ್ಯವಿಲ್ಲದೆ ಇದ್ದವರು ಸಮಯವನ್ನು ನೀಡಿ. ಸಮಾಜಕ್ಕೆ ಸಮಯ ನೀಡುವವರು ಹಣ ನೀಡಿದವರಿಗಿಂತ ದೊಡ್ಡವರು. ರಾಜ್ಯಾದ್ಯಂತ ಮರಾಠಾ ಸಮಾಜವನ್ನು ಬಲಿಷ್ಠವಾಗಿ ಕಟ್ಟಬೇಕು ಎಂಬ ಹಂಬಲವಿದೆ.
Labour minister Santosh Lad
ಸಂತೋಷ ಲಾಡ್ (ಸಂಗ್ರಹ ಚಿತ್ರ)
Updated on

ಚಿಕ್ಕೋಡಿ: ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ ಎಂದು ಕಾರ್ಮಿಕ ಸಚಿವ ಮತ್ತು ಮರಾಠಾ ಸಮುದಾಯದ ನಾಯಕ ಸಂತೋಷ್ ಲಾಡ್ ಅವರು ಭಾನುವಾರ ಹೇಳಿದ್ದಾರೆ.

ಚಿಕ್ಕೋಡಿ ಪಟ್ಟಣದ ಪದ್ಮ ಮಂಗಲ್ ಕಾರ್ಯಾಲಯದಲ್ಲಿ ನಡೆದ ಚಿಕ್ಕೋಡಿ ತಾಲ್ಲೂಕಿನ ಮರಾಠಾ ಸಮುದಾಯದ ಸಮಾವೇಶದಲ್ಲಿ ಮಾತನಾಡಿರುವ ಅವರು, ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ. ಮರಾಠಾ ಸಮುದಾಯವನ್ನು ದಾರಿತಪ್ಪಿಸುವವರನ್ನು ಯುವಕರು ನಂಬಬಾರದು ಎಂದು ಹೇಳಿದರು.

ಮರಾಠಾ ಸಮುದಾಯವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ, ಅದು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಗತಿ ಸಾಧಿಸಬಹುದು. ಮರಾಠಾ ಸಮುದಾಯ ಇಂದು ಅನೇಕ ಅಂಶಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ. ಸಮುದಾಯವನ್ನು ಉನ್ನತೀಕರಿಸಲು ಬಲವಾದ ಸಂಘಟನೆ ಅತ್ಯಗತ್ಯ ಎಂದು ತಿಳಿಸಿದರು.

ರಾಜಕೀಯ ಅಥವಾ ವಿಭಜಕ ಉದ್ದೇಶಗಳಿಗಾಗಿ ಶಿವಾಜಿ ಮಹಾರಾಜರ ಪರಂಪರೆಯನ್ನು ತಪ್ಪಾಗಿ ಪ್ರತಿನಿಧಿಸಬಾರದು. ರಾಜಕೀಯದಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ. ಸಮಾಜ ಸೇವೆಯೇ ತನ್ನ ಮೊದಲ ಆದ್ಯತೆಯಾಗಿದೆ ಎಂದರು.

Labour minister Santosh Lad
ಶಿವಾಜಿಯನ್ನು ಮುಸ್ಲಿಂ ವಿರೋಧಿ ಅನ್ನಬಾರದು: ಸಚಿವ ಸಂತೋಷ್​​ ಲಾಡ್; ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು- ಯತ್ನಾಳ್

ಇಲ್ಲಿಯವರೆಗೆ ಬಂದಿರುವ ಯಾವುದೇ ಸರ್ಕಾರ ಮರಾಠಾ ಸಮಾಜಕ್ಕೆ ವಿಶೇಷವಾದುದನ್ನು ಏನನ್ನೂ ಮಾಡಿಲ್ಲ.. ಇತರ ಸಮಾಜಕ್ಕಿಂತ ಮರಾಠಾ ಸಮಾಜ ಹಿಂದುಳಿದಿದೆ. ಸಮಾಜದ ಸಂಘಟನೆಗಾಗಿ ಹಣ ನೀಡಲು ಸಾಧ್ಯವಿಲ್ಲದೆ ಇದ್ದವರು ಸಮಯವನ್ನು ನೀಡಿ. ಸಮಾಜಕ್ಕೆ ಸಮಯ ನೀಡುವವರು ಹಣ ನೀಡಿದವರಿಗಿಂತ ದೊಡ್ಡವರು. ರಾಜ್ಯಾದ್ಯಂತ ಮರಾಠಾ ಸಮಾಜವನ್ನು ಬಲಿಷ್ಠವಾಗಿ ಕಟ್ಟಬೇಕು ಎಂಬ ಹಂಬಲವಿದೆ ಎಂದು ಹೇಳಿದರು.

ಮಾಜಿ ಸಚಿವ ಶ್ರೀಮಂತ ಪಾಟೀಲ್ ಮಾತನಾಡಿ, "ಮರಾಠಾ ಸಮುದಾಯ ಒಗ್ಗೂಡಿದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ನಾವು ಸ್ವಾಭಿಮಾನದಿಂದ ಬದುಕಬೇಕಿದೆ. ಬಂಡವಾಳ ಇಲ್ಲ ಎಂದು ಸಮಾಜದ ಯುವಕರು ಕೈಕಟ್ಟಿ ಕೂರದೇ ಕಡಿಮೆ ಬಂಡವಾಳವಿದ್ದರೂ ಉದ್ಯೋಗ ಮಾಡುವಂತಹ ಕೌಶಲ್ಯಗಳು ಇವೆ. ಅವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಅಜೀತ ನಿಂಬಾಳಕರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಹೆಚ್ ಮರಿಯೋಜಿರಾವ್, ಮುಖಂಡರಾದ ಬಿ ಆರ್ ಯಾದವ, ರಾಮಾ ಮಾನೆ, ಅನಿಲ ಮಾನೆ, ಬಾಳಸಾಹೇಬ ಪಾಟೀಲ, ಸುಪ್ರಿಯಾ ದೇಸಾಯಿ, ಟಿ ಎಸ್ ಮೋರೆ, ಕಾಶಿನಾಥ ಸುಳಕುಡೆ, ಕಿಶೋರ ಪವಾರ, ಜ್ಯೋತಿಬಾ ಕಾಮಕರ, ರಂಜೀತ ಶಿರಶೇಟ, ಅನಿಲ ಪಾಟೀಲ, ಅಣ್ಣಾ ಪವಾರ, ಅಪ್ಪಾಸಾಹೇಬ ಪವಾರ, ಪಾಂಡುರಂಗ ಮಾನೆ, ಅಮರ ಯಾದವ ಇತರರು ಹಾಜರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com