ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನಲೆ; ಬೆಳಗಿನ ಜಾವ 3 ಗಂಟೆಯವರೆಗೆ ಮೆಟ್ರೋ ರೈಲು ಸಂಚಾರ

ಕೆಲವು ಮಾರ್ಗಗಳಲ್ಲಿ ಕೊನೆಯ ರೈಲುಗಳು ಬೆಳಗಿನ ಜಾವ 3.10 ರವರೆಗೆ ಚಲಿಸುತ್ತವೆ. ಎಂಜಿ ರಸ್ತೆ ನಿಲ್ದಾಣವು ರಾತ್ರಿ 10 ರಿಂದ ಮುಚ್ಚಲಿದೆ. ಮೆಜೆಸ್ಟಿಕ್​ನಲ್ಲಿ ರಾತ್ರಿ 2.45ಕ್ಕೆ ಕೊನೆಯ ರೈಲು ಇರಲಿದೆ.
Metro Rail (file image)
ಮೆಟ್ರೋ ರೈಲು (ಸಂಗ್ರಹ ಚಿತ್ರ)
Updated on

ಬೆಂಗಳೂರು: ಹೊಸ ವರ್ಷ ಬರಮಾಡಿಕೊಳ್ಳಲು ಎರಡು ದಿನಗಳ ಮಾತ್ರ ಬಾಕಿ ಉಳಿದಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಫುಲ್​ ಅಲರ್ಟ್​ ಆಗಿದ್ದಾರೆ.

ನಗರದಾಧ್ಯಂತ ಬಿಗಿ ಬಂದೋಬಸ್ತ್​​ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕೋರಮಂಗಲ , ಇಂದಿರಾ ನಗರ, ಎಂ.ಜಿ ರೋಡ್ ಹೀಗೆ ಪಾರ್ಟಿ ಹಾಟ್​​ಸ್ಪಾಟ್​​​ಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಮಧ್ಯೆ ಪಾರ್ಟಿ ಪ್ರಿಯರಿಗೆ ನಮ್ಮ ಮೆಟ್ರೋ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್​​ 31 ರಾತ್ರಿ ಮತ್ತು ಜನರವರಿ 1ರ ಬೆಳಗ್ಗೆ ವಿಶೇಷ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಹೊಸ ವರ್ಷಾಚರಣೆಯ ವೇಳೆ ಪ್ರಯಾಣಿಕರಿಗೆ ಅನುಕೂಲವಾಗಲು ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಸೇವಾ ಸಮಯವನ್ನ ವಿಸ್ತರಿಸಿದೆ.

ಕೆಲವು ಮಾರ್ಗಗಳಲ್ಲಿ ಕೊನೆಯ ರೈಲುಗಳು ಬೆಳಗಿನ ಜಾವ 3.10 ರವರೆಗೆ ಚಲಿಸುತ್ತವೆ. ಎಂಜಿ ರಸ್ತೆ ನಿಲ್ದಾಣವು ರಾತ್ರಿ 10 ರಿಂದ ಮುಚ್ಚಲಿದೆ. ಮೆಜೆಸ್ಟಿಕ್​ನಲ್ಲಿ ರಾತ್ರಿ 2.45ಕ್ಕೆ ಕೊನೆಯ ರೈಲು ಇರಲಿದೆ. ಜನ ಹೆಚ್ಚು ಸೇರುವುದರಿಂದ ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಕೌಂಟರ್ನಲ್ಲಿ ಟಿಕೆಟ್ ಸಿಗುವುದಿಲ್ಲ. ಈ ಸಮಯದಲ್ಲಿ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಸ್ಟೇಷನ್​ನಲ್ಲಿ ಕೌಂಟರ್ ಕ್ಲೋಸ್ ಆಗಲಿದ್ದು, ಕ್ಯೂ ಆರ್ ಕೋಡ್ ಬಳಸಿ ಪ್ರಯಾಣ ಮಾಡಬೇಕು ಎಂದು ಬಿಎಂಆರ್​ಸಿಎಲ್​​ ಮಾಹಿತಿ ನೀಡಿದೆ.

ನೇರಳೆ ಮಾರ್ಗ ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟಕ್ಕೆ ಮತ್ತು ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ ಕೊನೆಯ ರೈಲುಗಳು ಕ್ರಮವಾಗಿ ಬೆಳಿಗ್ಗೆ 1.45 ಮತ್ತು ಬೆಳಿಗ್ಗೆ 2 ಗಂಟೆಗೆ ಹೊರಡುತ್ತವೆ. ಗ್ರೀನ್ ಲೈನ್‌ನಲ್ಲಿ, ಮಾದಾವರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ನಡುವಿನ ಕೊನೆಯ ಸೇವೆಗಳು ಎರಡೂ ದಿಕ್ಕುಗಳಲ್ಲಿ ಬೆಳಿಗ್ಗೆ 2 ಗಂಟೆಗೆ ಹೊರಡುತ್ತವೆ.

Metro Rail (file image)
ಹೊಸ ವರ್ಷ: ನಮ್ಮ ಮೆಟ್ರೋ ಸೇವೆಗಳ ಅವಧಿ ವಿಸ್ತರಣೆ- BMRCL

ಪಾರ್ಟಿ ಹಾಟ್​ಸ್ಪಾಟ್​ ಆಗಿರುವ ಎಂ.ಜಿ ರೋಡ್​​​​ನಲ್ಲಿ ಹೊಷವರ್ಷಾಚರಣೆಗೆ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದ್ದು, ಈ ಹಿನ್ನೆಲೆ ಬಿಎಂಆರ್​ಸಿಎಲ್​​, ಡಿಸೆಂಬರ್ 31ರ ರಾತ್ರಿ ಎಂ.ಜಿ ರೋಡ್ ಮೆಟ್ರೋ ನಿಲ್ದಾಣ ಬಂದ್ ಮಾಡಲಿದೆ. ರಾತ್ರಿ 10ಗಂಟೆಯಿಂದ ಎಂಟ್ರಿ ಮತ್ತು ಎಗ್ಸಿಟ್ ಬಂದ್ ಆಗಲಿದೆ.

ಹೆಚ್ಚಿನ ಜನ ಸೇರುವುದರಿಂದ ಎಂ.ಜಿ ರಸ್ತೆ ಮೆಟ್ರೋ ಸ್ಟೇಷನ್ ಕ್ಲೋಸ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದೆ. ಆದರೆ, ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಸ್ಟೇಷನ್ ಕಾರ್ಯನಿರ್ವಹಿಸುತ್ತದೆ ಎಂದು ಬಿಎಂಆರ್​ಸಿಎಲ್​​ ತಿಳಿಸಿದೆ.

ಹಳದಿ ಮಾರ್ಗದಲ್ಲಿ, ರಾತ್ರಿಯ ನಂತರ ಸೇವೆಗಳು ಆರಂಭವಾಗಲಿದ್ದು, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಕೊನೆಯ ರೈಲು ಬೆಳಗಿನ ಜಾವ 3.10 ಕ್ಕೆ ಹೊರಡಲಿದ್ದು, ಬೊಮ್ಮಸಂದ್ರದಿಂದ ಆರ್‌ವಿ ರಸ್ತೆಗೆ ಅಂತಿಮ ರೈಲು ಬೆಳಗಿನ ಜಾವ 1.30 ಕ್ಕೆ ಹೊರಡಲಿದೆ.

ಪ್ರಮುಖ ಇಂಟರ್‌ಚೇಂಜ್ ಆಗಿರುವ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್, ನಾಲ್ಕು ದಿಕ್ಕುಗಳ ಕಡೆಗೆ - ವೈಟ್‌ಫೀಲ್ಡ್, ಚಲ್ಲಘಟ್ಟ, ಮಾದವರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ - ಬೆಳಗಿನ ಜಾವ 2.45 ಕ್ಕೆ ಕೊನೆಯ ರೈಲು ಸಂಚರಿಸಲಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com