Karwar: ಬಸ್ ನಲ್ಲಿ ನಿದ್ದೆ ಮಾಡ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ, ಕಾಮುಕನಿಗೆ ಧರ್ಮದೇಟು.. Video Viral

ಕಾರವಾರದಿಂದ ಅಂಕೋಲಾಗೆ ತೆರಳುತ್ತಿದ್ದ ಯುವತಿ ಬಸ್ ನಲ್ಲಿ ತಮ್ಮ ಸೀಟ್ ನಲ್ಲಿ ನಿದ್ರಿಸುತ್ತಿದ್ದರು. ಸಂತ್ರಸ್ಥ ಯುವತಿ ಕಾರವಾರದಿಂದ ಅಂಕೋಲಾ ಕಡೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.
young woman sleeping on a bus was sexually harassed by a man
ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ
Updated on

ಕಾರವಾರ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು ನಿದ್ದೆಯಲ್ಲಿದ್ದಾಗ, ಪಕ್ಕದ ಸೀಟಿನಲ್ಲಿದ್ದ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕಾರವಾರದಲ್ಲಿ ನಡೆದಿದೆ.

ಚಲಿಸುವ ಬಸ್‌ನಲ್ಲಿ ನಿದ್ದೆ ಮಾಡುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕಾಮುಕನ ಈ ನೀಚ ಕೃತ್ಯವನ್ನು ಯುವತಿ ಈ ನೀಚ ಕೃತ್ಯವನ್ನು ಎದೆಗುಂದದೆ ವಿಡಿಯೋ ಮಾಡಿ ಕಾಮುಕನ ಬಣ್ಣ ಬಟಾ ಬಯಲು ಮಾಡಿದ್ದಾರೆ.

ಕಾರವಾರದಿಂದ ಅಂಕೋಲಾಗೆ ತೆರಳುತ್ತಿದ್ದ ಯುವತಿ ಬಸ್ ನಲ್ಲಿ ತಮ್ಮ ಸೀಟ್ ನಲ್ಲಿ ನಿದ್ರಿಸುತ್ತಿದ್ದರು. ಸಂತ್ರಸ್ಥ ಯುವತಿ ಕಾರವಾರದಿಂದ ಅಂಕೋಲಾ ಕಡೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಸುದೀರ್ಘ ಪ್ರಯಾಣದ ಆಯಾಸದಿಂದ ಯುವತಿ ಸೀಟಿನಲ್ಲಿ ನಿದ್ದೆಗೆ ಜಾರಿದ್ದರು. ಈ ವೇಳೆ ಪಕ್ಕದ ಸೀಟಿನಲ್ಲಿದ್ದ ಕಾಮುಕ, ಯುವತಿ ನಿದ್ದೆಯಲ್ಲಿದ್ದಾಗ ಆಕೆಯ ಎದೆಯ ಮೇಲೆ ಕೈ ಹಾಕಿದ್ದಾನೆ.

young woman sleeping on a bus was sexually harassed by a man
ಪೀರಿಯಡ್ಸ್ ಸಮಯದಲ್ಲೂ ಸೆ* ಗೆ ಒತ್ತಾಯ, ಅಶ್ಲೀಲ ವಿಡಿಯೋ ನೋಡಿ ಲೈಂಗಿಕ ಕಿರುಕುಳ..: ಪತಿ ವಿರುದ್ಧ ಪತ್ನಿ ದೂರು!

ನಿದ್ದೆಯಲ್ಲಿದ್ದ ಯುವತಿಗೆ ಏನೋ ಸ್ಪರ್ಶವಾದಂತಾಗಿ ಒಮ್ಮೆಲೇ ಎಚ್ಚರಗೊಂಡಾಗ, ಆರೋಪಿಯ ಕೈ ಆಕೆಯ ಎದೆಯ ಮೇಲಿತ್ತು. ಈ ವೇಳೆ ಆಕೆ ದಿಗ್ಭ್ರಾಂತಳಾಗಿದ್ದಾಳೆ. ಈ ವೇಳೆ ದೃತಿ ಗೆಡದ ಯುವತಿ ತಕ್ಷಣವೇ ಮೊಬೈಲ್ ಹೊರತೆಗೆದು ಆರೋಪಿಯ ಕೃತ್ಯವನ್ನು ವಿಡಿಯೋ ಮಾಡಿದ್ದಾರೆ.

ಬಸ್ ನಲ್ಲೇ ಕಾಮುಕನಿಗೆ ಧರ್ಮದೇಟು

ಬಳಿಕ ಯುವತಿ ಸಾರ್ವಜನಿಕವಾಗಿ ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಡಿಯೋ ವೈರಲ್

ಕಾಮುಕನ ಕೃತ್ಯವನ್ನು ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿರುವ ವಿಡಿಯೋದಲ್ಲಿ 'ನಮ್ಮ ರಕ್ಷಣೆಗೆ ನಾವೇ ಮುಂದಾಗಬೇಕು, ಇಂತಹ ಕಾಮುಕರಿಗೆ ತಕ್ಕ ಶಾಸ್ತಿಯಾಗಬೇಕು' ಎಂದು ಸಂದೇಶ ನೀಡಿದ್ದಾರೆ. ಅಲ್ಲದೆ, ಪೊಲೀಸ್ ಹಿರಿಯ ಅಧಿಕಾರಿಗಳನ್ನು ಟ್ಯಾಗ್ ಮಾಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.

ಎಸ್ಪಿ ಖಡಕ್ ಸೂಚನೆ

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪನ್ ಎಂ.ಎನ್. ಅವರು ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ.

ಪ್ರಕರಣದ ತನಿಖೆ ನಡೆಸಿ, ಕೂಡಲೇ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಂತೆ ಅಂಕೋಲಾ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ. ಸದ್ಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಪ್ರಕ್ರಿಯೆ ನಡೆಯುತ್ತಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com