
ಮಾಯಕೊಂಡ (ದಾವಣಗೆರೆ ): ದಾವಣಗೆರೆ ತಾಲ್ಲೂಕಿನ ಕುರ್ಕಿ ಗ್ರಾಮದ ಬಳಿಯ ಭದ್ರಾ ನಾಲೆಯಲ್ಲಿ ಭಾನುವಾರ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿದ್ದಾರೆ.
ಪಾಂಡುರಂಗ ಮತ್ತು ಯತೀಂದ್ರ ಎಂದು ಗುರುತಿಸಲಾಗಿದೆ. ಭಾನುವಾರವಾದ್ದರಿಂದ ಇಬ್ಬರು ಗ್ರಾಮಕ್ಕೆ ಬಂದಿದ್ದರು. ಯತೀಂದ್ರನಿಗೆ ಈಜು ಬಾರದೆ ನೀರಿನಲ್ಲಿ ಮಳುಗುತ್ತಿದ್ದ, ಇದನ್ನು ಗಮನಿಸಿದ ಪಾಂಡುರಂಗ ತನ್ನ ಸ್ನೇಹಿತನನ್ನು ರಕ್ಷಿಸಲು ಧಾವಿಸಿದಾಗ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ, ಈ ಸಂಬಂಧ ಹದಾಯಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement