ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾಲಯದ ಹಸ್ತಪ್ರತಿ, ತಾಳೆಗರಿ ಹಾಗೂ ಪುರಾತನ ಪುಸ್ತಕಗಳ ಡಿಜಿಟಲೀಕರಣ

ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾಲಯ ಹೊಸ ಹೆಜ್ಜೆಯನ್ನು ಇಡುತ್ತಿದೆ. ತನ್ನ ಗ್ರಂಥಾಲಯದಲ್ಲಿರುವ ಪ್ರಾಚೀನ ತಾಳೆಗರಿ, ಹಸ್ತಪ್ರತಿ ಹಾಗೂ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಲು ತಯಾರಿ ನಡೆಸುತ್ತಿದೆ.
Rare books and manuscripts housed at the Oriental Research Institute in Mysuru
ಅಪರೂಪದ ತಾಳೆಗರಿ ಮತ್ತು ಹಸ್ತಪ್ರತಿಗಳು
Updated on

ಮೈಸೂರು: ಹಸ್ತಪ್ರತಿ, ತಾಳೆಗರಿಗಳು ನಮ್ಮ ಇತಿಹಾಸ, ಪರಂಪರೆಯ ಸಂರಕ್ಷಕಗಳು. ನಮ್ಮ ನಾಡಿನ ಭವ್ಯ ಇತಿಹಾಸ ಹಾಗೂ ಪರಂಪರೆಯನ್ನು ತನ್ನೊಡಲಿನಲ್ಲಿ ಇರಿಸಿಕೊಂಡಿರುವ ಇವುಗಳನ್ನು ಜತನವಾಗಿ ಕಾಪಾಡಿಕೊಳ್ಳುವುದೂ ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾಲಯ ಹೊಸ ಹೆಜ್ಜೆಯನ್ನು ಇಡುತ್ತಿದೆ. ತನ್ನ ಗ್ರಂಥಾಲಯದಲ್ಲಿರುವ ಪ್ರಾಚೀನ ತಾಳೆಗರಿ, ಹಸ್ತಪ್ರತಿ ಹಾಗೂ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಲು ತಯಾರಿ ನಡೆಸುತ್ತಿದೆ.

ಸುಮಾರು 45,000 ಮುದ್ರಿತ ಅಪರೂಪದ ಪ್ರಭಾವಶಾಲಿ ಪುಸ್ತಕಗಳ ಸಂಗ್ರಹವನ್ನು ಹೊಂದಿರುವ 138 ವರ್ಷ ಹಳೆಯ ಸಂಸ್ಥೆ ಹೊಂದಿದೆ. ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಇರುವ ಜ್ಯೋತಿಷ್ಯ ಶಾಸ್ತ್ರ, ಆಯುರ್ವೇದ, ಚರಿತ್ರೆ, ರಾಜಕೀಯ ಹೀಗೆ ಹತ್ತು ಹಲವು ಮೌಲ್ಯಗಳ ಗ್ರಂಥಗಳನ್ನು ಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಮೈಸೂರು ವಿವಿ ಈ ಯೋಜನೆಯನ್ನು ರೂಪಿಸಿದೆ. ಈ ಅಮೂಲ್ಯವಾದ ಕೃತಿಗಳನ್ನು ಇ-ಪುಸ್ತಕಗಳಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿದೆ.

ಪುಸ್ತಕಗಳ ಡಿಜಿಟಲೀಕರಣ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಓಲೆ ಗರಿಗಳು ಹಾಗೂ ಪುಸ್ತಕಗಳನ್ನು ಸ್ಕ್ಯಾನ್ ಮಾಡುವ ಕೆಲಸಗಳು ನಡೆಯುತ್ತಿವೆ. ಇದಾದ ಬಳಿಕ ವೆಬ್ ಸೈಟ್ ರೂಪಿಸಿ ಅವುಗಳನ್ನು ಅಪ್ಲೋಡ್ ಮಾಡಲಾಗುತ್ತದೆ.

ಇದರಿಂದ ಪ್ರಾಚ್ಯವಸ್ತು ಸಂಶೋಧನಾ ಸಂಸ್ಥೆಯಲ್ಲಿರುವ ತಾಳೆಗರಿಯ ಗ್ರಂಥಗಳನ್ನು ಯಾರು ಬೇಕಾದರೂ ಸುಲಭವಾಗಿ ಓದಲು ಅವಕಾಶವಾಗಲಿದೆ ಎಂದು ORI ನಿರ್ದೇಶಕ ಮಧುಸೂಧನ್ ತಿಳಿಸಿದ್ದಾರೆ.

Rare books and manuscripts housed at the Oriental Research Institute in Mysuru
ಬೆಂಗಳೂರು ಐಐಎಸ್ಸಿ ದೇಶದಲ್ಲೇ ಅತ್ಯುತ್ತಮ ವಿವಿ, ಸಂಶೋಧನಾ ಸಂಸ್ಥೆ

ಈ ಪುಸ್ತಕಗಳಲ್ಲಿ ಹಲವು 100 ರಿಂದ 150 ವರ್ಷಗಳಷ್ಟು ಹಳೆಯವು. ಈ ಯೋಜನೆ ಮೂಲಕ, ಪ್ರಪಂಚದಾದ್ಯಂತದ ವಿದ್ವಾಂಸರು, ಸಂಶೋಧಕರು ಮತ್ತು ಸಾಮಾನ್ಯ ಓದುಗರು ತಮ್ಮ ಮನೆಯಲ್ಲಿಯೇ ಈ ಪಠ್ಯಗಳನ್ನು ಓದಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯವು ಈಗಾಗಲೇ ತನ್ನ ಅನುಮೋದನೆಯನ್ನು ನೀಡಿದೆ ಮತ್ತು ಶೀಘ್ರದಲ್ಲೇ, ಈ ಸಾಹಿತ್ಯಿಕ ಸಂಪತ್ತು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯವಸ್ತು ಸಂಶೋಧನಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿವೆ.

ಈ ಯೋಜನೆಗೆ ಹಲವರು ಬೆಂಬಲ ನೀಡುತ್ತಿವೆ. ಯೋಜನೆಗೆ 15 ಲಕ್ಷ ರೂಪಾಯಿ ದೇಣಿಗೆ ನೀಡಿರುವ ಸೇವ್ ಅವರ್ ಕಂಟ್ರಿ ಟ್ರಸ್ಟ್‌ನ ಮುಖ್ಯಸ್ಥ ಪದ್ಮಪ್ರಿಯಾ ಅವರ ಸಹಾಯದಿಂದ ಕೈಗೆತ್ತಿಕೊಳ್ಳಲಾಗಿದೆ. ಎರಡು ವರ್ಷಗಳ ಹಿಂದೆ ಎಂಒಯುಗೆ ಸಹಿ ಹಾಕಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com