ಪ್ರಯಾಗ್ ರಾಜ್ ನಂತರ ಮತ್ತೊಂದು ಕುಂಭಮೇಳಕ್ಕೆ ರಾಜ್ಯ ಸಜ್ಜು: ಟಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ದಕ್ಷಿಣದ ಕುಂಭಕ್ಕೆ ಸಿದ್ಧತೆ

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳದ ಮಾದರಿಯಲ್ಲಿ ಮೈಸೂರಿನ ಟಿ ನರಸೀಪುರದಲ್ಲಿರುವ ತ್ರಿವೇಣಿ ಸಂಗಮವನ್ನು ಪ್ರಮುಖ ಯಾತ್ರಾ ಸ್ಥಳವನ್ನಾಗಿ ಮಾಡಲು ಕರ್ನಾಟಕ ಸರ್ಕಾರಿ ಸಂಸ್ಥೆಗಳು ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಿವೆ.
Triveni Sangam in T narasipura
ಟಿ. ನರಸಿಪುರದಲ್ಲಿರುವ ತ್ರಿವೇಣಿ ಸಂಗಮ
Updated on

ಬೆಂಗಳೂರು: ಪ್ರಯಾಗ್‌ರಾಜ್‌ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ದೇಶ ವಿದೇಶದಿಂದ ಭಕ್ತರು ಆಗಮಿಸಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ, ಫೆಬ್ರವರಿ 26 ರವರೆಗೆ ಮಹಾ ಕುಂಭಮೇಳ ನಡೆಯಲಿದೆ. ಅಲ್ಲಿ ಮುಗಿದ ನಂತರ ಶೀಘ್ರದಲ್ಲೇ ದಕ್ಷಿಣದ ಕುಂಭ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕರ್ನಾಟಕದ ತ್ರಿವೇಣಿ ಸಂಗಮದಲ್ಲೂ ಸಿದ್ಧತೆ ಆರಂಭವಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳದ ಮಾದರಿಯಲ್ಲಿ ಮೈಸೂರಿನ ಟಿ ನರಸೀಪುರದಲ್ಲಿರುವ ತ್ರಿವೇಣಿ ಸಂಗಮವನ್ನು ಪ್ರಮುಖ ಯಾತ್ರಾ ಸ್ಥಳವನ್ನಾಗಿ ಮಾಡಲು ಕರ್ನಾಟಕ ಸರ್ಕಾರಿ ಸಂಸ್ಥೆಗಳು ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಿವೆ. ಮೈಸೂರು ಜಿಲ್ಲಾಡಳಿತ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ರಾಜ್ಯ ಸರ್ಕಾರದ ಮುಂದೆ ಇಡಲು ಯೋಜನಾ ಪ್ರಸ್ತಾವನೆಯನ್ನು ರಚಿಸುವಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ.

ಟಿ ನರಸೀಪುರದಲ್ಲಿರುವ ಕಾವೇರಿ, ಕಪಿಲಾ ಮತ್ತು ಪೌರಾಣಿಕ ಸ್ಫಟಿಕಾ ನದಿಗಳ ಸಂಗಮವಾಗುತ್ತಿದೆ. ಉತ್ತರದ ಸಂಗಮದಷ್ಟೇ ಪವಿತ್ರವಾಗಿದೆ. ಎಲ್ಲಾ ಧಾರ್ಮಿಕ ಉದ್ದೇಶಗಳಿಗಾಗಿಯೂ ಸಹ ಹಲವಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ವಾರ್ಷಿಕ ಪವಿತ್ರ ಸ್ನಾನಗಳನ್ನು ನಡೆಸಲಾಗುತ್ತಿದ್ದರೂ, ಇಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮೆಗಾ ಕುಂಭವೂ ನಡೆಯುತ್ತದೆ. ಈ ಬಾರಿ ಇದು 2025 ರಲ್ಲಿ ನಡೆಯಲಿದ್ದು, ಪ್ರಯಾಗ್‌ರಾಜ್ ಮಾದರಿಯಲ್ಲಿ ಇದನ್ನು ಒಂದು ಮೆಗಾ ಕಾರ್ಯಕ್ರಮವನ್ನಾಗಿ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಮತ್ತು ತಂಡಗಳು ಮೂಲಭೂತ ಸೌಲಭ್ಯಗಳ ಕುರಿತು ಕೆಲಸ ಮಾಡುತ್ತಿದ್ದರೆ, ಪ್ರವಾಸೋದ್ಯಮ ಇಲಾಖೆ ಇದನ್ನು ಪ್ರವಾಸಿ ಮತ್ತು ಧಾರ್ಮಿಕ ಸಭೆಯನ್ನಾಗಿ ಮಾಡಲು ಕೆಲಸ ಮಾಡುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಮತ್ತು 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ಮುಗಿದ ಕೂಡಲೇ, ಭಕ್ತರು ಮತ್ತು ಪ್ರವಾಸಿಗರ ಗಮನ ಕರ್ನಾಟಕಕ್ಕೆ ಬದಲಾಗುವಂತೆ ಯೋಜನೆಯನ್ನು ರೂಪಿಸಲಾಗುತ್ತಿದೆ.

Triveni Sangam in T narasipura
ಟಿ. ನರಸಿಪುರ: 3 ದಿನಗಳ ದಕ್ಷಿಣದ ಕುಂಭ ಮೇಳಕ್ಕೆ ತ್ರಿವೇಣಿ ಸಂಗಮ ಸಜ್ಜು

ದಕ್ಷಿಣದ ಸಂಗಮಕ್ಕೆ ಮತ್ತು ನಂತರ ಉತ್ತರದ ಸಂಗಮಕ್ಕೆ, ನಂತರ ಅಯೋಧ್ಯೆ, ಕಾಶಿ ಮತ್ತು ಇತರ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಧಾರ್ಮಿಕ ಸರ್ಕ್ಯೂಟ್ ಅನ್ನು ರೂಪಿಸುವ ಬಗ್ಗೆಯೂ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು.

ಉತ್ಸವದ ಸಮಯದಲ್ಲಿ ಕರ್ನಾಟಕ ಮತ್ತು ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶ ಮತ್ತು ದೇಶದ ಇತರ ಭಾಗಗಳಿಂದ ಜನರು ಸ್ನಾನ ಮಾಡಲು ಸ್ಥಳಕ್ಕೆ ಭೇಟಿ ನೀಡಿದಾಗ ದೇವಾಲಯ ಪಟ್ಟಣವು ಧಾರ್ಮಿಕ ಉತ್ಸಾಹದಿಂದ ಕೂಡಿರುತ್ತದೆ. ಉತ್ಸವದ ಸಮಯದಲ್ಲಿ ಭವ್ಯ ಧಾರ್ಮಿಕ ಮೆರವಣಿಗೆಗಳು ನಡೆಯುತ್ತವೆ, ಅಲ್ಲಿ ಮಠಗಳು ಮತ್ತು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು ಪ್ರಾರ್ಥನೆ ಸಲ್ಲಿಸುತ್ತಾರೆ. ಕೊನೆಯ ಕುಂಭಮೇಳವು 2019 ರಲ್ಲಿ ನಡೆದಿತ್ತು. ಸಾಂಕ್ರಾಮಿಕ ರೋಗದಿಂದಾಗಿ 2022 ರಲ್ಲಿ ನಡೆಯಲಿಲ್ಲ. ಆದಾಗ್ಯೂ, ಸಾಂಕ್ರಾಮಿಕ ರೋಗದ ನಂತರ ಭಕ್ತರು ಪ್ರಾರ್ಥನೆ ಸಲ್ಲಿಸಲು ಸ್ಥಳಕ್ಕೆ ಭೇಟಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com