
ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ಆರ್ಡರ್ ಬುಕ್ 2,50,000 ಕೋಟಿ ರೂಪಾಯಿಗಳನ್ನು ತಲುಪುವ ನಿರೀಕ್ಷೆಯಿದೆ. ಡಿಸೆಂಬರ್ ವೇಳೆಗೆ ಹೆಚ್ ಎಎಲ್, 1,30,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಆರ್ಡರ್‌ಗಳನ್ನು ಹೊಂದಿದೆ. ಮುಂದಿನ 12 ತಿಂಗಳ ಆರ್ಡರ್ ಅಕ್ರಿಷನ್ 1,65,000 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ ಎಂದು ಪಿಎಸ್‌ಯು ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಡಾ. ಡಿ.ಕೆ. ಸುನಿಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2025 ರಲ್ಲಿ ಎಚ್‌ಎಎಲ್‌ನ ಪ್ರಮುಖ ಒಪ್ಪಂದಗಳ ಕುರಿತು ವಿವರಗಳನ್ನು ಹಂಚಿಕೊಂಡ ಸುನಿಲ್, ಪಿಎಸ್‌ಯುನ ಆರ್ಡರ್ ಪೈಪ್‌ಲೈನ್ ಆರೋಗ್ಯಕರವಾಗಿದೆ ಎಂದು ಹೇಳಿದರು.
ನಾವು ಎರಡು ಪ್ರಮುಖ ಒಪ್ಪಂದಗಳನ್ನು ಸಕ್ರಿಯವಾಗಿ ಅನುಸರಿಸುತ್ತಿದ್ದೇವೆ, ಅವುಗಳೆಂದರೆ 97 ಎಲ್‌ಸಿಎ (ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್) ಎಂಕೆ 1 ಎ ಮತ್ತು 156 ಎಲ್‌ಸಿಎಚ್ (ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್) ಆರ್ಡರ್‌ಗಳು. ಈ ಎರಡು ಆರ್ಡರ್‌ಗಳಿಂದ 1,30,000 ಕೋಟಿ ರೂಪಾಯಿಗಳು ಬರುವ ನಿರೀಕ್ಷೆಯಿದೆ. ಮುಂದಿನ 12 ತಿಂಗಳ ಆರ್ಡರ್‌ಗಳ ಸಂಗ್ರಹವು 1,65,000 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ, ಇದರಲ್ಲಿ Su-30 ಅಪ್‌ಗ್ರೇಡ್, ಇಂಡಿಯನ್ ಮಲ್ಟಿ-ರೋಲ್ ಹೆಲಿಕಾಪ್ಟರ್ ವಿನ್ಯಾಸ ಮತ್ತು ಅಭಿವೃದ್ಧಿ (IMRH D&D) ಮಂಜೂರಾತಿ ಮತ್ತು ನಿಯಮಿತ ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ (ROH) ಆದೇಶಗಳು ಸೇರಿವೆ ಎಂದು ಅವರು ವಿವರಿಸಿದರು.
ಈ ಎಲ್ಲಾ ಆರ್ಡರ್‌ಗಳೊಂದಿಗೆ, 2025-26 ರ ಅಂತ್ಯದ ವೇಳೆಗೆ ಆರ್ಡರ್ ಬುಕ್ ಸ್ಥಾನವು ಸುಮಾರು 2,50,000 ಕೋಟಿ ರೂಪಾಯಿಗೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದರು.
ಸ್ಥಳೀಯ ವಿಮಾನ ಮತ್ತು ಹೆಲಿಕಾಪ್ಟರ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಆತ್ಮನಿರ್ಭರ ಭಾರತ್ ಮಿಷನ್‌ನಲ್ಲಿ HAL ಮುಂಚೂಣಿಯಲ್ಲಿದೆ ಎಂದು ಸೂಚಿಸಿದ ಸುನಿಲ್, "LCA ತೇಜಸ್, LCH ಪ್ರಚಂದ್, ALH ಧ್ರುವ್ ಮತ್ತು HTT-40 ನಂತಹ ಪ್ಲಾಟ್‌ಫಾರ್ಮ್‌ಗಳ ಯಶಸ್ಸು ಶ್ರೇಷ್ಠತೆ, ಸ್ವಾವಲಂಬನೆ ಮತ್ತು ನಾವೀನ್ಯತೆಗೆ ನಮ್ಮ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಪ್ರಸಕ್ತ ವರ್ಷದ ಒಂಬತ್ತು ತಿಂಗಳಲ್ಲಿ, ನಾವು 55,800 ಕೋಟಿ ರೂಪಾಯಿಗಳ ಹೊಸ ಆರ್ಡರ್‌ಗಳನ್ನು ಸ್ವೀಕರಿಸಿದ್ದೇವೆ, ಇದರಲ್ಲಿ 39,000 ಕೋಟಿ ರೂ.ಗಳ ಉತ್ಪಾದನಾ ಆರ್ಡರ್‌ಗಳು (240 AL 31 FP ಎಂಜಿನ್‌ಗಳು - 25,350 ಕೋಟಿ ರೂಪಾಯಿ ಮತ್ತು 12 SU-30 MKI - 12,573 ಕೋಟಿ ರೂಪಾಯಿ ಮತ್ತು 16,500 ಕೋಟಿ ರೂಪಾಯಿಗಳ ROH, ಬಿಡಿಭಾಗಗಳು ಮತ್ತು D&D ಆರ್ಡರ್‌ಗಳು ಸೇರಿವೆ.
ಮಿಲಿಟರಿ ಉತ್ಪನ್ನಗಳ ರಫ್ತು ಸಾವಾಲಾಗಿದೆ. ಒಂಬತ್ತು ತಿಂಗಳ ಅವಧಿಯಲ್ಲಿ, HAL 300 ಕೋಟಿ ರೂಪಾಯಿಗಳ ರಫ್ತು ಆರ್ಡರ್‌ಗಳನ್ನು ಪಡೆದಿದೆ ಎಂದು ಸುನಿಲ್ ಹೇಳಿದರು. ರಫ್ತುಗಳನ್ನು ಹೆಚ್ಚಿಸಲು, ಮಹಾರತ್ನವು ವಿದೇಶಗಳಲ್ಲಿ ಕಚೇರಿಗಳನ್ನು ಸ್ಥಾಪಿಸುವುದು, ನಿರ್ವಹಣೆ ಮತ್ತು ದುರಸ್ತಿಗೆ ಅನುಕೂಲವಾಗುವಂತೆ ಸ್ಥಳೀಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಸೇರಿದಂತೆ ಬಹು-ತಂತ್ರಗಳನ್ನು ರೂಪಿಸಿದೆ ಎಂದು ಅವರು ಹೇಳಿದರು.
ಹೆಚ್ ಎಎಲ್ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ವಾರ್ಷಿಕವಾಗಿ 2,500 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ ಎಂದು ತಿಳಿಸಿದರು.
Advertisement