ಕಾರವಾರ: ಕಾಳಿ ನದಿ ಸೇತುವೆ ಪಿಲ್ಲರ್ ದಿಢೀರ್​ ಕುಸಿತ; ತಪ್ಪಿದ ಭಾರೀ ಅನಾಹುತ

ಪಿಲ್ಲರ್ ಒಂದು ಭಾಗ ಕುಸಿದು ಬಿದ್ದರಿಂದ ಸ್ಲ್ಯಾಬ್​ ಮೇಲೆದ್ದಿದೆ. ಕಳೆದ ವರ್ಷ ಆಗಸ್ಟ್ 7 ರಂದು ಕಾಳಿ ಸೇತುವೆ ಕುಸಿತಗೊಂಡಿತ್ತು.
Old Kali river bridge under repair collapses again
ಕಾಳಿ ನದಿ ಸೇತುವೆ ಪಿಲ್ಲರ್ ಕುಸಿತ
Updated on

ಕಾರವಾರ: ಕಾರವಾರದ ಸದಾಶಿವಗಢದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಹಳೆಯ ಸೇತುವೆಯ ಒಂದು ಭಾಗ ಶುಕ್ರವಾರ ಕುಸಿದು ಬಿದ್ದಿದ್ದರಿಂದ ದೊಡ್ಡ ದುರಂತ ತಪ್ಪಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗೋವಾ ಮತ್ತು ಕಾರವಾರವನ್ನು ಸಂಪರ್ಕಿಸುವ ಈ ಸೇತುವೆ ಬಳಕೆಯಲ್ಲಿಲ್ಲ ಮತ್ತು ದುರಸ್ತಿ ಕಾರ್ಯ ನಡೆಯುತ್ತಿತ್ತು.

ಪಿಲ್ಲರ್ ಒಂದು ಭಾಗ ಕುಸಿದು ಬಿದ್ದರಿಂದ ಸ್ಲ್ಯಾಬ್​ ಮೇಲೆದ್ದಿದೆ. ಕಳೆದ ವರ್ಷ ಆಗಸ್ಟ್ 7 ರಂದು ಕಾಳಿ ಸೇತುವೆ ಕುಸಿತಗೊಂಡಿತ್ತು. ಕುಸಿದು ಬಿದ್ದಿದ್ದ ಕಾಳಿ ಸೇತುವೆ ದುರಸ್ತಿ ಮಾಡುತ್ತಿದ್ದಾಗ ಫಿಲ್ಲರ್ ಕುಸಿದು ಸ್ಲ್ಯಾಬ್ ಸಹಿತ ನದಿಗೆ ಬಿದ್ದ ಪರಿಣಾಮ ಹೊಸ ಸೇತುವೆಗೆ ಸಂಭವಿಸಬಹುದಾದ ಬಹುದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಶುಕ್ರವಾರ ಈ ದುರ್ಘಟನೆ ನಡೆದಿದೆ. ಈ ವೇಳೆ ಯಾವುದೇ ಕಾರ್ಯಾಚರಣೆ ನಡೆಯದೇ ಇರುವ ಕಾರಣ ಸಂಭವಿಸಬಹುದಾಗಿದ್ದ ಇನ್ನಷ್ಟು ಹಾನಿ ತಪ್ಪಿದೆ.

ಗುರುವಾರ ಇದೇ ಸ್ಲ್ಯಾಬ್ ಮೇಲೆ 4-5 ಕಾರ್ಮಿಕರು ತೆರವು ಕಾರ್ಯಾಚರಣೆ ನಡೆಸುತ್ತಿದ್ದರು. ಕಳೆದ 4 ತಿಂಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಕೆಲ ದಿನ ರಾತ್ರಿ 12 ಗಂಟೆಯವರೆಗೂ ಕೆಲಸ ನಡೆಸುತ್ತಿದ್ದರು. ಈಗಾಗಲೇ ಶೇ.70ರಷ್ಟು ತೆರವು ಕಾರ್ಯಾಚರಣೆ ಪೂರ್ಣಗೊಳಿಸಲಾಗಿದೆ.

ಆದರೆ ಇದೀಗ ಶುಕ್ರವಾರ ಬೆಳಗ್ಗೆ ವೇಳೆ ಘಟನೆ ಸಂಭವಿಸಿದ್ದು, ಈ ವೇಳೆ ಕೆಲಸಗಾರರಿಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ ಕಳೆದ ಆಗಸ್ಟ್ 7 ರಂದು ಮಳೆಯ ಅಬ್ಬರಕ್ಕೆ ಕಾಳಿ ಸೇತುವೆ ಕುಸಿದು ಬಿದ್ದಿತ್ತು.

Old Kali river bridge under repair collapses again
ಕಾರವಾರ: ಕಾಳಿ ನದಿ ಸೇತುವೆ ಕುಸಿತ; ಸಂಚಾರ ಅಸ್ತವ್ಯಸ್ತ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com