

ಹುಬ್ಬಳ್ಳಿ: ಪ್ರೇಮಿಗಳ ದಿನಕ್ಕೂ ಮುನ್ನಾದಿನ 18 ವರ್ಷದ ಯುವತಿಯನ್ನು 50 ವರ್ಷದ ಅಂಕಲ್ ಮದುವೆಯಾಗಿದ್ದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹುಡುಗಿಯನ್ನು ಬಲವಂತವಾಗಿ ಮದುವೆಯಾದ ಆರೋಪದ ಮೇಲೆ ಪ್ರಕಾಶ್ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಹುಬ್ಬಳ್ಳಿ ಚಾಲುಕ್ಯ ನಗರದ ನಿವಾಸಿ ಕರೀಷ್ಮಾ ಎಂಬ ಯುವತಿ ಮನೆಯಿಂದ ನಾಪತ್ತೆಯಾಗಿದ್ದರು. ನಂತರ 50 ವರ್ಷದ ಸೆಕ್ಯೂರಿಟಿ ಪ್ರಕಾಶ್ ಎನ್ನುವಾತನ ಜೊತೆ ಪತ್ತೆಯಾಗಿದ್ದಳು. ಅಲ್ಲದೇ ಇಬ್ಬರು ಮದುವೆಯಾಗಿದ್ದರು.
ಅದೇನಾಯ್ತೋ ಏನೋ ಕರೀಷ್ಮಾ ಪ್ರಕಾಶನನ್ನು ಬಿಟ್ಟು ವಾಪಸ್ ಮನೆಗೆ ಬಂದಿದ್ದಾರೆ. ಅಲ್ಲದೇ ತನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಮದುವೆಯಾಗಿದ್ದಾರೆ ಎಂದು ಆರೋಪಿಸಿ ಪ್ರಕಾಶನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.
ಕರೀಷ್ಮಾ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಪ್ರಕಾಶ್, ನನಗೆ ಪೀಡಿಸುತ್ತಿದ್ದರು ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Advertisement