ಕೊಪ್ಪಳ: ರೀಲ್ಸ್ ಗಾಗಿ ತುಂಗಭದ್ರಾ ನದಿಗೆ ಹಾರಿದ್ದ ಹೈದರಬಾದ್​ ಮೂಲದ ವೈದ್ಯೆ ಶವ ಪತ್ತೆ!

ಡಾ. ಅನನ್ಯಾ ರಾವ್ ಮತ್ತು ಇತರೆ ಇಬ್ಬರು ಸ್ನೇಹಿತರಾದ ಸತ್ವಿನ್ ಮತ್ತು ಹಶಿತಾ ಜತೆ ಹಂಪಿಗೆ ಪ್ರವಾಸಕ್ಕೆಂದು ಬಂದಿದ್ದರು.
Doctor jumps into river
ವೈದ್ಯೆ ಅನನ್ಯಾ ನದಿಗೆ ಹಾರಿದ ಕ್ಷಣ
Updated on

ಕೊಪ್ಪಳ: ಮೋಜಿಗಾಗಿ ಫ್ರೆಂಡ್ಸ್ ಮುಂದೆಯೇ ತುಂಗಭದ್ರಾ ನದಿಗೆ ಹಾರಿದ್ದ ಹೈದರಾಬಾದ್ ಮೂಲದ ಮಹಿಳಾ ವೈದ್ಯೆ ಅನನ್ಯಾ ರಾವ್ ಶವ ಪತ್ತೆಯಾಗಿದೆ. ಈ ಘಟನೆ ಹಂಪಿಯಲ್ಲಿ ನಡೆದಿದೆ.

ಡಾ. ಅನನ್ಯಾ ರಾವ್ ಮತ್ತು ಇತರೆ ಇಬ್ಬರು ಸ್ನೇಹಿತರಾದ ಸತ್ವಿನ್ ಮತ್ತು ಹಶಿತಾ ಜತೆ ಹಂಪಿಗೆ ಪ್ರವಾಸಕ್ಕೆಂದು ಬಂದಿದ್ದರು. ಸ್ಮಾರಕಗಳಿಗೆ ಭೇಟಿ ನೀಡಿದ ನಂತರ, ಮಂಗಳವಾರ ರಾತ್ರಿ ಸಣಾಪುರ ಗ್ರಾಮದ ಅತಿಥಿ ಗೃಹದಲ್ಲಿ ತಂಗಿದ್ದರು. ಬುಧವಾರ ಮಧ್ಯಾಹ್ನ ಮೂವರು ಈಜಲೆಂದು ತುಂಗಭದ್ರಾ ನದಿಗೆ ತೆರಳಿದ್ದಾರೆ.

ಇದೇ ಸಂದರ್ಭದಲ್ಲಿ ಅನನ್ಯಾ ರಾವ್ ಸುಮಾರು 25 ಅಡಿ ಎತ್ತರದ ಬಂಡೆಯಿಂದ ನೀರಿಗೆ ಹಾರಿ ಈಜಲು ಬಯಸಿದರು. ಬಂಡೆಯಿಂದ ನೀರಿಗೆ ಹಾರಿದ ಅನನ್ಯಾ ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಈಜುತ್ತಿದ್ದರು.

ಆದರೆ, ಶೀಘ್ರದಲ್ಲೇ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಕೊಚ್ಚಿಕೊಂಡು ಹೋದರು. ಈ ವೇಳೆ ಆಕೆಯನ್ನು ಉಳಿಸಲು ಸ್ನೇಹಿತರು ಪ್ರಯತ್ನಿಸಿದರು. ಆದರೆ, ಅವರ ಪ್ರಯತ್ನಗಳು ವ್ಯರ್ಥವಾಯಿತು. ಗುರುವಾರ ಬೆಳಗ್ಗೆ ಅನನ್ಯಾ ರಾವ್ ಅವರ ಶವವನ್ನು ಹೊರತೆಗೆಯಲಾಗಿದೆ.

Doctor jumps into river
ಕೊಪ್ಪಳ: ತುಂಗಭದ್ರಾ ನದಿಗೆ ಜಿಗಿದ ಹೈದರಾಬಾದ್ ಮೂಲದ ವೈದ್ಯೆ ನೀರುಪಾಲು; ಕೊನೆಯ ಕ್ಷಣದ ವಿಡಿಯೋ ವೈರಲ್!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com