ಎಳನೀರು ಬೆಲೆ ಗಗನಮುಖಿ: ಈ ಬೇಸಿಗೆಯಲ್ಲಿ 70 ರೂ ದಾಟಬಹುದು!

ಏರುತ್ತಿರುವ ತಾಪಮಾನದಿಂದಾಗಿ ಎಳನೀರು ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಬೇಸಿಗೆಯಲ್ಲಿ ಅದು ಪ್ರತಿ ಎಳನೀರಿಗೆ 70 ರೂಪಾಯಿಗಳಿಗಿಂತ ಹೆಚ್ಚಾಗುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ದಾವಣಗೆರೆ/ಚಿತ್ರದುರ್ಗ: ಈ ಬಾರಿ ಬೇಸಿಗೆ ಬೇಗನೇ ಆರಂಭವಾಗಿದ್ದು, ಸುಡು ಬಿಸಿಲು ತಾಳಲಾರದೆ ಜನ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದು, ನೈಸರ್ಗಿಕ ಪಾನೀಯ ಎಳನೀರಿನ ಬೆಲೆ ಕೇಳಿ ಬೆಚ್ಚಿಬೀಳುವಂತಾಗಿದೆ.

ಎಳನೀರಿನ ಬೆಲೆ ಹೆಚ್ಚಾಗಿರುವುದರಿಂದ ಅನೇಕ ರೈತರು ಲಾಭ ಗಳಿಸಲು ತೆಂಗಿನಕಾಯಿಗಳನ್ನು ಕೊಯ್ಲು ಮಾಡಿ ಇತರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಏರುತ್ತಿರುವ ತಾಪಮಾನದಿಂದಾಗಿ ಎಳನೀರು ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಬೇಸಿಗೆಯಲ್ಲಿ ಅದು ಪ್ರತಿ ಎಳನೀರಿಗೆ 70 ರೂಪಾಯಿಗಳಿಗಿಂತ ಹೆಚ್ಚಾಗುವ ಸಾಧ್ಯತೆಯಿದೆ.

ಈ ಬೇಸಿಗೆಯಲ್ಲಿ ಎಳನೀರು ಸಂಪೂರ್ಣ ಬೇಡಿಕೆಯ ಕಾಲು ಭಾಗದಷ್ಟು ಪೂರೈಕೆ ಮಾಡುವುದು ಸಹ ಸವಾಲಿನ ಕೆಲಸ ಎಂದು ರೈತರು ಹೇಳುತ್ತಿದ್ದಾರೆ, ಬುಧವಾರ, ಸಗಟು ಮಾರುಕಟ್ಟೆಯಲ್ಲಿ ಒಂದು ತೆಂಗಿನಕಾಯಿಯ ಬೆಲೆ 38 ರೂಪಾಯಿಗಳಷ್ಟಿತ್ತು.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಸಂತೆಬೆನ್ನೂರು, ಕೆರೆಬಿಳಚಿ, ಹೊಳಲ್ಕೆರೆ, ಚನ್ನಗಿರಿ, ಮಲೆಬೆನ್ನೂರು ಮತ್ತು ಹರಿಹರ ಪ್ರದೇಶಗಳ ರೈತರ ಪ್ರಕಾರ, ಬೇಸಿಗೆ ಬರುವ ಮೊದಲೇ ತೆಂಗಿನಕಾಯಿ ಪೂರೈಕೆ ಕಡಿಮೆಯಾಗಿದೆ. "ಇದರಿಂದ ಈ ಬೇಸಿಗೆಯಲ್ಲಿ ಎಳನೀರು ಬೆಲೆ ಹೆಚ್ಚಾಗಬಹುದು ಮತ್ತು 60-70 ರೂ.ಗೆ ಏರಬಹುದು" ಎಂದು ಅವರು ಹೇಳಿದ್ದಾರೆ.

ತೋಟಗಾರಿಕೆ ಉಪ ನಿರ್ದೇಶಕ ರಾಘವೇಂದ್ರ ಅವರು, "ಕಳೆದ ಬೇಸಿಗೆಯ ಒಣ ಹವಾಮಾನವು ತೆಂಗಿನಕಾಯಿಯ ಪ್ರಸ್ತುತ ಇಳುವರಿಯ ಮೇಲೆ ಪರಿಣಾಮ ಬೀರಿದೆ. ಹೊಸ ಹೂಬಿಡುವ ಋತುವಿನಲ್ಲಿ ಇಳುವರಿಯೂ ಕಡಿಮೆಯಾಗುತ್ತಿದೆ" ಎಂದಿದ್ದಾರೆ.

ಸಾಂದರ್ಭಿಕ ಚಿತ್ರ
ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ರಣ ಬಿಸಿಲು: ನೀರಿನ ಬವಣೆ ಎದುರಿಸಲು BWSSB ಸಜ್ಜು

"ದಾವಣಗೆರೆಯ ಎಳನೀರು ಮುಂಬೈ, ಪುಣೆ, ಸತಾರಾ ಮತ್ತು ಗೋವಾಕ್ಕೆ ಹೋಗುತ್ತಿರುವುದರಿಂದ ತೆಂಗಿನಕಾಯಿ ಬೆಲೆ ಏರಿಕೆಯಾಗಿದೆ. ಮಂಡ್ಯದಿಂದ ದಾವಣಗೆರೆಗೆ ತೆಂಗಿನಕಾಯಿ ಬರುತ್ತಿರುವುದರಿಂದ, ಇಲ್ಲಿ ಬೆಲೆಗಳು ಸ್ಥಿರವಾಗಿವೆ(ಪ್ರತಿ ತೆಂಗಿನಕಾಯಿಗೆ 45-50 ರೂ.)" ಎಂದು ಅವರು ಹೇಳಿದರು.

ತೆಂಗಿನಕಾಯಿಯ ಬೆಲೆ ಏರಿಕೆಯ ಕುರಿತು ಮಾತನಾಡಿದ ಅವರು, "ಪ್ರಸ್ತುತ ಬೆಲೆಗಳು ಪ್ರತಿ ಕಾಯಿಗೆ 45 ರಿಂದ 50 ರೂ.ಗಳವರೆಗೆ ಇವೆ. ಬೇಸಿಗೆಯಲ್ಲಿ ಇದು 60 ರೂ.ಗಳಿಗೆ ಹೆಚ್ಚಾಗಬಹುದು" ಎಂದು ಹೇಳಿದರು.

ಇದಲ್ಲದೆ, ಸರಾಸರಿ ಏಳರಿಂದ ಎಂಟು ಟ್ರಕ್ ಲೋಡ್ ತೆಂಗಿನಕಾಯಿಗಳನ್ನು ಮಹಾರಾಷ್ಟ್ರ ಮತ್ತು ಗೋವಾಕ್ಕೆ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು. "ಪ್ರತಿ ಲೋಡ್ ಗೆ 30,000 ತೆಂಗಿನಕಾಯಿಗಳನ್ನು ಕಳುಹಿಸಲಾಗುತ್ತಿದೆ, ಬೇಸಿಗೆಯ ಅವಧಿ ಸಮೀಪಿಸುತ್ತಿದ್ದಂತೆ ಇದು ಹೆಚ್ಚಾಗಬಹುದು" ಎಂದು ಅವರು ತಿಳಿಸಿದ್ದಾರೆ.

ತೆಂಗಿನಕಾಯಿ ಬೆಳೆಗಾರ ಸಿದ್ದೇಶ್, ವಿವಿಧ ಕಾರಣಗಳಿಂದಾಗಿ ಪ್ರಸಕ್ತ ವರ್ಷದ ಇಳುವರಿ ತೀವ್ರವಾಗಿ ಕುಸಿದಿದೆ ಎಂದು ಹೇಳಿದರು. "ಇದರೊಂದಿಗೆ, ಮುಂಬೈ ಮತ್ತು ಪುಣೆಯಲ್ಲಿ ನಮ್ಮ ತೆಂಗಿನಕಾಯಿಗಳಿಗೆ ಹೆಚ್ಚಿನ ಬೇಡಿಕೆಯಿದೆ, ಆದ್ದರಿಂದ ನಾವು ನಮ್ಮ ತೆಂಗಿನಕಾಯಿಗಳನ್ನು ಆ ಸ್ಥಳಗಳಿಗೆ ಕಳುಹಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಕಳೆದ ವರ್ಷದ ತೀವ್ರ ಬೇಸಿಗೆಯ ಪರಿಣಾಮವಾಗಿ ಇಳುವರಿ ಕಡಿಮೆಯಾಗಿದೆ ಎಂದು ಅವರು ಹೇಳಿದರು. "ತೆಂಗಿನ ಮರಗಳಲ್ಲಿ ಕೊಳೆತ ರೋಗ ವ್ಯಾಪಕವಾಗಿ ಹರಡಿರುವುದು ಕೂಡ ಇಳುವರಿ ಕಡಿಮೆಯಾಗಲು ಕಾರಣವಾಗಿದೆ" ಎಂದು ಅವರು ಹೇಳಿದರು.

ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯಲ್ಲಿರುವ ಎಳನೀರು ವ್ಯಾಪಾರಿ ಕೃಷ್ಣಪ್ಪ ಅವರು, "ನಾವು ಮಂಡ್ಯದಿಂದ ಎಳನೀರು ತರಿಸುತ್ತೇವೆ. ಒಂದು ಕಾಯಿಗೆ 38 ರೂ.ಗೆ ಆಗುತ್ತದೆ. ಆದ್ದರಿಂದ ನಾವು ಅದನ್ನು ಪ್ರತಿ ಎಳನೀರಿಗೆ 50 ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಬೇಸಿಗೆಯಲ್ಲಿ, ಇದು 60 ರಿಂದ 70 ರೂ.ಗೆ ಹೆಚ್ಚಾಗಬಹುದು ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com