
ಬೆಂಗಳೂರು: ನಗರದಲ್ಲಿ ಬೇಸಿಗೆಗೂ ಮುನ್ನವೇ ವಾಡಿಕೆಗಿಂತ ಮೂರ್ನಾಲ್ಕು ಡಿಗ್ರಿ ತಾಪಮಾನ ಹೆಚ್ಚಳವಾಗಿದ್ದು, ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಬೆಂಗಳೂರಿಗರಿಗೆ ಬಿಸಿಲ ಬೇಗೆ ತಟ್ಟುತ್ತಿದೆ.
ನಗರದಲ್ಲಿ ಸಾಮಾನ್ಯವಾಗಿ ಫೆಬ್ರವರಿಯಲ್ಲಿ 25 ರಿಂದ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ ಈ ಬಾರಿ 30 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗಿದೆ. ಮಾರ್ಚ್ ಮತ್ತು ಮೇ ತಿಂಗಳಿನಲ್ಲಿ ಉಷ್ಣಾಂಶ ಮತ್ತಷ್ಟು ಹೆಚ್ಚಾಗಲಿದ್ದು, ಬೆಂಗಳೂರಿನಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆಗಳಿವೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಪರಿಸ್ಥಿತಿ ಎದುರಿಸಲು ಸಿದ್ಧರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ನೀರಿನ ಕೊರತೆ ಹೆಚ್ಚಿರುವ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ನೀರಿನ ಟ್ಯಾಂಕ್‌ಗಳನ್ನು ಸಿದ್ಧವಾಗಿಡುವಂತೆ ಮತ್ತು ನೀರು ಸರಬರಾಜು ಮಾಡಲು 200 ಟ್ಯಾಂಕರ್‌ಗಳನ್ನು ಕಾಯ್ದಿರಿಸುವಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಖಾಸಗಿ ಟ್ಯಾಂಕರ್‌ಗಳಿಗೆ ನೀರಿನ ದರಗಳನ್ನು ನಿಯಂತ್ರಿಸುವುದಾಗಿ ಬಿಡಬ್ಲ್ಯೂಎಸ್ಎಸ್ಬಿ ತಿಳಿಸಿದೆ. 5 ಕಿಮೀ ವ್ಯಾಪ್ತಿಯಲ್ಲಿ 6,000 ಲೀಟರ್ ಪೂರೈಸಲು 600 ರೂ., 8,000 ಲೀಟರ್‌ಗೆ 700 ರೂ. ಮತ್ತು 5 ಕಿಮೀ ನಿಂದ 10 ಕಿಮೀ ವ್ಯಾಪ್ತಿಯಲ್ಲಿ ಪೂರೈಕೆಯಾಗಿದ್ದರೆ 12,000 ಲೀಟರ್‌ಗೆ 1,200 ರೂ. ನಿಗದಿತ ವ್ಯಾಪ್ತಿಯ ನಂತರ ಪ್ರತಿ ಕಿಲೋಲೀಟರ್‌ಗೆ, ಗ್ರಾಹಕರು 50 ರೂ. ಹೆಚ್ಚುವರಿಯಾಗಿ ಪಾವತಿಸಬೇಕೆಂದು ಮಂಡಳಿ ತಿಳಿಸಿದೆ.
ಕಳೆದ ಬಾರಿ ಬೆಂಗಳೂರಿನಲ್ಲಿ ನೀರಿನ ಬವಣೆ ಹೆಚ್ಚಾಗಿದ್ದು, ಪರಿಸ್ಥಿತಿ ಕಠಿಣವಾಗಿತ್ತು. ಈ ಬಾರಿ ಮಂಡಳಿಯು ಸಂಪೂರ್ಣ ಸನ್ನದ್ಧವಾಗಿದೆ. 2000 ಲೀಟರ್ ಪ್ಲಾಸ್ಟಿಕ್ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಸಿದ್ಧವಾಗಿಡುವಂತೆ, ಅಗತ್ಯವಿದ್ದರೆ ಹೊಸ ಟ್ಯಾಂಕರ್ ಗಳ ಖರೀದಿಸುವಂತೆ ಸೂಚಿಸಲಾಗಿದೆ ಸೂಚನೆ ನೀಡಲಾಗಿದೆ. ಜನರಿಗೆ ಕುಡಿಯುವ ನೀರನ್ನು ಮಾತ್ರ ಪೂರೈಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷ ಅಭಿವೃದ್ಧಿ ಕಾರ್ಯಗಳಿಂದಾಗ ಜಲಮೂಲಗಳು ಬತ್ತಿ ಹೋಗದ್ದವು. ಮಹದೇವಪುರ ವಲಯದಲ್ಲಿ ಅನೇಕ ಬೋರ್‌ವೆಲ್‌ಗಳು ಬತ್ತಿಹೋಗಿದ್ದವು. ಬೇಸಿಗೆ ಕೂಡ ಅಸಹನೀಯವಾಗಿತ್ತು. ಈ ಪರಿಸ್ಥಿತಿ ಬಳಿಕ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಹೊರತಾಗಿ, ಕಾವೇರಿ ಹಂತ-V ಮತ್ತು ನಗರದ ಹೊರ ಪ್ರದೇಶಗಳಲ್ಲಿ 15,000 ಕ್ಕೂ ಹೆಚ್ಚು ಹೊಸ ನೀರಿನ ಸಂಪರ್ಕಗಳನ್ನು ನೀಡಲಾಗಿದ. ಹೀಗಾಗಿ ಈ ಬಾರಿ ನೀರಿನ ಒತ್ತಡ ಕಡಿಮೆಯಾಗುವ ನಿರೀಕ್ಷೆಗಳಿವೆ. ತುರ್ತು ಸಂದರ್ಭಗಳು ಎದುರಾದರೂ ಅಂತಹ ಪ್ರದೇಶಗಳಿಗೆ ನೀರಿನ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುವುದು ಎಂದು ಹೇಳಿದರು.
Advertisement