SC-ST ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಬೇಡಿ: CM ಸಿದ್ದರಾಮಯ್ಯಗೆ ಛಲವಾದಿ ನಾರಾಯಣಸ್ವಾಮಿ ಪತ್ರ

ಆಯ-ವ್ಯಯದಲ್ಲಿ ರೂ. 52,000.00 ಕೋಟಿಗಳಿಗೂ ಹೆಚ್ಚು ಹಣವನ್ನು ಗ್ಯಾರಂಟಿಗಳಿಗಾಗಿ ತಾವು ಮೀಸಲಿಟ್ಟ ಮೇಲೆ ಎಸ್.ಸಿ.ಎಸ್‌.ಪಿ/ಟಿ.ಎಸ್.ಪಿ ಯೋಜನೆಯ ರೂ. 25,426.38 ಕೋಟಿ ಎಲ್ಲಿ ವಿನಿಯೋಗಿಸಲಾಗಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
Chalavadi Narayanaswamy
ಛಲವಾದಿ ನಾರಾಯಣಸ್ವಾಮಿ
Updated on

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಪ್ರಮುಖ ಖಾತರಿ ಯೋಜನೆಗಳಿಗೆ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಾದ ಹಣವನ್ನು ಬಳಕೆ ಮಾಡಬೇಡಿ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನುಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗೆ ಮೂರು ಪುಟಗಳ ಪತ್ರ ಬರೆದಿದ್ದಾರೆ. ಸರ್ಕಾರವು ಖಾತರಿ ಯೋಜನೆಗಳ ಅನುಷ್ಠಾನಕ್ಕಾಗಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ನಿಧಿಯಿಂದ ಕ್ರಮವಾಗಿ 14,282.38 ಕೋಟಿ ರೂ. ಮತ್ತು 11,144 ಕೋಟಿ ರೂ.ಗಳನ್ನು ಅನ್ಯ ಯೋಜನೆಗೆಬಳಸಿಕೊಂಡಿದ್ದಾರೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಆಯ-ವ್ಯಯದಲ್ಲಿ ರೂ. 52,000.00 ಕೋಟಿಗಳಿಗೂ ಹೆಚ್ಚು ಹಣವನ್ನು ಗ್ಯಾರಂಟಿಗಳಿಗಾಗಿ ತಾವು ಮೀಸಲಿಟ್ಟ ಮೇಲೆ ಎಸ್.ಸಿ.ಎಸ್‌.ಪಿ/ಟಿ.ಎಸ್.ಪಿ ಯೋಜನೆಯ ರೂ. 25,426.38 ಕೋಟಿ ಎಲ್ಲಿ ವಿನಿಯೋಗಿಸಲಾಗಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ನಿಧಿಯನ್ನು ಬೇರೆಡೆಗೆ ತಿರುಗಿಸುವ ಸರ್ಕಾರದ ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದ ಅವರು “ಎಸ್‌ಸಿ/ಎಸ್‌ಟಿಗಳು ಖಾತರಿ ಯೋಜನೆಗಳ ಪ್ರಯೋಜನಗಳಿಗೆ ಅರ್ಹರಲ್ಲವೇ, ಇದಕ್ಕಾಗಿ ಈಗಾಗಲೇ 52,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆಯೇ?” ಎಂದು ಬರೆದಿದ್ದಾರೆ. "ಅವರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಪ್ರಮುಖ ಯೋಜನೆಗಳಿಗೆ ಏಕೆ ಕಡಿತಗೊಳಿಸಬೇಕು ಎಂದು ಪ್ರಶ್ನಿಸಿದ್ದಾರೆ.

Chalavadi Narayanaswamy
ಗ್ಯಾರಂಟಿ ಯೋಜನೆಗಳು ಶೀಘ್ರದಲ್ಲೇ ಬಂದ್: ಛಲವಾದಿ ನಾರಾಯಣಸ್ವಾಮಿ

ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಮೀಸಲಿಟ್ಟ ಮೇಲೆ ಪರಿಶಿಷ್ಟರಿಗಾಗಿ ಮೀಸಲಿಟ್ಟ ರೂ. 25,426.38 ಕೋಟಿ ಹಣ ತೆಗೆಯುವ ಅವಶ್ಯಕತೆಯೇ ಇರಲಿಲ್ಲ. ಒಂದು ವೇಳೆ ಪರಿಶಿಷ್ಟರಿಗಾಗಿ ಮೀಸಲಿಟ್ಟ ಹಣದಲ್ಲೇ ಗ್ಯಾರಂಟಿ ಯೋಜನೆಗಳಲ್ಲಿ ಅವರಿಗೆ ಹಣ ವ್ಯಯಿಸುವುದಾದರೆ ಆಯ-ವ್ಯಯದಲ್ಲಿ ಮೀಸಲಿಟ್ಟ ರೂ. 52,000.00 ಕೋಟಿಗೂ ಹೆಚ್ಚು ಹಣ ಯಾವ ಉದ್ದೇಶಕ್ಕಾಗಿ ಬಳಸಲಾಗಿದೆ? ಪ್ರಶ್ನೆ ಏನೆಂದರೆ, ತಾವು ಆಯ-ವ್ಯಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟ ಹಣಕ್ಕೆ ಪರಿಶಿಷ್ಟರು ಭಾದ್ಯರಲ್ಲವೇ ಎಂಬ ಅನುಮಾನ ಸಹ ಮೂಡುತ್ತದೆ.

ಹೀಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಲ್ಲಿ ಎಸ್.ಸಿ.ಎಸ್‌.ಪಿ/ಟಿಎಸ್.ಪಿ ವಿಶೇಷ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿರುವ ಕುರಿತು ಅನೇಕ ಪ್ರಶ್ನೆಗಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com