ಅಕ್ರಮ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳದ BBMP: ಕಮಿಷನರ್ ವಿರುದ್ಧ ನಿವಾಸಿಗಳ ಆಕ್ರೋಶ

ಕಟ್ಟಡ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದರೂ, ಯಾವುದೇ ಅಡೆತಡೆಯಿಲ್ಲದೇ ತಮ್ಮ ಪ್ರಾಜೆಕ್ಟ್ ಪೂರ್ಣಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಅವಕಾಶ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
BBMP Chief Commissioner Tushar Girinath
ತುಷಾರ್ ಗಿರಿನಾಥ್
Updated on

ಬೆಂಗಳೂರು: ನಗರದಾದ್ಯಂತ ಅಕ್ರಮ ಕಟ್ಟಡಗಳನ್ನು ನಿರ್ಮಿಸುತ್ತಿರುವ ಡೆವಲಪರ್‌ಗಳ ವಿರುದ್ಧ ಕ್ರಮ ಕೈಗೊಳ್ಳದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ನಾಗರಿಕ ಕಾರ್ಯಕರ್ತರು ಮತ್ತು ನಿವಾಸಿಗಳು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಕಟ್ಟಡ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದರೂ, ಯಾವುದೇ ಅಡೆತಡೆಯಿಲ್ಲದೇ ತಮ್ಮ ಪ್ರಾಜೆಕ್ಟ್ ಪೂರ್ಣಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಅವಕಾಶ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸೀಗೆಹಳ್ಳಿಯಲ್ಲಿ ಅಂತಹ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಜಯರಾಮ್ ನಾಯ್ಡು ಒಡೆತನದ ಕಟ್ಟಡವನ್ನು ಯಾವುದೇ ಅನುಮೋದನೆಗಳಿಲ್ಲದೆ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ. ಕ್ರಮ ಕೈಗೊಳ್ಳುವ ಬದಲು, ಬಿಬಿಎಂಪಿ ಅಧಿಕಾರಿಗಳು ನಾಯ್ಡು ಅವರಿಗೆ ಅಕ್ರಮ ನಿರ್ಮಾಣವನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯ ನೀಡಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

ನಾಯ್ಡು ಇದೇ ಮೊದಲ ಬಾರಿ ನಿಯಮ ಉಲ್ಲಂಘಿಸಿಲ್ಲ, ಈ ಹಿಂದೆ ಬಿಬಿಎಂಪಿಯಿಂದ ನೋಟಿಸ್ ಪಡೆದ ಎರಡು ಅನಧಿಕೃತ ಕಟ್ಟಡ ನಿರ್ಮಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಮುಖ್ಯ ಆಯುಕ್ತರು 106 ದಿನಗಳವರೆಗೆ ವಿಚಾರಣೆಯನ್ನು ವಿಳಂಬ ಮಾಡಿದರು, ಕನಿಷ್ಠ ನಾಲ್ಕು ಬಾರಿ ವಿಚಾರಣೆ ಮುಂದೂಡಿದರು, ಇದು ಅಂತಿಮವಾಗಿ ನಾಯ್ಡು ಅವರಿಗೆ ಸಾಯಿ ಮಂದಿರ ರಸ್ತೆಯಲ್ಲಿರುವ ತಮ್ಮ ಅಕ್ರಮ ಕಟ್ಟಡದ ನಿರ್ಮಾಣವನ್ನು ಪೂರ್ಣಗೊಳಿಸಲು ಅವಕಾಶ ಮಾಡಿಕೊಟ್ಟಿತು ಎಂದು ಕೆಆರ್ ಪುರಂನ ಬಸವನಪುರ ವಾರ್ಡ್‌ನ ಸೀಗೆಹಳ್ಳಿಯಲ್ಲಿರುವ ಎಸ್‌ಎಸ್ ಲೇಔಟ್‌ನ ನಿವಾಸಿಗಳು ಆರೋಪಿಸಿದ್ದಾರೆ.

BBMP Chief Commissioner Tushar Girinath
ಇಷ್ಟವಿರಲಿ ಬಿಡಲಿ, ಮೇ ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ನಡೆಯಲೇಬೇಕು: ಸಚಿವ ರಾಮಲಿಂಗಾ ರೆಡ್ಡಿ

"ನೋಟಿಸ್ ಜಾರಿಯಾದ ನಂತರ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲು ಉಲ್ಲಂಘಿಸುವವರು ಯಥಾಸ್ಥಿತಿ ಕಾಯ್ದುಕೊಳ್ಳಬೇಕಾಗುತ್ತದೆ. ಆದಾಗ್ಯೂ, ಮಹದೇವಪುರ ಬಿಬಿಎಂಪಿ ವಲಯದಲ್ಲಿ, ಡೆವಲಪರ್‌ಗಳು ಆಯುಕ್ತರು ಅಥವಾ ಅವರ ಆದೇಶಗಳ ಭಯವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ಮಹಾದೇವಪುರ ವಲಯದ ನಿವಾಸಿಯೂ ಆಗಿರುವ ನಾಗರಿಕ ಕಾರ್ಯಕರ್ತ ಸಂದೀಪ್ ಅನಿರುಧನ್ ಹೇಳಿದ್ದಾರೆ. ಬಿಬಿಎಂಪಿ ಉನ್ನತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ" ಎಂದು ಅವರು ತಿಳಿಸಿದ್ದಾರೆ.

ಬಿಬಿಎಂಪಿ ಪದೇ ಪದೇ ವಿಚಾರಣೆಯನ್ನು ಮುಂದೂಡಿದ ವಿವಾದಾತ್ಮಕ ಸೀಗೆಹಳ್ಳಿ ಕಟ್ಟಡಕ್ಕೆ ಸಂಬಂಧಿಸಿದ ಮೇಲ್ಮನವಿ ಸಂಖ್ಯೆ 285/2024 ರ ಪ್ರಕರಣವನ್ನು ನವೆಂಬರ್ 30, 2024 ರಿಂದ ಡಿಸೆಂಬರ್ 7 ರವರೆಗೆ, ನಂತರ ಡಿಸೆಂಬರ್ 21 ರಿಂದ ಫೆಬ್ರವರಿ 1 ರವರೆಗೆ ಮತ್ತು ಮತ್ತೆ ಫೆಬ್ರವರಿ 15 ರಿಂದ ಮಾರ್ಚ್ 15 ರವರೆಗೆ ವಿಚಾರಣೆ ನಡೆಸದೆ ಮುಂದೂಡುತ್ತಾ ಬಂದಿದ್ದಾರೆ.

ಹೈಕೋರ್ಟ್ ನಿರ್ದೇಶನದ ನಂತರ, ಮುಖ್ಯ ಆಯುಕ್ತರು ಈಗ ಪ್ರಕರಣಗಳನ್ನು ಆಲಿಸುವ ಮತ್ತು ಅಂತಿಮ ಆದೇಶಗಳನ್ನು ನೀಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ವಾರ್ಡ್ ಎಂಜಿನಿಯರ್‌ಗಳ ಸಹಕಾರ ಮತ್ತು ಬೆಂಬಲದ ಕೊರತೆಯಿಂದ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿಲ್ಲ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಖ್ಯ ಆಯುಕ್ತರು ವಿವಿಧ ವಲಯಗಳಲ್ಲಿ ಐದರಿಂದ ಆರು ವಾರ್ಡ್ ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದರೆ, ಅಂತಿಮವಾಗಿ ನಾವು ಸ್ವಲ್ಪ ಬದಲಾವಣೆಯನ್ನು ನೋಡಬಹುದು" ಎಂದು ಅಧಿಕಾರಿ ಹೇಳಿದರು.

ಬಿಬಿಎಂಪಿ ಅದೇ ಪ್ರದೇಶದಲ್ಲಿ ನಾಯ್ಡು ಅವರ ಇತರ ಯೋಜನೆಗಳಿಗೆ ನೋಟಿಸ್ ಜಾರಿ ಮಾಡಿದೆ. ಕಟ್ಟಡ ಸಂಖ್ಯೆ 17 ಮತ್ತು 18, ಇದು ಆರು ಮಹಡಿಗಳಲ್ಲಿ ಪೆಂಟ್‌ಹೌಸ್ ಸೇರಿದಂತೆ 46 ಫ್ಲಾಟ್‌ಗಳನ್ನು ಹೊಂದಿದೆ ಎಂದು ವರದಿಯಾಗಿದೆ, ಇದು ಬಹು ಕಟ್ಟಡ ಬೈಲಾಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com