ಜನವರಿ 4ಕ್ಕೆ ಕರ್ನಾಟಕಕ್ಕೆ ದಲೈಲಾಮಾ ಆಗಮನ: ಬೈಲಗುಪ್ಪೆಯಲ್ಲಿ 1 ತಿಂಗಳು ವಾಸ್ತವ್ಯ

ಧರ್ಮಶಾಲಾದಲ್ಲಿ ಚಳಿಗಾಲವು ತುಂಬಾ ತೀವ್ರವಾಗಿರುತ್ತದೆ. ಹೀಗಾಗಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಕರ್ನಾಟಕಕ್ಕೆ ಬರುತ್ತಿದ್ದಾರೆ.
Dalai Lama
ದಲೈ ಲಾಮಾ
Updated on

ಬೆಂಗಳೂರು: ಟಿಬೆಟಿಯನ್ ಧರ್ಮಗುರು 14ನೇ ದಲೈಲಾಮಾ ಅವರು ಜನವರಿ 4ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಮರುದಿನ ಮೈಸೂರು ಜಿಲ್ಲೆಯ ಬೈಲಕುಪ್ಪೆಗೆ ತೆರಳಲಿದ್ದಾರೆ.

ಕರ್ನಾಟಕಕ್ಕೆ ದಲೈಲಾಮಾ ಆಗಮಿಸುತ್ತಿರುವ ವಿಷಯವನ್ನು, ಕೇಂದ್ರ ಟಿಬೆಟಿಯನ್ ಆಡಳಿತ (ಸಿಟಿಎ) ದಕ್ಷಿಣ ವಲಯದ ಮುಖ್ಯ ಪ್ರತಿನಿಧಿ ಅಧಿಕಾರಿ ಜಿಗ್ಮೆ ತ್ಸುಲ್ಟ್ರಿಮ್ ಖಚಿತ ಪಡಿಸಿದ್ದಾರೆ. ದಲೈ ಲಾಮಾ ಅವರು ಜನವರಿ 4 ರಂದು ಬೆಂಗಳೂರಿಗೆ ಆಗಮಿಸಲಿದ್ದು ಹೊರಡುವ ಮೊದಲು ಒಂದು ದಿನ ಬೆಂಗಳೂರಿನಲ್ಲಿ ತಂಗಲಿದ್ದಾರೆ. ಬೈಲಕುಪ್ಪಯಲ್ಲಿ ಅಲ್ಲಿ ಅವರು ಒಂದು ತಿಂಗಳು ತಂಗಲು ನಿರ್ಧರಿಸಲಾಗಿದೆ.

ದಲೈ ಲಾಮಾ ಅವರು ಕೊನೆಯ ಬಾರಿಗೆ 2017 ರಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಹಿಮಾಚಲ ಪ್ರದೇಶದ ಧರ್ಮಶಾಲಾ ನಂತರ ಬೈಲಕುಪ್ಪೆ ವಿಶ್ವದ ಎರಡನೇ ಅತಿದೊಡ್ಡ ಟಿಬೆಟಿಯನ್ ವಸಾಹತು ಆಗಿದೆ, ಇದು ಟಿಬೆಟಿಯನ್ ಸರ್ಕಾರದ ಪ್ರಧಾನ ಕಛೇರಿಯೂ ಆಗಿದೆ.

“ಧರ್ಮಶಾಲಾದಲ್ಲಿ ಚಳಿಗಾಲವು ತುಂಬಾ ತೀವ್ರವಾಗಿರುತ್ತದೆ. ಹೀಗಾಗಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರು ಬೈಲಕುಪ್ಪೆಯ ತಾಶಿ ಲುನ್ಪೋ ಮಠದಲ್ಲಿ ಕೆಲವು ಬೋಧನೆಗಳನ್ನು ನಡೆಸಬಹುದು ಎಂದು ತ್ಸುಲ್ಟ್ರಿಮ್ ಹೇಳಿದರು. 89 ವರ್ಷ ವಯಸ್ಸಿನ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ಯುಎಸ್ಎಯಲ್ಲಿ ಜೂನ್ 2024 ರಲ್ಲಿ ಮೊಣಕಾಲು ಕಸಿ ಮಾಡಿಸಿಕೊಂಡಿದ್ದರು ಮತ್ತು ಆಗಸ್ಟ್ನಲ್ಲಿ ಭಾರತಕ್ಕೆ ಮರಳಿದರು.

ಕರ್ನಾಟಕದಲ್ಲಿ ಐದು ಟಿಬೆಟಿಯನ್ ವಸಾಹತುಗಳಿವೆ. ಬೈಲಕುಪ್ಪೆಯಲ್ಲಿ ಲುಗ್‌ಸಂಗ್ ಸ್ಯಾಮ್‌ಡುಪ್ಲಿಂಗ್, ಇದನ್ನು 1961 ರಲ್ಲಿ ನಿರ್ಮಿಸಲಾಯಿತು, ಮುಂಡಗೋಡಿನಲ್ಲಿ ಡೋಗುಲಿಂಗ್ ಅನ್ನು 1966 ರಲ್ಲಿ ಸ್ಥಾಪಿಸಲಾಯಿತು, ಬೈಲಕುಪ್ಪೆಯಲ್ಲಿ ಡಿಕ್ಕಿ ಲಾರ್ಸೋ 1969 ರಲ್ಲಿ ಸ್ಥಾಪನೆಯಾಯಿತು. ಹುಣಸೂರು ರಬ್‌ಗೇಲಿಂಗ್ ಅನ್ನು 1972 ರಲ್ಲಿ ಸ್ಥಾಪಿಸಲಾಯಿತು, 1973 ರಲ್ಲಿ ಕೊಳ್ಳೆಲಿಂಗ್‌ನಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ, ಬೈಲಕುಪ್ಪೆಯಲ್ಲಿ ಸುಮಾರು 15,000 ಟಿಬೆಟಿಯನ್ನರು ನಿರಾಶ್ರಿತರು ವಾಸಿಸುತ್ತಿದ್ದಾರೆ.

“ಕಳೆದ ಎರಡು ದಶಕಗಳಲ್ಲಿ ಇಲ್ಲಿ ಟಿಬೆಟಿಯನ್ ನಿರಾಶ್ರಿತರ ಸಂಖ್ಯೆ 25,000 ರಿಂದ 15,000 ಕ್ಕೆ ಇಳಿದಿದೆ. ಭಾರತ-ಟಿಬೆಟ್ ಗಡಿಯಲ್ಲಿ ಕಟ್ಟುನಿಟ್ಟಿನ ಜಾಗರೂಕತೆ ಮತ್ತು ಚೀನಾದಿಂದ ಟಿಬೆಟ್‌ನೊಳಗಿನ ಟಿಬೆಟಿಯನ್ನರ ಚಲನೆಯ ಮೇಲೆ ನಿಕಟ ಹಿಡಿತದಿಂದಾಗಿ ಜನಸಂಖ್ಯೆಯಲ್ಲಿ ತೀವ್ರ ಕುಸಿತವಾಗಿದೆ.

ಇತ್ತೀಚಿನ ದಿನಗಳಲ್ಲಿ, ಅನೇಕ ಯುವ ಟಿಬೆಟಿಯನ್ನರು ಭಾರತದಿಂದ ಯುರೋಪ್, ಯುಎಸ್, ಕೆನಡಾ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳಿಗೆ ಉತ್ತಮ ಜೀವನ ಮಟ್ಟ, ಶಿಕ್ಷಣ, ಅವಕಾಶಗಳು ಇತ್ಯಾದಿಗಳನ್ನು ಹುಡುಕಿಕೊಂಡು ವಲಸೆ ಹೋಗಿದ್ದಾರೆ. ಸಂಸ್ಕೃತೀಕರಣದಿಂದ ಆಧುನೀಕರಣದತ್ತ ಬದಲಾವಣೆಯನ್ನು ತೋರುತ್ತಿದೆ, ತ್ಸುಲ್ಟ್ರಿಮ್ ಹೇಳಿದರು. ಸಾಗರೋತ್ತರ ವಲಸೆಯ ಪ್ರವೃತ್ತಿ ಕೇವಲ ಬೈಲಕುಪ್ಪೆಗೆ ಸೀಮಿತವಾಗಿಲ್ಲ ಎಂದು ಅವರು ಹೇಳಿದರು. "ಕರ್ನಾಟಕದ ಇತರ ವಸಾಹತುಗಳಿಂದಲೂ ಟಿಬೆಟಿಯನ್ನರು ವಿದೇಶಕ್ಕೆ ತೆರಳುತ್ತಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com