ಬೆಳಗಾವಿ ಎಸ್‌ಡಿಎ ಆತ್ಮಹತ್ಯೆ ಪ್ರಕರಣ: 2 ತಿಂಗಳ ನಂತರ ಪ್ರಮುಖ ಆರೋಪಿ ತಹಶಿಲ್ದಾರ್ ಎಂದಿನಂತೆ ಕರ್ತವ್ಯಕ್ಕೆ ಹಾಜರ್!
ಬೆಳಗಾವಿ: ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಹಶೀಲ್ದಾರ್ ಬಸವರಾಜ್ ನಾಗರಾಳ್ 2 ತಿಂಗಳ ಬಳಿತ ಎಂದಿನಂತೆ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ನವೆಂಬರ್ 5ರಂದು ರುದ್ರಣ್ಣ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ತಮ್ಮ ಸಾವಿಗೆ ಕಾರಣ ಕುರಿತು ವಾಟ್ಸಾಫ್ ಗ್ರೂಪ್‌ಗೆ ಸಂದೇಶ ಕಳುಹಿಸಿದ್ದರು. ಪ್ರಕರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಮೂವರ ಹೆಸರು ಕೇಳಿ ಬಂದಿತ್ತು. ಹೀಗಾಗಿ ಮೂವರ ವಿರುದ್ಧ ಖಡೆಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸರು ತಹಶಿಲ್ದಾರ್ ಬಸವರಾಜ್ ನಾಗರಾಳ್ ಅವರನ್ನು ಪ್ರಕರಣದ ಎ1 ಆರೋಪಿಯಾಗಿ ಮಾಡಿದ್ದು, ಆರೋಪಿಯು ಪ್ರಕರಣ ಸಂಬಂಧ ಎರಡು ತಿಂಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ಇದೀಗ ಹೊಸ ವರ್ಷ ಜನವರಿ 1ರಂದು ಬುಧವಾರ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಈ ಮಧ್ಯೆ, ಮೃತ ರುದ್ರಣ್ಣ ಅವರ ಕುಟುಂಬಸ್ಥರು ನ್ಯಾಯಕ್ಕಾಗಿ ತಮ್ಮ ಹೋರಾಟವನ್ನು ಮುಂದುವರೆಸಿವೆ. ಅಪಾರ ಒತ್ತಡ, ಮೇಲಧಿಕಾರಿಗಳ ಕಿರುಕುಳ ಮತ್ತು ವರ್ಗಾವಣೆ ಶಿಕ್ಷೆ ಯಿಂದಾಗಿ ರುದ್ರಣ್ಣ ಆತ್ಮಹತ್ಯೆಗೆ ಶರಣಾಗಿದ್ದರು, ಆದರೆ, ಆತ್ಮಹತ್ಯೆಗೆ ಕಾರಣರಾದ ಮೂವರು ಆರೋಪಿಗಳು ಇದೀಗ ಸ್ವತಂತ್ರವಾಗಿ ಓಡಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ