
ಬೆಂಗಳೂರು: ಕುಡಿದ ಅಮಲಿನಲ್ಲಿದ್ದ ಚಾಲಕನಿಂದ ರಕ್ಷಿಸಿಕೊಳ್ಳಲು ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋರಿಕ್ಷಾದಿಂದ ಜಿಗಿದ ಘಟನೆ ಗುರುವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.
ಘಟನೆಯ ಬಗ್ಗೆ ಮಹಿಳೆಯ ಪತಿ ಮಾಹಿತಿ ನೀಡಿದ್ದು, ಮಹಿಳೆ ಹೊರಮಾವು-ಥಣಿಸಂದ್ರಕ್ಕೆ ಆಟೋರಿಕ್ಷಾವನ್ನು ನಮ್ಮ ಯಾತ್ರಿ' ಮೂಲಕ ಬುಕ್ ಮಾಡಿದ್ದಾರೆ.
"ನನ್ನ ಪತ್ನಿ ಹೊರಮಾವು ನಿಂದ ಬೆಂಗಳೂರಿನ ಥಣಿಸಂದ್ರಕ್ಕೆ ಆಟೋವನ್ನು ಬುಕ್ ಮಾಡಿದ್ದಳು, ಆದರೆ ಡ್ರೈವರ್ ಕುಡಿದು ಹೆಬ್ಬಾಳದ ಬಳಿ ತಪ್ಪಾದ ಸ್ಥಳಕ್ಕೆ ಕರೆದೊಯ್ದನು. ಪದೇ ಪದೇ ನಿಲ್ಲಿಸುವಂತೆ ಕೇಳಿಕೊಂಡರೂ ಕೇಳಲಿಲ್ಲ, ಇದು ಆಕೆಯನ್ನು ಚಲಿಸುತ್ತಿದ್ದ ಆಟೋದಿಂದ ಜಿಗಿಯುವಂತೆ ಮಾಡಿದೆ' ಎಂದು ವ್ಯಕ್ತಿ ಶುಕ್ರವಾರ X' ನಲ್ಲಿ ಪೋಸ್ಟ್ ಮಾಡಿದ್ದಾರೆ.
ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ನಮ್ಮ ಯಾತ್ರಿ ಕಸ್ಟಮರ್ ಕೇರ್ ನಂಬರ್ ಸಹ ಇಲ್ಲ ಎಂದು ವ್ಯಕ್ತಿ ದೂರಿದ್ದಾರೆ. ನಮ್ಮ ಯಾತ್ರಿ' ಸೇವೆಯ ದೊಡ್ಡ ಕೊರತೆಯೆಂದರೆ ಗ್ರಾಹಕರ ಕುಂದುಕೊರತೆಗಳನ್ನು ಆಲಿಸಲು ಸೂಕ್ತ ವ್ಯವಸ್ಥೆ ಇಲ್ಲದಿರುವುದಾಗಿದೆ ಎಂದು ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
customer care ಮೊರೆ ಹೋದರೆ ನಮ್ಮನ್ನು 24 ಗಂಟೆಗಳ ಕಾಲ ನಿರೀಕ್ಷಿಸುವಂತೆ ಕೇಳುತ್ತದೆ. ತುರ್ತು ಪರಿಸ್ಥಿತಿಯಲ್ಲಿ 24 ಗಂಟೆಗಳ ಕಾಲ ಕಾಯುವುದು ಹೇಗೆ? ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆ ಎಂದು ಬೆಂಗಳೂರು ಪೊಲೀಸರನ್ನು ಪ್ರಶ್ನಿಸಿದ್ದಾರೆ.
ತಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆಯ ಪತಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಬೆಂಗಳೂರು ಪೊಲೀಸರು ತಕ್ಷಣ ಸ್ಪಂದಿಸಿ ತನಿಖೆ ಆರಂಭಿಸಿದ್ದಾರೆ.
ದೂರಿಗೆ ಪ್ರತಿಕ್ರಿಯಿಸಿದ ನಮ್ಮ ಯಾತ್ರಿ, "ನಿಮ್ಮ ಪತ್ನಿಗೆ ಉಂಟಾದ ಅನಾನುಕೂಲತೆಯ ಬಗ್ಗೆ ನಾವು ವಿಷಾದಿಸುತ್ತೇವೆ ಮತ್ತು ಅವರು ಈಗ ಚೆನ್ನಾಗಿದ್ದಾರೆ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ನಮಗೆ ಸವಾರಿಯ ವಿವರಗಳನ್ನು DM ಮಾಡಿ ಮತ್ತು ಘಟನೆ ಬಗ್ಗೆ ತ್ವರಿತವಾಗಿ ಪರಿಶೀಲಿಸುತ್ತೇವೆ ಎಂದಷ್ಟೇ ಹೇಳಿದೆ.
Advertisement