ಬೆಳಗಾವಿ: ತಹಸೀಲ್ದಾರ್ ಕಚೇರಿ ಎಡವಟ್ಟು; ಸತ್ತಿದ್ದಾನೆಂದು ದಾಖಲಿಸಿ ಬದುಕಿದ್ದ ವ್ಯಕ್ತಿಯ ದಾಖಲೆ ರದ್ದು; ಸರಿಪಡಿಸಲು ಅಲೆದಾಟ!

ಬೆಳಗಾವಿ ತಾಲೂಕಿನ ಸಾವಗಾಂವ್ ಗ್ರಾಮದ ಗಣಪತಿ ಖಚ್ಚು ಕಾಕತ್ಕರ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದು, ಒಂದೂವರೆ ವರ್ಷಗಳ ಹಿಂದೆ ಅವರ ಆಧಾರ್ ಕಾರ್ಡ್‌ನಂತಹ ಗುರುತಿನ ಪುರಾವೆಗಳನ್ನು ತಹಶೀಲ್ದಾರ್ ಕಚೇರಿ ರದ್ದುಗೊಳಿಸಿದೆ.
Ganapati Khachu Kakatkar
ಗಣಪತಿ ಖಚ್ಚು ಕಾಕತ್ಕರ್
Updated on

ಬೆಳಗಾವಿ: ಸ್ಥಳೀಯ ತಹಸೀಲ್ದಾರ್ ಕಚೇರಿಯ ಕಂದಾಯ ಇಲಾಖೆಗೆ ಸಂಬಂಧಿಸಿದ ಸಿಬ್ಬಂದಿಯೊಬ್ಬರು ಮಾಡಿದ ತಪ್ಪಿನಿಂದಾಗಿ 62 ವರ್ಷದ ವ್ಯಕ್ತಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾನು ಬದುಕಿದ್ದೇನೆ ಎಂದು ಸಾಬೀತುಪಡಿಸಲು 17 ತಿಂಗಳಿಗೂ ಹೆಚ್ಚು ಕಾಲದಿಂದ ಹೋರಾಟ ನಡೆಸುತ್ತಿದ್ದಾರೆ.

ಬೆಳಗಾವಿ ತಾಲೂಕಿನ ಸಾವಗಾಂವ್ ಗ್ರಾಮದ ಗಣಪತಿ ಖಚ್ಚು ಕಾಕತ್ಕರ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದು, ಒಂದೂವರೆ ವರ್ಷಗಳ ಹಿಂದೆ ಅವರ ಆಧಾರ್ ಕಾರ್ಡ್‌ನಂತಹ ಗುರುತಿನ ಪುರಾವೆಗಳನ್ನು ತಹಶೀಲ್ದಾರ್ ಕಚೇರಿ ರದ್ದುಗೊಳಿಸಿದೆ. ಅವರ ದಿವಂಗತ ಅಜ್ಜನ ಹೆಸರಿನಲ್ಲಿದ್ದ ಆರು ಎಕರೆ ಮತ್ತು 23 ಗುಂಟೆ ಭೂಮಿಯ ಮೇಲಿನ ಅವರ ಹಕ್ಕು ಪಡೆಯಲು "ಉತ್ತರಾಧಿಕಾರಿ ಪ್ರಮಾಣಪತ್ರ" ಪಡೆಯಲು ಗಣಪತಿ ಮತ್ತು ಅವರ ಸಹೋದರರು ಅರ್ಜಿ ಸಲ್ಲಿಸಿದಾಗ ಸಮಸ್ಯೆ ಆರಂಭವಾಗಿದೆ.

ಗಣಪತಿಯವರ ಅಜ್ಜ, ಮಸಾನು ಶಟ್ಟು ಕಾಕತ್ಕರ್ ಅವರು ಫೆಬ್ರವರಿ 2, 1976 ರಂದು ನಿಧನರಾಗಿದ್ದಾರೆ. ಅವರ ಮರಣಕ್ಕೂ ಮುನ್ನಾ ಅವರು ತಮ್ಮ ಮೂವರು ಪುತ್ರರಿಗೆ ತಲಾ ಒಂಬತ್ತು ಎಕರೆ ಭೂಮಿಯನ್ನು ವರ್ಗಾಯಿಸಿದ್ದು, ಆರು ಎಕರೆ ಮತ್ತು 23 ಗುಂಟೆ ಜಮೀನನ್ನು ತನಗಾಗಿ ಇಟ್ಟುಕೊಂಡಿದ್ದರು. ಅವರ ಮರಣದ ನಂತರ ಮಸಾನು ಅವರ ಮೂವರು ಪುತ್ರರು ಭೂಮಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಲು ಚಿಂತಿಸಿರಲಿಲ್ಲ.

ಕೆಲವು ವರ್ಷಗಳ ನಂತರ ಮಸಾನು ಅವರ ಮೂವರು ಪುತ್ರರು ನಿಧನರಾದರು. ಗಣಪತಿ ಸೇರಿದಂತೆ ಮಸಾನು ಅವರ ಎಂಟು ಮೊಮ್ಮಕ್ಕಳು ಎರಡು ವರ್ಷಗಳ ಹಿಂದೆ ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ. ಉತ್ತರಾಧಿಕಾರ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲು ತಹಶೀಲ್ದಾರ್ ಕಚೇರಿಯಿಂದ ಮೊಮ್ಮಕ್ಕಳು ತಮ್ಮ ಅಜ್ಜನ ಮರಣ ಪ್ರಮಾಣಪತ್ರವನ್ನು ಸ್ವೀಕರಿಸದಿದ್ದಾಗ, ಅವರು ಬೆಳಗಾವಿಯ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ನಂತರ ಅರ್ಜಿದಾರರಿಗೆ ಮಸಾನು ಮರಣ ಪ್ರಮಾಣ ಪತ್ರ ನೀಡುವಂತೆ ತಹಶೀಲ್ದಾರ್ ಕಚೇರಿಗೆ ನ್ಯಾಯಾಲಯ ಸೂಚಿಸಿದೆ.

ಹಿಂಡಲಗಾದ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಸಿದ್ಧಪಡಿಸಿದ ಬಳಿಕ ಅಲ್ಲಿನ ಕಂಪ್ಯೂಟರ್ ಆಪರೇಟರ್ ಒಬ್ಬರು ಗಣಪತಿ ಅವರಿಗೆ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ನೀಡುವಂತೆ ತಿಳಿಸಿದರು. ಆದರೆ, ಕಂಪ್ಯೂಟರ್ ಆಪರೇಟರ್ ತನ್ನ ಅಜ್ಜನ ಬದಲಿಗೆ ಗಣಪತಿ ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿ ಮರಣ ಪ್ರಮಾಣಪತ್ರದಲ್ಲಿ ಮುದ್ರಿಸಿದ್ದಾರೆ. ಅದೇ ಸಮಯದಲ್ಲಿ, ಗಣಪತಿ ಅವರ ಆಧಾರ್ ಸಂಖ್ಯೆಯನ್ನು ಲಾಕ್ ಮಾಡಲಾಗಿದೆ ಮತ್ತು ಅವರನ್ನು ಸತ್ತರೆಂದು ಉಲ್ಲೇಖಿಸಿದ್ದು, ಪಡಿತರ ಚೀಟಿಯಿಂದ ಅವರ ಹೆಸರನ್ನು ತೆಗೆಯಲಾಗಿದೆ.

2023ರ ಆಗಸ್ಟ್ 3ರಂದು ಇದನ್ನು ಪತ್ತೆ ಹಚ್ಚಿದ ಗಣಪತಿ ಸಮಸ್ಯೆ ಸರಿಪಡಿಸಲು ತಹಶೀಲ್ದಾರ್ ಸೇರಿದಂತೆ ಸ್ಥಳೀಯ ಎಲ್ಲ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಆದರೆ, ಯಾವೊಬ್ಬ ಅಧಿಕಾರಿಯೂ ಪರಿಹಾರ ನೀಡಲು ಸಾಧ್ಯವಾಗಿಲ್ಲ.

Ganapati Khachu Kakatkar
ಸತ್ತ 7 ಗಂಟೆಗಳ ತರುವಾಯ ಶವಾಗಾರದ ಫ್ರೀಜರ್ ನಿಂದ ಎದ್ದು ಕೂತ ವ್ಯಕ್ತಿ

ಕಂಪ್ಯೂಟರ್ ಆಪರೇಟರ್ ತನ್ನ ಅಜ್ಜನ ಮರಣ ಪ್ರಮಾಣಪತ್ರದಲ್ಲಿ ತನ್ನ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದ ಕಾರಣ ತನ್ನ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂಬುದು ಜೂನ್ 2024 ರಲ್ಲಿ ಅವರ ಗಮನಕ್ಕೆ ಬಂದಿದೆ. ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ, ಗಣಪತಿ ತಾನು ಬದುಕಿದ್ದೇನೆ ಎಂಬುದನ್ನು ಸಾಬೀತುಪಡಿಸಲು ಜನವರಿ 6 ರಂದು ತಮ್ಮ ಕುಟುಂಬ ಸದಸ್ಯರು ಮತ್ತು ವಕೀಲರೊಂದಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಸಂಪರ್ಕಿಸಿದರು. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದು, ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರಿಗೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com