ಭದ್ರಾ ಮೇಲ್ದಂಡೆ ಯೋಜನೆ: ಕಾಲುವೆ ಕಾಮಗಾರಿಗೆ 51.32 ಹೆಕ್ಟೇರ್ ಅರಣ್ಯ ಪ್ರದೇಶ ಬಳಕೆಗೆ ಕೇಂದ್ರದ ಅನುಮೋದನೆ!

ಕೇಂದ್ರ ಅರಣ್ಯ ಸಚಿವರ ಅಧ್ಯಕ್ಷತೆಯ ಸ್ಥಾಯಿ ಸಮಿತಿ, ರಾಷ್ಟ್ರೀಯ ವನ್ಯ ಜೀವಿ ಮಂಡಳಿ ಡಿಸೆಂಬರ್ 21, 2024 ರಂದು ನಡೆಸಿದ ಸಭೆಯಲ್ಲಿ ಈ ಬಗ್ಗೆ ಶಿಪಾರಸ್ಸು ಮಾಡಿತ್ತು.
Union Minister V. Somanna
ಕೇಂದ್ರ ಸಚಿವ ವಿ.ಸೋಮಣ್ಣ
Updated on

ತುಮಕೂರು: ಭದ್ರಾ ಮೇಲ್ಡಂಡೆ ಯೋಜನೆಯ ತುಮಕೂರು ಜಿಲ್ಲೆಯ ಭಾಗದಲ್ಲಿನ ಕಾಲುವೆ ನಿರ್ಮಾಣ ಕಾಮಗಾರಿಗೆ ಬುಕ್ಕಾಪಟ್ಟಣದಿಂದ ಚಿಂಕಾರದವರೆಗಿನ ವನ್ಯ ಜೀವಿ ಸಂರಕ್ಷಣಾ ಕ್ಷೇತ್ರದ 51.32 ಹೆಕ್ಟೇರ್ ಪ್ರದೇಶವನ್ನು ಬಳಸಿಕೊಳ್ಳಲು ಕೇಂದ್ರ ಅರಣ್ಯ ಇಲಾಖೆ ಅನುಮೋದನೆಯನ್ನು ನೀಡಿ ಇಂದು ಆದೇಶ ಹೊರಡಿಸಿದೆ.

ಕೇಂದ್ರ ಅರಣ್ಯ ಸಚಿವರ ಅಧ್ಯಕ್ಷತೆಯ ಸ್ಥಾಯಿ ಸಮಿತಿ, ರಾಷ್ಟ್ರೀಯ ವನ್ಯ ಜೀವಿ ಮಂಡಳಿ ಡಿಸೆಂಬರ್ 21, 2024 ರಂದು ನಡೆಸಿದ ಸಭೆಯಲ್ಲಿ ಈ ಬಗ್ಗೆ ಶಿಪಾರಸ್ಸು ಮಾಡಿತ್ತು. ಇದಕ್ಕನುಗುಣವಾಗಿ ಕೇಂದ್ರ ಅರಣ್ಯ ಇಲಾಖೆ ಇಂದು ಕರ್ನಾಟಕದ ಅರಣ್ಯ ಇಲಾಖೆಗೆ ಪತ್ರ ಮುಖೇನ ತಿಳಿಸಿದೆ.

ತುಮಕೂರು ಜಲ್ಲೆಯಲ್ಲಿನ ಬುಕ್ಕಾಪಟ್ಟಣದಿಂದ ಚಿಂಕಾರದವರೆಗಿನ ವನ್ಯ ಜೀವಿ ಸರಂಕ್ಷಣಾ ಕ್ಷೇತ್ರದ 51.32 ಹೆಕ್ಕೆರ್ ಪ್ರದೇಶವನ್ನು ಬಳಸಿಕೊಳ್ಳಲು ಅನುಮತಿ ನೀಡಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ಸೋಮಣ್ಣನವರು ತಿಳಿಸಿದ್ದಾರೆ.

Union Minister V. Somanna
ತುಮಕೂರಿಗೆ ಮತ್ತೆ ಮೂರು ರೈಲ್ವೆ ಕಾಮಗಾರಿ ಮಂಜೂರು: ಕೇಂದ್ರ ಸಚಿವ ವಿ.ಸೋಮಣ್ಣ

ತುಮಕೂರು ಜಿಲ್ಲೆಯಲ್ಲಿ ನೀರಾವರಿ ಅಭಿವೃದ್ಧಿಯ ದಿಶೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ತುಮಕೂರಿನ ಸಮಸ್ತ ಜನತೆಗೆ ಈ ಒಂದು ವರದಾನ ನೀಡಿದೆ ಎಂದು ತುಮಕೂರು ಜಿಲ್ಲೆಯ ಸಂಸದರೂ ಆಗಿರುವ ಸೋಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ ಪ್ರಧಾನಿ ಮೋದಿ, ಕೇಂದ್ರ ಅರಣ್ಯ ಸಚಿವರಾದ ಭೂಪೇಂದ್ರ ಯಾದವ್ ಮತ್ತು ಸ್ಥಾಯಿ ಸಮಿತಿ, ರಾಷ್ಟ್ರೀಯ ವನ್ಯ ಜೀವಿ ಮಂಡಳಿಯ ಎಲ್ಲಾ ಸದಸ್ಯರಿಗೆ ಕನ್ನಡನಾಡಿನ ಹಾಗೂ ವಿಶೇಷವಾಗಿ ತುಮಕೂರಿನ ಜನತೆಯ ಪರವಾಗಿ ಅಭಿನಂದನೆಯನ್ನು ಸೋಮಣ್ಣ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com