Video: 'ನೀನ್ಯಾಕೆ ಇಲ್ಲಿ ಕೂತಿದ್ದೀಯಾ': ವೇದಿಕೆ ಮೇಲಿದ್ದ ಡಿಸಿಯನ್ನೇ ಎಬ್ಬಿಸಿ ಕಳುಹಿಸಿದ ಸಿಎಂ Siddaramaiah

ವಿಜಯನಗರ ಜಿಲ್ಲೆಯ ಬಂಡಿಹಳ್ಳಿಯ ಎಸ್.ಎಸ್ ಫಾರಂ ಹೌಸ್‌ನಲ್ಲಿ ಆಯೋಜಿಸಿದ್ದ ಸರ್ವಧರ್ಮಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ...
CM Siddaramaiah Asks DC on the stage
ಸಿಎಂ ಸಿದ್ದರಾಮಯ್ಯ
Updated on

ವಿಜಯನಗರ: ಕಾರ್ಯಕ್ರಮವೊಂದರ ವೇದಿಕೆ ಮೇಲೆ ಕುಳಿತಿದ್ದ ಐಎಎಸ್ ಅಧಿಕಾರಿಯನ್ನು ಸಿಎಂ ಸಿದ್ದರಾಮಯ್ಯ ಎಬ್ಬಿಸಿ ಕಳುಹಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಜಯನಗರ ಜಿಲ್ಲೆಯ ಬಂಡಿಹಳ್ಳಿಯ ಎಸ್.ಎಸ್ ಫಾರಂ ಹೌಸ್‌ನಲ್ಲಿ ಆಯೋಜಿಸಿದ್ದ ಸರ್ವಧರ್ಮಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ನವ ವಿವಾಹಿತ ಜೋಡಿಗಳಿಗೆ ಶುಭ ಕೋರಿದರು. ಇದಕ್ಕೂ ಮೊದಲು ವೇದಿಕೆ ಮೇಲೆ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ವೇದಿಕೆ ಮೇಲೆ ಕುಳಿತಿದ್ದ ಐಎಎಸ್ ಅಧಿಕಾರಿಯನ್ನು ಎಬ್ಬಿಸಿ ಗದರಿ ಕಳುಹಿಸಿದ ಘಟನೆ ನಡೆಯಿತು.

ಸಿದ್ದರಾಮಯ್ಯ ಅವರ ಹಿಂಬಂದಿಯ ಕುರ್ಚಿಯಲ್ಲಿ ಕುಳಿತಿದ್ದ ಅಧಿಕಾರಿಯನ್ನು ಸಿದ್ದರಾಮಯ್ಯ ನಿನ್ಯಾಕೆ ಇಲ್ಲಿ ಕುಳಿತಿದ್ದೀಯಾ.. ಯಾರು ನೀನು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅಧಿಕಾರಿ ನಾನು ಡಿಸಿ ಎಂದು ಹೇಳಿದ್ದು, ಈ ವೇಳೆ ಸಿದ್ದರಾಮಯ್ಯ ನೀನು ಇಲ್ಲಿ ಕುಳಿತುಕೊಳ್ಳಬಾರದು. ಸ್ವಾಮೀಜಿಗಳ ಪಕ್ಕದಲ್ಲಿ ಕುಳಿತಿದ್ದೀಯಲ್ಲ.. ಅಲ್ಲಿ ಹೋಗು ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

CM Siddaramaiah Asks DC on the stage
ಅಂತರ್ಜಾತಿ ವಿವಾಹಗಳಿಂದ ಸಮ ಸಮಾಜ ನಿರ್ಮಾಣ ಸಾಧ್ಯ: ಸಿಎಂ ಸಿದ್ದರಾಮಯ್ಯ

ಅಂದಹಾಗೆ ನಿನ್ನೆ ನಡೆದ ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ನವ ವಧು-ವರರಿಗೆ ಅಕ್ಷತೆ ಕಾಳು ಹಾಕುವ ಮೂಲಕ ಆಶೀರ್ವದಿಸಿದರು. ಈ ಕಾರ್ಯಕ್ರಮದಲ್ಲಿ 17 ಹಿಂದೂ ಹಾಗೂ 11 ಮುಸ್ಲಿಂ ಸಮುದಾಯದ ಜೋಡಿದಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, 'ಬಸವಣ್ಣನವರ ಕಾಲದಲ್ಲಿಯೇ ಅಂತರ್ಜಾತಿ ವಿವಾಹ ಪದ್ಧತಿ ಪ್ರಚಲಿತದಲ್ಲಿತ್ತು. ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ಇದರಿಂದಾಗಿ ಸಮಾಜದಲ್ಲಿನ ಜಾತಿ ವ್ಯವಸ್ಥೆ ಅಳಿದು ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ' ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com