ಪಿಎಸ್‌ಐ ನಿತ್ಯಾನಂದಗೌಡ
ಪಿಎಸ್‌ಐ ನಿತ್ಯಾನಂದಗೌಡ

ಚಿಕ್ಕಮಗಳೂರು: ಪತ್ನಿಗೆ ವರದಕ್ಷಿಣೆ ಕಿರುಕುಳ, ಇತರ ಮಹಿಳೆಯೊಂದಿಗೆ ಸಂಬಂಧ; ಪಿಎಸ್‌ಐ ವಿರುದ್ಧ ಕೇಸ್ ದಾಖಲು

50 ಲಕ್ಷ ರೂ. ವರದಕ್ಷಿಣೆ ತರುವಂತೆ ತನ್ನ ಪತಿ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
Published on

ಚಿಕ್ಕಮಗಳೂರು: ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಬರುವ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾರೆ ಮತ್ತು 50 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಳಸ ಪಿಎಸ್‌ಐ ನಿತ್ಯಾನಂದಗೌಡ ವಿರುದ್ಧ ಅವರ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ.

ನಿತ್ಯಾನಂದಗೌಡ ಅವರ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಸಬ್ ಇನ್ಸ್‌ಪೆಕ್ಟರ್(SI) ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

50 ಲಕ್ಷ ರೂ. ವರದಕ್ಷಿಣೆ ತರುವಂತೆ ತನ್ನ ಪತಿ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ಪಿಎಸ್‌ಐ ನಿತ್ಯಾನಂದಗೌಡ
ಮಹಿಳಾ ಅಧಿಕಾರಿ ಮೇಲೆ ಅತ್ಯಾಚಾರಕ್ಕೆ ಯತ್ನ; ಜೈಲರ್ ವಿರುದ್ಧ ಕೇಸ್ ದಾಖಲು!

ಆರೋಪಿಯ ಸಹೋದರಿ ಕೂಡ ತನ್ನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಪಾಸ್‌ಪೋರ್ಟ್ ಪರಿಶೀಲನೆ ಸಂಬಂಧಿಸಿದಂತೆ ತಮ್ಮ ಬಳಿ ಬರುವ ಮಹಿಳೆಯರನ್ನು ತನ್ನ ಪತಿ ಮಂಚಕ್ಕೆ ಕರೆಯುತ್ತಾರೆ. ಉಡುಪಿಯ ಕಾಪು ಠಾಣೆಯಲ್ಲಿದ್ದಾಗ ಮುಸ್ಲಿಂ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ನಾನು ಅವರ ರೂಂಗೆ ಹೋದಾಗ ಕಾಂಡೋಮ್‌ಗಳು ಪತ್ತೆಯಾಗಿದ್ದವು ಎಂದು ಅವರ ಪತ್ನಿ ಆರೋಪಿಸಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ಮಹಿಳೆಯ ಕುಟುಂಬಕ್ಕೆ ಈ ವಿಚಾರ ತಿಳಿದಾಗ, ಅವರು ಪತಿ ಪಿಎಸ್ಐ ಮೇಲೆ ಹಲ್ಲೆ ಯತ್ನಿಸಿದರು. ಆದರೆ ಎಸ್‌ಪಿ ಅವರನ್ನು ರಕ್ಷಿಸಿದ್ದರು. ಕೋಟಾ ಠಾಣೆಯಲ್ಲೂ ಮಹಿಳೆ ನ್ಯಾಯ ಕೊಡಿಸುತ್ತೇನೆ ಎಂದು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಬೆಂಗಳೂರಿನಲ್ಲೂ ಮಹಿಳೆ ಒಬ್ಬಳನ್ನು ಮಂಚಕ್ಕೆ ಕರೆದು ಸಿಕ್ಕಿಬಿದ್ದಿದ್ದರು. ಆ ಮಹಿಳೆಗೆ 4 ಲಕ್ಷ ರೂ. ಹಣ ಕೊಟ್ಟು ಬಚಾವ್ ಆಗಿದ್ದಾರೆ ಎಂದು ದೂರುದಾರರನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಸತ್ಯಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಆರೋಪಗಳು ಸಾಬೀತಾದರೆ ಆರೋಪಿ ಪಿಎಸ್ಐ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಳಸಾ ಪೊಲೀಸರು ತಿಳಿಸಿದ್ದಾರೆ.

X

Advertisement

X
Kannada Prabha
www.kannadaprabha.com