ಹಿರಿಯ ನಟಿ ಗಿರಿಜಾ ಲೋಕೇಶ್, ಸಾಧು ಕೋಕಿಲಗೆ ಗೌರವ ಡಾಕ್ಟರೇಟ್ ಪ್ರದಾನ!
ಬೆಂಗಳೂರು: ನಟನಾಗಿ, ಸಂಗೀತ ನಿರ್ದೇಶಕನಾಗಿ ಸಾಧು ಕೋಕಿಲ ಅವರು ಹಲವು ವರ್ಷಗಳ ಕಾಲ ಕಲಾಸೇವೆ ಮಾಡಿದ್ದು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಲಾಗಿದೆ. ಇದೇ ವೇಳೆ ಹಿರಿಯ ರಂಗಭೂಮಿ ಮತ್ತು ನಟಿ ಗಿರಿಜಾ ಲೋಕೇಶ್, ಮತ್ತು ಮಾಜಿ ರಂಗಾಯಣ ನಿರ್ದೇಶಕ ಸಿ. ಬಸವಲಿಂಗಯ್ಯ ಸೇರಿದಂತೆ ಒಂಬತ್ತು ವ್ಯಕ್ತಿಗಳಿಗೆ ಡಾಕ್ಟರೇಟ್ ನೀಡಲಾಯಿತು.
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಏಳನೇ, ಎಂಟು ಮತ್ತು ಒಂಬತ್ತನೇ ವಾರ್ಷಿಕ ಘಟಿಕೋತ್ಸವದಲ್ಲಿ ಇಲ್ಲಿನ ವಿವಿ ಆವರಣದಲ್ಲಿ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಡಾಕ್ಟರೇಟ್ ಪಡೆದ ಸಾಧಕರ ಪಟ್ಟಿ
2021-22: ಸತ್ಯನಾರಾಯಣ ರಾಜು (ಭಾರತೀಯ ಶಾಸ್ತ್ರೀಯ ನೃತ್ಯ), ಸಿ. ಚೆಲುವರಾಜು (ಮೃದಂಗ - ತಾಳವಾದ್ಯ) ಮತ್ತು ಗಿರಿಜಾ ಲೋಕೇಶ್ (ರಂಗಭೂಮಿ ಕಲಾವಿದೆ).
2022-23: ಸಂದ್ಯಾ ಪುರೇಚಾ (ಭಾರತೀಯ ಶಾಸ್ತ್ರೀಯ ನೃತ್ಯ), ಎಂಆರ್ ಸತ್ಯನಾರಾಯಣ (ಗಮಕ) ಮತ್ತು ಸಾಧು ಕೋಕಿಲ (ಪ್ರದರ್ಶನ ಕಲೆಗಳು).
2023-24: ವೀಣಾ ಮೂರ್ತಿ ವಿಜಯ್ (ಭಾರತೀಯ ನೃತ್ಯ), ಪುಷ್ಪಾ ಶ್ರೀನಿವಾಸನ್ (ಕರ್ನಾಟಕ ಸಂಗೀತ) ಮತ್ತು ಮಾಜಿ ರಂಗಾಯಣ ನಿರ್ದೇಶಕ ಸಿ. ಬಸವಲಿಂಗಯ್ಯ (ರಂಗಭೂಮಿ).