Telugu Vs Kannada: ಅಲ್ಲಿ ಮಲಗಿದವಳಿಗೆ, ಇಲ್ಲಿ ಮಲಗೋಕೆ ಆಗಲ್ವ?: ಕನ್ನಡತಿ, ತೆಲುಗು ನಿರೂಪಕಿ ಸೌಮ್ಯಾ ರಾವ್ ಆಕ್ರೋಶ, ವಿಡಿಯೋ ವೈರಲ್!
ಕೆಜಿಎಫ್, ಕಾಂತಾರ ಬಳಿ ಕನ್ನಡದಲ್ಲಿ ಯಾವ ದೊಡ್ಡ ಸಿನಿಮಾ ಬಂತು. ಕನ್ನಡ ಚಿತ್ರರಂಗಕ್ಕೆ ಭವಿಷ್ಯವಿಲ್ಲ ಎಂದು ಹೇಳಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ತೆಲುಗಿನ ಖ್ಯಾತ ನಿರೂಪಕಿ ಸೌಮ್ಯಾ ರಾವ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಬರುತ್ತಿರುವ ಕೆಟ್ಟ ಕಮೆಂಟ್ ಗಳ ಬಗ್ಗೆ ಆಕ್ರೋಶಗೊಂಡಿದ್ದಾರೆ. ಕನ್ನಡತಿ ಆದರೂ ತೆಲುಗು ಚಿತ್ರರಂಗದಲ್ಲಿ ನಿರೂಪಕಿಯಾಗಿ ದೊಡ್ಡ ಹೆಸರು ಮಾಡಿದ್ದಾರೆ. ಆದರೆ ತಮ್ಮ ವಿರುದ್ಧ ಬರುತ್ತಿರುವ ಕೆಟ್ಟ ಕಮೆಂಟ್ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಸೌಮ್ಯಾ ರಾವ್, 'ನನಗೆ ಕನ್ನಡ ಚಿತ್ರರಂಗದ ಬಗ್ಗೆ ಹೆಚ್ಚಿನ ಅಭಿಮಾನವಿಲ್ಲ. ಕಾರಣ ಅಲ್ಲಿ ಪ್ರತಿಭೆಗಳಿಗೆ ಬೆಲೆ ಇಲ್ಲ. ಹಾಗಾಗಿಯೇ ಸ್ಯಾಂಡಲ್‌ವುಡ್ ಚಿಕ್ಕ ಇಂಡಸ್ಟ್ರಿಯಾಗಿ ಉಳಿದಿದೆ ಎಂದು ಹೇಳಿದ್ದರು. ಭವಿಷ್ಯದಲ್ಲಿ ಸ್ಯಾಂಡಲ್‌ವುಡ್ ಮತ್ತಷ್ಟು ಚಿಕ್ಕ ಇಂಡಸ್ಟ್ರಿ ಆಗುತ್ತೆ ನೋಡುತ್ತೀರಿ ಎಂದು ಹೇಳಿದ್ದ ಸೌಮ್ಯಾ ರಾವ್, ತೆಲುಗು ಇಂಡಸ್ಟ್ರಿ ತುಂಬಾ ದೊಡ್ಡದು, ಏಕೆಂದರೆ ಅವರು ಎಲ್ಲರನ್ನೂ ಬರಮಾಡಿಕೊಳ್ಳುತ್ತಾರೆ. 'ಕನ್ನಡದಲ್ಲಿ ಕೆಜಿಎಫ್, ಕಾಂತಾರ ಬಳಿ ಯಾವ ದೊಡ್ಡ ಸಿನಿಮಾ ಬಂತು? ನಾನು ಕನ್ನಡ ಕಲಾವಿದರ ಬಗ್ಗೆ ದೂಷಿಸುತ್ತಿಲ್ಲ, ಕನ್ನಡ ಇಂಡಸ್ಟ್ರಿ ಹೇಗಿದೆ ಎಂದು ಹೇಳುತ್ತಿದ್ದೇನೆ. ಅಲ್ಲಿ ನನಗೂ ಬಹಳ ಕೆಟ್ಟ ಅನುಭವಗಳಾಗಿವೆ ಎಂದು ಹೇಳಿದ್ದರು.
ಸೌಮ್ಯಾ ರಾವ್ ಅವರ ಹೇಳಿಕೆ ಕನ್ನಡಿಗರನ್ನು ಕೆರಳುವಂತೆ ಮಾಡಿತ್ತು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಕೆಟ್ಟ ಕಮೆಂಟ್ ಗಳನ್ನು ಮಾಡುತ್ತಿದ್ದರು. ಇದರಿಂದ ಬೇಸರಗೊಂಡಿರುವ ಸೌಮ್ಯಾ ರಾವ್, ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
ನಾನು ಕರ್ನಾಟಕಕ್ಕೆ ಬಂದರೆ ಚಪ್ಪಲಿಯಿಂದ ಹೊಡೆಯುತ್ತಾರಂತೆ. ನಾನು ತೆಲುಗಿನಲ್ಲೇ ಬಿದ್ದು ಸಾಯಬೇಕಂತೆ. ನಾನು ತೆಲುಗಿನವರ ಜೊತೆ ಮಲಗಿದ್ದಕ್ಕೆ ನನಗೆ ಅವಕಾಶಗಳು ಸಿಗುತ್ತಿವೆಯಂತೆ ಈ ರೀತಿಯ ಕಮೆಂಟ್ ಗಳನ್ನು ಮಾಡುತ್ತಿದ್ದಾರೆಂದು ಸೌಮ್ಯಾ ರಾವ್ ಹೇಳಿದ್ದು ಇದಕ್ಕೂ ಉತ್ತರಿಸಿದ್ದಾರೆ. ನನ್ನ ರಾಜ್ಯಕ್ಕೆ ನಾನು ಬರಲು ಅವರ ಒಪ್ಪಿಗೆ ಬೇಕಾ? ತೆಲುಗಿನಲ್ಲಿ ಮಲಗಿದವಳಿಗೆ ಕನ್ನಡದವರ ಜೊತೆ ಮಲಗೋಕೆ ಬರಲ್ವ? ಅಲ್ಲಿರೋನು ಗಂಡಸೇ, ಇಲ್ಲಿರೋನು ಗಂಡಸೇ. ನಾನು ಆ ರೀತಿಯ ಕಲಾವಿದೆ ಅಲ್ಲ. ಕಲಾವಿದರ ಜೀವನ ತುಂಬಾನೇ ಕಷ್ಟ. ಮಾನ ಮರ್ಯಾದೆಯಿಂದ ಬದುಕೋದು ತಪ್ಪಾ ಎಂದು ತಮ್ಮ ಕೋಪ ಹೊರಹಾಕಿದ್ದಾರೆ.