ಕನ್ನಡ ಭಾಷಾ ವಿವಾದ: ಉತ್ತರ ಭಾರತೀಯರಿಗೆ 'ಬೆಂಗಳೂರು ಬಂದ್' ಚರ್ಚೆ ಹುಟ್ಟುಹಾಕಿದ x ಫೋಸ್ಟ್!

ಸಾಮಾಜಿಕ ಮಾಧ್ಯಮವೊಂದರಲ್ಲಿ 'ಉತ್ತರ ಭಾರತೀಯರಿಗೆ ಬೆಂಗಳೂರು ಬಂದ್' ಎಂಬ ಫೋಸ್ಟ್ ವೈರಲ್ ಆಗಿದ್ದು, ಆನ್ ಲೈನ್ ನಲ್ಲಿ ಕನ್ನಡ ಭಾಷೆ ವಿವಾದ ಕುರಿತು ಜೋರಾದ ಚರ್ಚೆ ನಡೆಯುತ್ತಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಾಡ ಪ್ರಭು ಕೆಂಪೇಗೌಡರು ಕಟ್ಟಿದ 'ಬೆಂದ ಕಾಳೂರು' (ಬೆಂಗಳೂರು) ಈಗ ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿದ್ದು, ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂಬ ಖ್ಯಾತಿ ಪಡೆದಿದೆ. ಜೊತೆಗೆ ಇಲ್ಲಿನ ಶಾಂತಿಯುತ, ಸೌಹಾರ್ದಯುತ ವಾತಾವರಣ ದೇಶ, ವಿದೇಶಗಳ ಜನರನ್ನು ಆಕರ್ಷಿಸುತ್ತಿದ್ದು, ದಿನದಿಂದ ದಿನಕ್ಕೆ ನಗರಕ್ಕೆ ಬರುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ.

ಈಗ ನಗರದ ರಸ್ತೆಯ ಬದಿಯಲ್ಲಿನ ವ್ಯಾಪಾರದಿಂದ ಹಿಡಿದು ಪ್ರತಿಷ್ಠಿತ ಹೋಟೆಲ್, ಕಂಪನಿ, ಸೆಕ್ಯೂರಿಟಿ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಉತ್ತರ ಭಾರತದಿಂದ ಬಂದವರೇ ಅಧಿಕ ಮಂದಿ ಇದ್ದಾರೆ. ಹೀಗೆ ಬಂದವರು ಇಲ್ಲಿಯೇ ನೆಮ್ಮದಿಯ ಬದುಕು ಕಂಡುಕೊಳ್ಳುವುದರ ಜೊತೆಗೆ ತಮ್ಮ ಮುಂದಿನ ಪೀಳಿಗೆಯೂ ಇಲ್ಲಿಯೇ ಇರಲಿ ಎಂದು ಬಯಸುತ್ತಿದ್ದು, ಅದಕ್ಕೆ ಬೇಕಾದ ಪೂರಕ ವಾತವಾರಣ ನಿರ್ಮಿಸುತ್ತಿದ್ದಾರೆ.

ಇದು ಇಲ್ಲಿಯೇ ಹುಟ್ಟಿ ಬೆಳೆದ, ಬೆಂಗಳೂರು ಸುತ್ತಮುತ್ತಲಿನ ಅಥವಾ ರಾಜ್ಯದ ಬೇರೆ ಕಡೆಯಿಂದ ಬಂದು ನೆಲೆಸಿರುವ ಕನ್ನಡಿಗರಲ್ಲಿ ಅಸಮಾಧಾನ, ಅತೃಪ್ತಿಗೆ ಕಾರಣವಾಗಿದೆ. ಇದು ಆಗಾಗ್ಗೆ ಆನ್ ಲೈನ್ ನಲ್ಲಿ ಚರ್ಚೆ ಹುಟ್ಟುಹಾಕುತ್ತಿದೆ.

Casual Images
ಮತ್ತೊಮ್ಮೆ ಕನ್ನಡಿಗರ ಅವಹೇಳನ: ಬೆಂಗಳೂರು ಅಭಿವೃದ್ಧಿ ಆಗಿದ್ದೆ ಉತ್ತರ ಭಾರತೀಯರಿಂದಾಗಿ; ಯುವತಿ ಹೇಳಿಕೆ ವಿಡಿಯೋ ವೈರಲ್!

ಸಾಮಾಜಿಕ ಮಾಧ್ಯಮವೊಂದರಲ್ಲಿ 'ಉತ್ತರ ಭಾರತೀಯರಿಗೆ ಬೆಂಗಳೂರು ಬಂದ್ ' ಎಂಬ ಫೋಸ್ಟ್ ವೈರಲ್ ಆಗಿದ್ದು, ಆನ್ ಲೈನ್ ನಲ್ಲಿ ಕನ್ನಡ ಭಾಷೆ ವಿವಾದ ಕುರಿತು ಜೋರಾದ ಚರ್ಚೆ ನಡೆಯುತ್ತಿದೆ. ಇತ್ತೀಚಿಗೆ ಬಬ್ರುವಾಹನ (@Paarmatma) ಎಂಬ ಎಕ್ಸ್ ಖಾತೆಯಲ್ಲಿ 'ಉತ್ತರ ಭಾರತೀಯರಿಗೆ ಬೆಂಗಳೂರು ಬಂದ್ ' ಕನ್ನಡ ಕಲಿಯಲು ಇಷ್ಟಪಡದ ನೆರೆಯ ರಾಜ್ಯಗಳು, ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸದಿದ್ದರೆ ಅವರಿಗೆ ಬೆಂಗಳೂರು ಅಗತ್ಯವಿಲ್ಲ ಎಂದು ಪೋಸ್ಟ್ ಮಾಡಲಾಗಿದೆ.ಇದಕ್ಕೆ 115,000 ಕ್ಕೂ ಅಧಿಕ views,198 reposts, and 1,839ಕ್ಕೂ ಹೆಚ್ಚಿನ ಲೈಕ್ ಗಳು ಬಂದಿವೆ.

ಈ ಫೋಸ್ಟ್ ಗೆ ಪ್ರತಿಕ್ರಿಯಿಸಿರುವ ಸೋಶಿಯಲ್ ಮೀಡಿಯಾ ಬಳಕೆದಾರರು, ಬೆಂಗಳೂರಿಗೆ ವಲಸೆ ಬಂದವರಿಗೆ ಈ ಪೋಸ್ಟ್ ಅತಿರೇಕ ಅನಿಸಬಹುದು ಆದರೆ ಬೆಂಗಳೂರಿನಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಅಗೌರವಿಸುವವರನ್ನು ಕಂಡಾಗ, ಕಾರ್ಪೋರೇಟ್ ಕಚೇರಿಗಳಲ್ಲಿ ಕನ್ನಡ ಮಾತನಾಡುವವರನ್ನು ಅನಕ್ಷರಸ್ಥರಂತೆ ನೋಡುವುದನ್ನು ಕಂಡಾಗ ನಿಜಕ್ಕೂ ನೋವಾಗುತ್ತದೆ ಎಂದಿದ್ದಾರೆ.

ಮತ್ತೋರ್ವ ಬಳಕೆದಾರರು, ಇತರ ರಾಜ್ಯಗಳ ಜನರಿಂದ ಬೆಂಗಳೂರು ಇದೆ. ನಗರದ ಅಭಿವೃದ್ಧಿಗೆ ಅವರು ಕೊಡುಗೆ ನೀಡುತ್ತಿದ್ದಾರೆ. ಇದನ್ನು ಮರೆಯಬಾರದು! ಈಗ ಎಲ್ಲವೂ ಆಗಿದೆ. ಇತರರು ಹೋಗಬೇಕೆಂದು ನೀವು ಬಯಸುತ್ತೀರಾ? ಕೈಕಟ್ಟಿ ಕುಳಿತಿರುವ ಕನ್ನಡಿಗರು ಮತ್ತು ಕರ್ನಾಟಕ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com