ಮಹಾಕುಂಭ ಮೇಳದಲ್ಲಿ ಸ್ಪೀಕರ್ ಯುಟಿ ಖಾದರ್: ನಾಗ ಸಾಧುಗಳು, ಅಘೋರಿಗಳೊಂದಿಗೆ ಆಧ್ಯಾತ್ಮಿಕ ಚರ್ಚೆ!

ಮಂಗಳೂರಿನಲ್ಲಿ ಹಿಂದೂ ದೇವಾಲಯಗಳು, ಕ್ರಿಶ್ಚಿಯನ್ ಚರ್ಚ್‌ಗಳು ಮತ್ತು ಜೈನ ಆರಾಧನಾ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ.
Speaker UT Khader With Sadhu
ನಾಗ ಸಾಧುಗಳೊಂದಿಗೆ ಸ್ಪೀಕರ್ ಯುಟಿ ಖಾದರ್
Updated on

ಪ್ರಯಾಗ್ ರಾಜ್: ತನ್ನ ಸರಳತೆ, ಜಾತ್ಯತೀತ ತತ್ವಗಳ ಅನುಸರಣೆಯಿಂದ ಹೆಸರುವಾಸಿಯಾಗಿರುವ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಏಕತೆ ಮತ್ತು ಕೋಮು ಸಾಮರಸ್ಯದ ಸಂಕೇತವಾಗಿ ಶುಕ್ರವಾರ ಹಿಂದೂ ಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ.

ಮುಸ್ಲಿಂ ಆಗಿದ್ದರೂ ನಾಗ ಸಾಧುಗಳು ಮತ್ತು ಅಘೋರಿಗಳೊಂದಿಗೆ ಆಧ್ಯಾತ್ಮಿಕತೆ ಬಗ್ಗೆ ಆತ್ಮೀಯವಾಗಿ ಮಾತನಾಡಿದ್ದು, ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುವ ಖಾದರ್ ಸಾಧುಗಳೊಂದಿಗೆ ಬೆರೆತು, ವಿಶ್ವದ ಅತಿದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾದ ಮಹಾ ಕುಂಭ ಮೇಳದಲ್ಲಿ ಅದ್ಬುತ ಕ್ಷಣಗಳನ್ನು ಕಳೆದಿದ್ದಾರೆ. ದಕ್ಷಿಣ ಕನ್ನಡದ ಆಪ್ತ ಸ್ನೇಹಿತರ ಜೊತೆಗೂಡಿ ಕುಂಭಮೇಳದ ಮಹಾನುಭವವನ್ನು ಪಡೆದಿದ್ದಾರೆ.

ಎಲ್ಲರಲ್ಲೂ ಬೆರೆಯುವ ಮತ್ತು ಪರಸ್ಪರ ಧರ್ಮಗಳನ್ನು ಗೌರವಿಸುವ ಖಾದರ್ ಅವರ ನಿದರ್ಶನ ಇದೇ ಮೊದಲಲ್ಲ. ಮಂಗಳೂರಿನಲ್ಲಿ ಹಿಂದೂ ದೇವಾಲಯಗಳು, ಕ್ರಿಶ್ಚಿಯನ್ ಚರ್ಚ್‌ಗಳು ಮತ್ತು ಜೈನ ಆರಾಧನಾ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ.

ಹಲವು ವರ್ಷಗಳಿಂದ ವೈವಿಧ್ಯಮಯ ಧಾರ್ಮಿಕ ಆಚರಣೆಗಳು ಮತ್ತು ಹಬ್ಬಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಕುಂಭಮೇಳದಲ್ಲಿ ಅವರು ಭಾಗವಹಿಸಿದದ್ದು ಭಾರತದ ಸಾಂಸ್ಕೃತಿಕ, ಆಧ್ಯಾತ್ಮಿಕ ವೈವಿಧ್ಯತೆಯ ಸೌಂದರ್ಯದ ಪ್ರಬಲ ಸಂಕೇತವಾಗಿದೆ.

Speaker UT Khader With Sadhu
Watch | ಮಹಾಕುಂಭ ಮೇಳ: ನಾಗಾ ಸಾಧುಗಳ ಮೆರವಣಿಗೆ; ತ್ರಿವೇಣಿ ಸಂಗಮದಲ್ಲಿ 'ಅಮೃತ ಸ್ನಾನ'!

ಉತ್ತರ ಪ್ರದೇಶ ಸ್ಪೀಕರ್ ಸತೀಶ್ ಮಹಾನ ಅವರ ಆಹ್ವಾನದ ಮೇರೆಗೆ ಸ್ಪೀಕರ್ ಯುಟಿ ಖಾದರ್ ಅವರು ಪ್ರಯಾಗರಾಜ್ ಗೆ ಭೇಟಿ ನೀಡಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿದರು. ಕರ್ನಾಟಕ ಸ್ಪೀಕರ್ ಅವರು ತಮ್ಮ ಭೇಟಿಯ ಸಂದರ್ಭದಲ್ಲಿ ರಾಜ್ಯದ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು ಎಂದು ಅವರ ಜೊತೆಯಲ್ಲಿದ್ದವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com