ಬೆಂಗಳೂರು: ಕಾಮರಾಜ್ ರಸ್ತೆಯ ಉಳಿದ ಭಾಗ ಜುಲೈ ಅಂತ್ಯದ ವೇಳೆಗೆ ಸಂಚಾರಕ್ಕೆ ಮುಕ್ತ

ಮೂಲ ಗಡುವು ಏಪ್ರಿಲ್ 2024 ಆಗಿದ್ದರೂ, ವಿದೇಶಗಳಿಂದ ಉಪಕರಣಗಳು ಬರುವಲ್ಲಿ ವಿಳಂಬ ಮತ್ತು ಬಿಎಂಆರ್‌ಸಿಎಲ್ ಕಡೆಯಿಂದ ತಾಂತ್ರಿಕ ವಿಳಂಬದಿಂದಾಗಿ ಇದನ್ನು ಹಲವಾರು ಬಾರಿ ಮುಂದೂಡಲಾಗಿದೆ.
Kamaraj road(file Image)
ಕಾಮರಾಜ್ ರಸ್ತೆ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಕಬ್ಬನ್ ರಸ್ತೆಯಿಂದ ಎಂಜಿ ರಸ್ತೆಯ ಕಡೆಗೆ (ಕಾವೇರಿ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಜಂಕ್ಷನ್ ಬಳಿ) ಕಾಮರಾಜ್ ರಸ್ತೆಯ ಬಾಕಿ ಇರುವ ಭಾಗವು ಜುಲೈ ಅಂತ್ಯದ ವೇಳೆಗೆ ತೆರೆಯಲು ನಿರ್ಧರಿಸಲಾಗಿದೆ.

ಮೂಲ ಗಡುವು ಏಪ್ರಿಲ್ 2024 ಆಗಿದ್ದರೂ, ವಿದೇಶಗಳಿಂದ ಉಪಕರಣಗಳು ಬರುವಲ್ಲಿ ವಿಳಂಬ ಮತ್ತು ಬಿಎಂಆರ್‌ಸಿಎಲ್ ಕಡೆಯಿಂದ ತಾಂತ್ರಿಕ ವಿಳಂಬದಿಂದಾಗಿ ಇದನ್ನು ಹಲವಾರು ಬಾರಿ ಮುಂದೂಡಲಾಗಿದೆ.

ಏತನ್ಮಧ್ಯೆ, ಕಳೆದ ವರ್ಷ (ಜೂನ್ 14) ರಂದು ಹಿಮ್ಮುಖ ದಿಕ್ಕಿನಲ್ಲಿ ತೆರೆಯಲಾದ 220 ಮೀಟರ್ ಉದ್ದವು ಈ ಪ್ರದೇಶ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಸಂಚಾರವನ್ನು ಗಣನೀಯವಾಗಿ ಸುಗಮಗೊಳಿಸಲು ಸಹಾಯ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೊಟ್ಟಿಗೆರೆ-ಕಾಳೇನ ಅಗ್ರಹಾರ ಮಾರ್ಗದಲ್ಲಿ (ಪಿಂಕ್ ಲೈನ್) ಎಂಜಿ ರಸ್ತೆ ಭೂಗತ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕಾಗಿ ರಸ್ತೆಯನ್ನು ಮುಚ್ಚಲಾಗಿತ್ತು. ಎಂಜಿ ರಸ್ತೆ ಮೆಟ್ರೋ ನಿಲ್ದಾಣವು ಪಿಂಕ್ ಲೈನ್ ಅನ್ನು ಪರ್ಪಲ್ ಲೈನ್‌ನೊಂದಿಗೆ ಸೇರಿಸುತ್ತದೆ. ಇದು ನಗರದ ದೂರದ ಮೂಲೆಗಳಿಂದ ನಾಗರಿಕರನ್ನು ಕೇಂದ್ರ ವ್ಯಾಪಾರ ಜಿಲ್ಲೆಗೆ (ಸಿಬಿಡಿ) ಸಂಪರ್ಕಿಸುತ್ತದೆ.

ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆ ಕಡೆಗೆ ವಾಹನ ಸಂಚಾರವನ್ನು ತೆರೆಯುವುದರಿಂದ ಎಂಜಿ ರಸ್ತೆ ಮತ್ತು ಅನಿಲ್ ಕುಂಬ್ಳೆ ವೃತ್ತದ ಬಳಿ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಿದೆ, ಇದು ಹಿಂದೆ ಜನದಟ್ಟಣೆಯಿಂದ ಕೂಡಿತ್ತು. ಹೊಸ ವರ್ಷದ ಮುನ್ನಾದಿನದಂದು ಸಂಚಾರವನ್ನು ನಿರ್ವಹಿಸಲು ಸಹಾಯ ಮಾಡಿತು" ಎಂದು ಸಂಚಾರ ಪಶ್ಚಿಮ ವಿಭಾಗದ ಉಪ ಆಯುಕ್ತ ಅನಿತಾ ಬಿ ಹದ್ದಣ್ಣನವರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

Kamaraj road(file Image)
ಮೆಟ್ರೋ ಕಾಮಗಾರಿ ಹಿನ್ನೆಲೆ: ಐದು ವರ್ಷಗಳ ನಂತರ ಸಂಚಾರಕ್ಕೆ ಕಾಮರಾಜ್ ರಸ್ತೆ ಮುಕ್ತ!

ಕಾಮರಾಜ್ ರಸ್ತೆಯನ್ನು ಎರಡೂ ಕಡೆ ತೆರೆಯುವುದರಿಂದ ಸಂಚಾರ ದಟ್ಟಣೆಯನ್ನು ನಿವಾರಿಸಲು ಸಹಾಯವಾಗುತ್ತದೆ. ರಸ್ತೆ ಸಂಚಾರಕ್ಕೆ ಮುಕ್ತವಾಗಲು ಇನ್ನೂ ಆರು ತಿಂಗಳುಗಳು ಬೇಕಾಗಬಹುದು ಎಂದು ಅವರು ಹೇಳಿದರು.

ನಿಲ್ದಾಣದಲ್ಲಿ ಬಹು ಕಾಮಗಾರಿಗಳನ್ನು ಕೈಗೊಳ್ಳಲು ಯುರೋಪಿಯನ್ ದೇಶಗಳಿಂದ ಬರಬೇಕಾಗಿದ್ದ ಉಪಕರಣಗಳು ಬಿಎಂಆರ್‌ಸಿಎಲ್‌ ಗುತ್ತಿಗೆದಾರರನ್ನು ತಲುಪುವಲ್ಲಿ ವಿಳಂಬವಾಯಿತು ಎಂದು ಬಿಎಂಆರ್‌ಸಿಎಲ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಭೂಗತ ನಿಲ್ದಾಣದಲ್ಲಿ ನಿರ್ಣಾಯಕ ಮೂಲಸೌಕರ್ಯವನ್ನು ರಚಿಸಲು ಈ ಉಪಕರಣಗಳನ್ನು ಲಂಬವಾಗಿ ನೆಲದಲ್ಲಿ 62 ಅಡಿ ಕೆಳಗೆ ಇಳಿಸಲಾಗುತ್ತದೆ ಎಂದು ಹಿರಿಯ ಮೆಟ್ರೋ ಅಧಿಕಾರಿಯೊಬ್ಬರು ಹೇಳಿದರು. ಪಿಂಕ್ ಲೈನ್‌ಗೆ ಪರಿಷ್ಕೃತ ಗಡುವು ಡಿಸೆಂಬರ್ 2026 ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com