
ಬೆಳಗಾವಿ : ಬೆಳಗಾವಿಯ ಖ್ಯಾತ ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ್, ಪುರುಷೋತ್ತಮ ದೊಡ್ಡಣ್ಣವರ್ ಒಡೆತನದ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ದೊಡ್ಡಣ್ಣವರ್ ಬ್ರದರ್ಸ್ ಗಣಿ, ಸಕ್ಕರೆ ಕಾರ್ಖಾನೆ ಮಾಲೀಕರಾಗಿದ್ದಾರೆ. ಗೋವಾದಿಂದ ಆಗಮಿಸಿರುವ ಐಟಿ ಅಧಿಕಾರಿಗಳು ಒಟ್ಟು 5 ತಂಡಗಳಾಗಿ ಸೋಮವಾರ ಮಧ್ಯರಾತ್ರಿ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಐಟಿ ಅಧಿಕಾರಿಗಳು ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಕಚೇರಿಗೆ ದೊಡ್ಡಣ್ಣವರ್ ಕುಟುಂಬಸ್ಥರನ್ನು ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ ಮನೆ, ಕಚೇರಿ ಮೇಲೆ, ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಉದ್ಯಮಿ ಅಜಿತ್ ಪಟೇಲ, ಗಣೇಶ ಪುರದಲ್ಲಿರುವ ಅಶೋಕ ಐರಾನ್ ಕಂಪನಿ ಮಾಲೀಕ ಅಶೋಕ ಹುಂಬರವಾಡಿ ಮನೆ ಮೇಲೂ ದಾಳಿ ನಡೆದಿದೆ.
ದೊಡ್ಡಣ್ಣವರ ಕುಟುಂಬದವರು ಎರಡು ಸಕ್ಕರೆ ಕಾರ್ಖಾನೆ, ಐರನ್ ಹಾಗೂ ಗ್ರೈನೆಟ್ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರ ಉತ್ಪನ್ನಗಳು ವಿದೇಶಗಳಿಗೂ ರಪ್ತಾಗುತ್ತವೆ. ಬೆಳಿಗ್ಗೆಯಿಂದಲೇ ಅಧಿಕಾರಿಗಳ ತಂಡ ದಾಖಲೆಗಳು, ಆಸ್ತಿಪಾಸ್ತಿ ಪರಿಶೀಲನೆ ಶುರು ಮಾಡಿದೆ.
Advertisement