ಚಳಿಗಾಲ ಮುಗಿಯುವ ಮುನ್ನವೇ ತಾಪಮಾನ ಏರಿಕೆ, ಸುಡುಬಿಸಿಲಿನ ಅನುಭವ: ಈ ಬಾರಿ ಹೇಗಿರುತ್ತೆ ಬೇಸಿಗೆ? IMD ತಜ್ಞರು ಹೇಳೋದೇನು?

ರಾಜ್ಯದ ಹೆಚ್ಚಿನ ಭಾಗಗಳಲ್ಲಿ ತಾಪಮಾನವು ಏರಿಕೆಯಾಗಲು ಪ್ರಾರಂಭಿಸಿದೆ, ಪಾದರಸದ ಮಟ್ಟವು ಸಾಮಾನ್ಯಕ್ಕಿಂತ 1-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದು ಬೇಸಿಗೆಯಂತೆ ಭಾಸವಾಗುತ್ತಿದೆ, ಆದರೆ ಬೇಸಿಗೆ ಅಲ್ಲ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಜನವರಿ ತಿಂಗಳು ಅಂತ್ಯವಾಗುತ್ತಿದೆ, ಚಳಿಗಾಲ ಇನ್ನೂ ಮುಗಿದಿಲ್ಲ, ಆಗಲೇ ಜನರಿಗೆ ಬೇಸಿಗೆಯ ಅನುಭವವಾಗುತ್ತಿದೆ. ಮನೆಯಿಂದ ಹೊರಗೆ ಹೆಜ್ಜೆ ಹಾಕಿದರೆ ಬೇಸಿಗೆಯ ಬಿಸಿಲು ಮತ್ತು ಒಣ ಹವಾಮಾನದ ಅನುಭವವಾಗುತ್ತಿದೆ.

ರಾಜ್ಯದ ಹೆಚ್ಚಿನ ಭಾಗಗಳಲ್ಲಿ ತಾಪಮಾನವು ಏರಿಕೆಯಾಗಲು ಪ್ರಾರಂಭಿಸಿದೆ, ಪಾದರಸದ ಮಟ್ಟವು ಸಾಮಾನ್ಯಕ್ಕಿಂತ 1-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದು ಬೇಸಿಗೆಯಂತೆ ಭಾಸವಾಗುತ್ತಿದೆ, ಆದರೆ ಬೇಸಿಗೆ ಅಲ್ಲ. ಇದನ್ನುನೋಡುತ್ತಿದ್ದರೇ ಈ ವರ್ಷ ಬೇಸಿಗೆ ಕಠಿಣವಾಗಿರುತ್ತದೆ ಮತ್ತು ಮೊದಲೇ ಬರುತ್ತದೆ ಎಂದು ಊಹಿಸಬಹುದು ಎಂದು IMD ಅಧಿಕಾರಿಗಳು ತಿಳಿಸಿದ್ದಾರೆ.

IMD ದತ್ತಾಂಶದ ಪ್ರಕಾರ, ಕಾರವಾರ ಸೋಮವಾರ ಗರಿಷ್ಠ ಗರಿಷ್ಠ ತಾಪಮಾನ 35.8 ಡಿಗ್ರಿ ಸೆಲ್ಸಿಯಸ್ ದಾಖಲಿಸಿದೆ, ಕಲಬುರ್ಗಿಯಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 2.3 ಡಿಗ್ರಿ ಸೆಲ್ಸಿಯಸ್), ನಂತರ ಪಣಂಬೂರು ಮತ್ತು ಹೊನ್ನಾವರದಲ್ಲಿ ಕ್ರಮವಾಗಿ 34.8 ಮತ್ತು 34.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಬೆಂಗಳೂರು ನಗರದಲ್ಲಿ ಗರಿಷ್ಠ 30.4 ಡಿಗ್ರಿ ಸೆಲ್ಸಿಯಸ್, ಸಾಮಾನ್ಯಕ್ಕಿಂತ 1.4 ಡಿಗ್ರಿ ಸೆಲ್ಸಿಯಸ್ ಹೆಚ್ಚು ದಾಖಲಾಗಿದೆ. ಮೈಸೂರು 31 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗ 33.3 ಡಿಗ್ರಿ ಸೆಲ್ಸಿಯಸ್, ಚಾಮರಾಜನಗರ 31.2 ಡಿಗ್ರಿ ಸೆಲ್ಸಿಯಸ್ ಮತ್ತು ಗದಗ 32.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Representational image
ಬೆಂಗಳೂರು ಸೇರಿ ರಾಜ್ಯದ ಹಲವೆಡೆ ತಾಪಮಾನ ಏರಿಕೆ!

ಈ ಬಾರಿ, ಉತ್ತರ ದಿಕ್ಕಿನ ಗಾಳಿ ಹೆಚ್ಚಾಗಿ ಇರಲಿಲ್ಲ. ಹೆಚ್ಚಿನ ಸಮಯ, ಪೂರ್ವ ಮತ್ತು ಪಶ್ಚಿಮ ದಿಕ್ಕಿನ ಗಾಳಿಯು ರಾಜ್ಯದಾದ್ಯಂತ ಬೀಸುತ್ತದೆ. ಮುಂದಿನ ನಾಲ್ಕು ದಿನಗಳವರೆಗೆ ರಾಜ್ಯದಾದ್ಯಂತ ಗರಿಷ್ಠ ತಾಪಮಾನ ಏರಿಕೆ ಮುಂದುವರಿಯುತ್ತದೆ, ನಂತರ ಕರ್ನಾಟಕದ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಅವರು ಹೇಳಿದರು.

ಫೆಬ್ರವರಿ 1 ಮತ್ತು 2 ರಂದು ದಕ್ಷಿಣ ಕನ್ನಡ, ಮೈಸೂರು, ಮಂಡ್ಯ, ಬೆಂಗಳೂರು, ಚಾಮರಾಜನಗರ, ರಾಮನಗರ, ಉಡುಪಿ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಹಗುರ ಮಳೆಯಾಗುವ ಮುನ್ಸೂಚನೆಯನ್ನು ಐಎಂಡಿ ನೀಡಿದೆ. ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ ಎಂದು ಪಾಟೀಲ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com