
ಗದಗ: ದಲಿತ ಸಮುದಾಯಕ್ಕೆ ಸೇರಿದ ಯುವಕನನ್ನು ಮದುವೆಯಾಗಿದ್ದಕ್ಕೆ ಕೋಪಗೊಂಡು ಯುವ ದಂಪತಿಯನ್ನು ಮರ್ಯಾದಾ ಹತ್ಯೆ ಮಾಡಿದ ನಾಲ್ವರಿಗೆ ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಸಂತ್ರಸ್ತರಾದ ರಮೇಶ ಮಾದರ ಮತ್ತು ಗಂಗಮ್ಮ ಮಾದರ ಇಬ್ಬರೂ ಗಜೇಂದ್ರಗಡ ತಾಲ್ಲೂಕಿನ ಲಕ್ಕಲಕಟ್ಟಿ ಗ್ರಾಮದ ನಿವಾಸಿಗಳು.
ಶಿವಪ್ಪ ರಾಠೋಡ್, ರವಿಕುಮಾರ ರಾಠೋಡ್, ರಮೇಶ್ ರಾಠೋಡ್ ಮತ್ತು ಪರಶುರಾಮ ರಾಠೋಡ್ ಎಂಬುವವರನ್ನು ಅಪರಾಧಿಗಳೆಂದು ಷೋಷಿಸಿರುವ ನ್ಯಾಯಲಯ ಮರಣದಂಡನೆ ವಿಧಿಸಿದೆ. ಇವರೆಲ್ಲರೂ ಮೃತ ಗಂಗಮ್ಮ ಮಾದರ ಅವರ ಸಂಬಂಧಿಕರು.
ಇಬ್ಬರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದ ಗಂಗಮ್ಮನ ಸಂಬಂಧಿಕರು ಇಬ್ಬರ ಕೊಲೆ ಮಾಡಿದ್ದರು. ಇವರಿಬ್ಬರ ಇವರ ಪ್ರೇಮಕಥೆ ದುರಂತ ಅಂತ್ಯ ಕಂಡಿತ್ತು. ಘಟನೆ ಕುರಿತು ಗಜೇಂದ್ರಗಡ ಪೊಲೀಸರು ತನಿಖೆ ನಡೆಸಿದ್ದು, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ, ರಮೇಶ ಮಾದಾರ (29) ಮತ್ತು ಗಂಗಮ್ಮ (23) ಅವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು.
ಗಂಗಮ್ಮ ದಲಿತ ಸಮುದಾಯಕ್ಕೆ ಸೇರಿದ ರಮೇಶ್ ಎಂಬಾತನನ್ನು ಮದುವೆಯಾದ ನಂತರ ಸಹೋದರರು ಕೋಪಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದರು.
Advertisement