5 ಹುಲಿಗಳ ಸಾವಿಗೆ ಕಾರ್ಬೋಫ್ಯೂರಾನ್, ಫೋರೇಟ್ ಕಾರಣ: FSL ವರದಿ

ಮೃತ ಹುಲಿ ಮತ್ತು ಅದರ ನಾಲ್ಕು ಮರಿಗಳ ಜೀರ್ಣಾಂಗ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೋರೇಟ್ ಮತ್ತು ಕಾರ್ಬೋಫ್ಯೂರಾನ್ ಕಂಡುಬಂದಿದೆ ಎಂದು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ತಿಳಿಸಿದೆ.
Carcass of one tiger and four tiger cubs found dead in a suspected manner at MM hills wildlife division on Thursday.
ಹುಲಿಯ ಮೃತದೇಹ
Updated on

ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟಗಳ ವನ್ಯಜೀವಿ ಅಭಯಾರಣ್ಯ (ಎಂಎಂ ಹಿಲ್ಸ್)ದಲ್ಲಿ ಮೃತಪಟ್ಟ 5 ಹುಲಿಗಳ ಸಾವಿಗೆ ಕಾರ್ಬೋಫ್ಯೂರಾನ್, ಫೋರೇಟ್ ಕಾರಣ ಎಂದು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿ ತಿಳಿಸಿದೆ.

ಮೃತ ಹುಲಿ ಮತ್ತು ಅದರ ನಾಲ್ಕು ಮರಿಗಳ ಜೀರ್ಣಾಂಗ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೋರೇಟ್ ಮತ್ತು ಕಾರ್ಬೋಫ್ಯೂರಾನ್ ಕಂಡುಬಂದಿದೆ ಎಂದು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ತಿಳಿಸಿದೆ.

ಹುಲಿಗಳ ಮೃತದೇಹದಲ್ಲಿ 20 ಮೈಕ್ರೋಗ್ರಾಂಗಳಷ್ಟು ಕೀಟನಾಶಕ ಇರುವುದು ಕಂಡು ಬಂದಿದೆ. ಹುಲಿಗಳ ಹತ್ಯೆಗೆ ಹೆಚ್ಚಿನ ಪ್ರಮಾಣದ ರಾಸಾಯನಿಕ ಬಳಸಲಾಗಿದೆ ಎಂದು ಪಶುವೈದ್ಯರು ಮತ್ತು ತಜ್ಞರು ಹೇಳಿದ್ದಾರೆ.

ಫೋರೇಟ್ ಬಳಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು, ಕಾರ್ಬೋಫ್ಯೂರಾನ್ ಬಳಕೆಯನ್ನು ನಿಯಂತ್ರಿಸಲಾಗಿದೆ. ಅಲ್ಪ ಪ್ರಮಾಣದ ಕಾರ್ಬೋಫ್ಯೂರಾನ್ ಕೂಡ ಒಂದೆರಡು ಗಂಟೆಗಳಲ್ಲಿ ಪ್ರಾಣಿಗಳು ಉಸಿರು ಚೆಲ್ಲುವಂತೆ ಮಾಡುತ್ತದೆ. ಕಾರ್ಬೋಫ್ಯೂರಾನ್ ಬಣ್ಣರಹಿತ, ವಾಸನೆಯಿಲ್ಲದ ಮತ್ತು ರುಚಿಯಿಲ್ಲದ ವಸ್ತುವಾಗಿದೆ. ಹೀಗಾಗಿ, ಇದನ್ನು ಅಪರಾಧ ಕೃತ್ಯಗಳಲ್ಲಿ ಬಳಸಲಾಗುತ್ತದೆ.

ಇಂತಹ ಪ್ರಕರಣ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದರೂ ಊಟಿ ಮತ್ತು ಮಧ್ಯಪ್ರದೇಶದಲ್ಲಿ ಹುಲಿಗಳನ್ನು ಕೊಲ್ಲಲು ಈ ರಾಸಾಯನಿಕ ವಸ್ತುವನ್ನು ಬಳಸಲಾಗುತ್ತಿತ್ತು. ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಚಿರತೆ ಸಾವು ವರದಿಯಾಗಿತ್ತು. ಚಿರತೆಗೆ ವಿಷ ನೀಡಲು ಆರ್ಗಾನೊ ಫಾಸ್ಫರಸ್ ಸಂಯುಕ್ತವನ್ನು ಬಳಸಲಾಗಿತ್ತು. ಇನ್ನು ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಹುಲಿ ಸಾವಿನ ಪ್ರಕರಣಕ್ಕೆ ಬಳಸಿದ್ದ ರಾಸಾಯನಿಕ ವಿಶ್ಲೇಷಣಾ ವರದಿಗಳು ಸ್ಪಷ್ಟವಾಗಿ ತಿಳಿದುಬಂದಿರಲಿಲ್ಲ. ಏಕೆಂದರೆ ಮೃತದೇಹವು 7-10 ದಿನಗಳಿಗಿಂತ ಹಳೆಯದಾಗಿತ್ತು ಎಂದು FLS ಮೂಲಗಳು ತಿಳಿಸಿವೆ.

Carcass of one tiger and four tiger cubs found dead in a suspected manner at MM hills wildlife division on Thursday.
5 ಹುಲಿಗಳ ಸಾವು: ಡಿಸಿಎಫ್ ಸೇರಿ ನಾಲ್ವರು ಅಧಿಕಾರಿಗಳ ಅಮಾನತಿಗೆ ಈಶ್ವರ್ ಖಂಡ್ರೆ ಶಿಫಾರಸು

ಪ್ರಸ್ತುತ ಪತ್ತೆಯಾಗಿರುವ ರಾಸಾಯನಿಕವನ್ನು ದೃಢಪಡಿಸುವುದಕ್ಕೂ ಮುನ್ನ ಪಶುವೈದ್ಯರು ಮತ್ತು ತಜ್ಞರು 500 ರಾಸಾಯನಿಕ ವಸ್ತುಗಳನ್ನು ವಿಶ್ಲೇಷಣೆ ಮಾಡಿದ್ದಾರೆ. ಹುಲಿಗಳ ಮೃತಹಗಳಲ್ಲಿ ಹಸುವಿನ ಮಾಂಸ ಹೊರತುಪಡಿಸಿ ಬೇರೆ ಯಾವುದೇ ಮಾಂಸ ಕಂಡು ಬಂದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಪ್ರಕರಣ ಬೆನ್ನಲ್ಲೇ ಎಂಎಂ ಹಿಲ್ಸ್ ಮತ್ತು ಚಾಮರಾಜನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳೆದ ಕೃಷಿ ಬೆಳೆಗಳ ಮಾದರಿಗಳನ್ನೂ ಕೂಡ ಈಗ ಪರಿಶೀಲಿಸಲಾಗುತ್ತಿದ್ದು, ಕೃಷಿ ಇಲಾಖೆಯೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಷವುಣಿಸುವ ಪ್ರಕರಣಗಳು ಸಾಮಾನ್ಯವಲ್ಲ, ಹೀಗಾಗಿ, ಪ್ರಸ್ತುತ ಪ್ರಕರಣ ಕಳವಳಕಾರಿಯಾಗಿದೆ. ರೈತರು ಬಳಸುತ್ತಿರುವ ರಾಸಾಯನಿಕಗಳು, ಕೀಟನಾಶಕಗಳನ್ನು ಸರ್ಕಾರ ಪರಿಶೀಲಿಸಬೇಕಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ರೈತರು ಖರೀದಿಸುತ್ತಿರುವ ಮತ್ತು ಬಳಸುತ್ತಿರುವ ರಸಾಯನಿಕ ವಸ್ತುಗಳ ಪ್ರಮಾಣವನ್ನು ನಾವು ಪರಿಶೀಲಿಸಲು ಸಾಧ್ಯವಿಲ್ಲ. ಹೀಗಾಗಿ ಅವಶ್ಯಕತೆಗೆ ಅನುಗುಣವಾಗಿ ಕೀಟನಾಶಕಗಳನ್ನು ಖರೀದಿ ಮಾಡುವಂತೆ ಸಲಹೆ ನೀಡುತ್ತೇವೆ. ಪ್ರಸ್ತುತ ಬೆಳಕಿಗೆ ಬಂದಿರುವ ಪ್ರಕರಣ ಕಳವಳಕಾರಿಯಾಗಿದ್ದು, ಎಲ್ಲಾ ಕೀಟನಾಶಕಗಳನ್ನು ಅಧಿಕೃತ ವಿತರಕರ ಮೂಲಕ ಮಾತ್ರ ಮಾರಾಟ ಮಾಡಲಾಗುವುದರಿಂದ ಇದನ್ನು ಪರಿಶೀಲಿಸಲಾಗುತ್ತದೆ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಡುವೆ ನಿಷೇಧಿತ ಮತ್ತು ನಿಯಂತ್ರಿತ ವಸ್ತುಗಳನ್ನು ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ್ ಬಿ ಖಂಡ್ರೆ ಅವರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com