ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣ: ಪೊಲೀಸರಿಂದ ಗೌಪ್ಯ ಸಾಕ್ಷಿಗಳ ಹೇಳಿಕೆ ಸೋರಿಕೆ; ಸುಪ್ರೀಂ ಕೋರ್ಟ್ ಗೆ ಅರ್ಜಿ

ಅರ್ಜಿಯಲ್ಲಿ ಧರ್ಮಸ್ಥಳದಲ್ಲಿ ಹಲವಾರು ಶವಗಳ ಅಂತ್ಯಕ್ರಿಯೆ ಪ್ರಕರಣದ ತನಿಖೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು ರಾಜಿ ಮಾಡಿಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
Dharmasthala mass burial case
ಧರ್ಮಸ್ಥಳ ಪ್ರಕರಣದ ದೂರುದಾರ
Updated on

ಮಂಗಳೂರು: ಧರ್ಮಸ್ಥಳ ದೇವಸ್ಥಾನದ ಮಾಜಿ ಪೌರ ಕಾರ್ಮಿಕರ ಪರವಾಗಿ ವಕೀಲರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವಗಳ ಅಂತ್ಯಕ್ರಿಯೆ ಪ್ರಕರಣದ ತನಿಖೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು ರಾಜಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಸೂಕ್ಷ್ಮ ಮತ್ತು ನಿರ್ಣಾಯಕ ಪ್ರಕರಣದ ದೂರುದಾರ-ಸಾಕ್ಷಿಯಾಗಿರುವ ತಮ್ಮ ಕಕ್ಷಿದಾರ 'ಶ್ರೀ ವಿ' ಅವರು ಯೂಟ್ಯೂಬ್‌ನಲ್ಲಿ ಲಭ್ಯವಿರುವ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅದರಲ್ಲಿ ಜುಲೈ 14 ರಂದು ದಾಖಲಿಸಲಾದ ಗೌಪ್ಯ ಹೇಳಿಕೆಯಲ್ಲಿ ಪೊಲೀಸರಿಗೆ ಒದಗಿಸಿದ ನಿರ್ದಿಷ್ಟ ಮತ್ತು ವಿವರವಾದ ಮಾಹಿತಿ ಇದೆ. "ಈ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗೆ ನಮ್ಮ ಕಕ್ಷಿದಾರರಿಗೂ, ಪ್ರಕರಣದ ವಿವರಗಳಿಗೂ ಅಥವಾ ಶ್ರೀ ವಿ ಅವರನ್ನು ಪ್ರತಿನಿಧಿಸುವ ಕಾನೂನು ತಂಡಕ್ಕೂ ಯಾವುದೇ ಸಂಬಂಧವಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸರು ಈ ಮಾಹಿತಿಯನ್ನು ತನಗೆ ನೀಡಿದ್ದಾರೆ ಎಂದು ವಿಡಿಯೊದಲ್ಲಿರುವ ವ್ಯಕ್ತಿಯು ಸ್ಪಷ್ಟವಾಗಿ ಹೇಳಿಕೊಳ್ಳುತ್ತಾರೆ.

ತನಿಖಾ ಅಧಿಕಾರಿ ಅಥವಾ ಪೊಲೀಸ್ ಇಲಾಖೆಯೊಳಗಿನ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಸಂಬಂಧವಿಲ್ಲದ ಹೊರಗಿನವರಿಗೆ ಈ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆ ಎಂದು ನಮ್ಮ ಕಕ್ಷಿದಾರರು ಅಭಿಪ್ರಾಯಪಟ್ಟಿದ್ದಾರೆ. ಈ ಕೃತ್ಯವು ಸಂಪೂರ್ಣ ತನಿಖೆಯನ್ನು ಗಂಭೀರವಾಗಿ ದುರ್ಬಲಗೊಳಿಸುತ್ತದೆ. ನ್ಯಾಯಯುತ, ನಿಷ್ಪಕ್ಷಪಾತ ಮತ್ತು ಸುರಕ್ಷಿತ ಪ್ರಕ್ರಿಯೆಗೆ ಅಗತ್ಯವಾದ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ. ತನಿಖಾ ಅಧಿಕಾರಿ ಮತ್ತು ಅವರು ವರದಿ ಮಾಡುತ್ತಿರುವ ವ್ಯಕ್ತಿಗಳು ತನಿಖೆಯಲ್ಲಿ ರಾಜಿ ಮಾಡಿಕೊಂಡಂತೆ ತೋರುತ್ತದೆ. ಈ ನಿರ್ದಿಷ್ಟ ವಿಡಿಯೋವನ್ನು 11 ಗಂಟೆಗಳಿಗೂ ಹೆಚ್ಚು ಕಾಲ ಪ್ರಸಾರ ಮಾಡಲಾಗಿದ್ದರೂ, ವ್ಯಾಪಕವಾಗಿ ವೀಕ್ಷಿಸಲಾಗಿದ್ದರೂ, ಈ ಆಂತರಿಕ ಸೋರಿಕೆಯನ್ನು ತನಿಖೆ ಮಾಡಲು ಪೊಲೀಸ್ ಇಲಾಖೆ ಯಾವುದೇ ಸ್ಪಷ್ಟ ಕ್ರಮಗಳನ್ನು ತೆಗೆದುಕೊಂಡಿಲ್ಲ" ಎಂದು ಅವರು ಹೇಳಿದ್ದಾರೆ.

Dharmasthala mass burial case
ಧರ್ಮಸ್ಥಳ ಪ್ರಕರಣದ ದೂರುದಾರ 'ನಾಪತ್ತೆ': 'ಎಲ್ಲೂ ಓಡಿ ಹೋಗಿಲ್ಲ'- ಪೊಲೀಸರ ಆರೋಪಕ್ಕೆ ವಕೀಲರ ಸ್ಪಷ್ಟನೆ!

ಔಪಚಾರಿಕವಾಗಿ ಅನುಮೋದಿಸಲಾದ ಸಾಕ್ಷಿಯ ರಕ್ಷಣೆಯನ್ನು ಏಕಪಕ್ಷೀಯವಾಗಿ ಹಿಂಪಡೆಯಬಹುದು ಎಂಬ ಸೂಚನೆಗಳನ್ನು ಪೊಲೀಸರು ನೀಡುತ್ತಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.

ಈ ಬೆಳವಣಿಗೆಗಳು ಪ್ರಸ್ತುತ ನಡೆಯುತ್ತಿರುವ ತನಿಖೆಯ ನಿಷ್ಪಕ್ಷಪಾತತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ ಎಂದು ವಕೀಲರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com