Bengaluru Stampede: 'ದೂಷಿಸುವ ಸಮಯವಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ'; ವರದಿ ಕುರಿತು ಸಚಿವ ದಿನೇಶ್ ಗುಂಡೂರಾವ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 18ನೇ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಗೆದ್ದ ನಂತರ ಜೂನ್ 4 ರಂದು ಸಂಭವಿಸಿದ ಕಾಲ್ತುಳಿತದ ಬಗ್ಗೆ ವರದಿಯನ್ನು ಕರ್ನಾಟಕ ಸರ್ಕಾರ ಗುರುವಾರ ಹೈಕೋರ್ಟ್‌ಗೆ ಸಲ್ಲಿಸಿದೆ.
Dinesh GunduRao
ದಿನೇಶ್ ಗುಂಡೂರಾವ್
Updated on

ಬೆಂಗಳೂರು: ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ 11 ಜೀವಗಳು ಸಾವಿಗೀಡಾಗಿ, 50ಕ್ಕೂ ಹೆಚ್ಚು ಜನರು ಗಾಯಗೊಂಡ ಕಾಲ್ತುಳಿತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಗುರುವಾರ ಘೋಷಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 18ನೇ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಗೆದ್ದ ನಂತರ ಜೂನ್ 4 ರಂದು ಸಂಭವಿಸಿದ ಕಾಲ್ತುಳಿತದ ಬಗ್ಗೆ ವರದಿಯನ್ನು ಕರ್ನಾಟಕ ಸರ್ಕಾರ ಗುರುವಾರ ಹೈಕೋರ್ಟ್‌ಗೆ ಸಲ್ಲಿಸಿದೆ.

'ಇದು ಇಲ್ಲಿ ದೂಷಣೆ ಮಾಡುತ್ತಾ ಕೂರುವ ಸಮಯವಲ್ಲ. ಪರಿಸ್ಥಿತಿಯನ್ನು ತಪ್ಪಾಗಿ ನಿರ್ವಹಿಸಿದ್ದರೆ, ನಾವು ಕ್ರಮ ಕೈಗೊಳ್ಳುತ್ತೇವೆ... ಇಷ್ಟೊಂದು ಜನರು ಸಾವಿಗೀಡಾಗಿದ್ದರಿಂದ ಯಾವುದೇ ತೀರ್ಮಾನಕ್ಕೆ ಹೋಗುವ ಮೊದಲು ನಾವು ವರದಿಗಾಗಿ ಕಾಯಬೇಕಾಗಿದೆ' ಎಂದು ಹೇಳಿದರು.

ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಗಂಭೀರ ಲೋಪಗಳನ್ನು ಎತ್ತಿ ತೋರಿಸಿದೆ.

ರಾಜ್ಯ ಸರ್ಕಾರದ ಪ್ರಕಾರ, ಕಾರ್ಯಕ್ರಮ ಆಯೋಜಕರಿಂದ (ಡಿಎನ್‌ಎ) ಯಾವುದೇ ಔಪಚಾರಿಕ ಅನುಮತಿಯನ್ನು ಪಡೆದಿಲ್ಲ ಬದಲಿಗೆ ಜೂನ್ 3 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವ ಮೆರವಣಿಗೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ. ಹೀಗಾಗಿಯೇ, ಪೊಲೀಸರು ಅನುಮತಿ ನಿರಾಕರಿಸಿದ್ದರು. 2009 ರ ನಗರ ಆದೇಶದ ಪ್ರಕಾರ ಔಪಚಾರಿಕ ಅನುಮೋದನೆ ಪಡೆಯಬೇಕಿತ್ತು.

Dinesh GunduRao
Bengaluru Stampede: 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತಕ್ಕೆ RCB, DNA, KSCA ಕಾರಣ: ಸರ್ಕಾರದ ವರದಿಯಲ್ಲಿ Virat Kohli ಹೆಸರೂ ಉಲ್ಲೇಖ!

ಪೊಲೀಸರ ನಿರಾಕರಣೆಯ ಹೊರತಾಗಿಯೂ, ಆರ್‌ಸಿಬಿ ಸಾರ್ವಜನಿಕವಾಗಿ ಕಾರ್ಯಕ್ರಮ ನಡೆಸಲು ಮುಂದಾಯಿತು. ಜೂನ್ 4 ರಂದು, ಅವರು ಸಾಮಾಜಿಕ ಮಾಧ್ಯಮದಲ್ಲಿ ಮುಕ್ತ ಆಹ್ವಾನಗಳನ್ನು ಹಂಚಿಕೊಂಡರು. ಅದರಲ್ಲಿ ವಿರಾಟ್ ಕೊಹ್ಲಿ ಅವರ ವಿಡಿಯೋ ಮನವಿಯೂ ಸೇರಿತ್ತು. ಇದು ಅಭಿಮಾನಿಗಳನ್ನು ಆಚರಣೆಗೆ ಹಾಜರಾಗಲು ಪ್ರೋತ್ಸಾಹಿಸಿತು.

ನಿರೀಕ್ಷೆಗೂ ಮೀರಿದ ಬೃಹತ್ ಜನಸಂದಣಿಯಿಂದಾಗಿ ನಿರ್ವಹಣೆ ಕಷ್ಟವಾಯಿತು. ಕಾರ್ಯಕ್ರಮದ ದಿನದಂದು ಮಧ್ಯಾಹ್ನ 3.14ಕ್ಕೆ ಜನದಟ್ಟಣೆ ಹೆಚ್ಚಿದ್ದರಿಂದ, ಕ್ರೀಡಾಂಗಣಕ್ಕೆ ಪ್ರವೇಶಿಸಲು ಪಾಸ್‌ಗಳು ಬೇಕು ಎಂದು ಸಂಘಟಕರು ಹಠಾತ್ತನೆ ಘೋಷಿಸಿದರು. ಈ ಮೊದಲು ಉಚಿತ ಪ್ರವೇಶ ಎಂದಿದ್ದರು. ಇದು ಗೊಂದಲ ಮತ್ತು ಭೀತಿಯನ್ನು ಉಂಟುಮಾಡಿತು ಎಂದು ಹೇಳಲಾಗಿದೆ.

Dinesh GunduRao
Bengaluru Stampede: ಪೊಲೀಸ್ ಅಧಿಕಾರಿಗಳು 'RCB ಸೇವಕರಂತೆ' ವರ್ತಿಸಿದ್ದರು; ಹೈಕೋರ್ಟ್ ಗೆ ಕರ್ನಾಟಕ ಸರ್ಕಾರ

ಆರ್‌ಸಿಬಿ, ಡಿಎನ್‌ಎ ಮತ್ತು ಕೆಎಸ್‌ಸಿಎ ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸುವಲ್ಲಿ ವಿಫಲವಾಗಿವೆ. ಪ್ರವೇಶ ದ್ವಾರಗಳಲ್ಲಿ ಅಸಮರ್ಪಕ ನಿರ್ವಹಣೆ ಮತ್ತು ಗೇಟ್ ತೆರೆಯುವಿಕೆ ವಿಳಂಬವಾದ ಕಾರಣ ಕಾಲ್ತುಳಿತ ಸಂಭವಿಸಿ, ಏಳು ಪೊಲೀಸ್ ಸಿಬ್ಬಂದಿ ಗಾಯಗೊಂಡರು. ಮತ್ತಷ್ಟು ಅಶಾಂತಿಯನ್ನು ತಡೆಗಟ್ಟಲು, ಪೊಲೀಸರು ನಿಯಂತ್ರಿತ ಪರಿಸ್ಥಿತಿಗಳಲ್ಲಿ ಕಾರ್ಯಕ್ರಮದ ನಿರ್ಬಂಧಿತ ಆವೃತ್ತಿಯನ್ನು ಮುಂದುವರಿಸಲು ಅವಕಾಶ ನೀಡಿದರು ಎನ್ನಲಾಗಿದೆ.

18 ವರ್ಷಗಳ ಬಳಿಕ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವವನ್ನು ವೀಕ್ಷಿಸಲು ಸುಮಾರು 3 ಲಕ್ಷ ಜನರು ಸೇರಿದ್ದರು. ಈ ಘಟನೆಯ ತನಿಖೆಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗವನ್ನು ರಚಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com